ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ethnic Fashion 2026: ರೇಷ್ಮೆಯ ಉದ್ದ ಲಂಗಕ್ಕೂ ಜತೆಯಾದ ಕಾರ್ಸೆಟ್ ಬ್ಲೌಸ್‌

ವೆಸ್ಟರ್ನ್‌ ಕಾನ್ಸೆಪ್ಟ್‌ನಲ್ಲಿ ಟ್ರೆಂಡಿಯಾಗಿರುವ ಕಾರ್ಸೆಟ್‌ ಬ್ಲೌಸ್‌ಗಳು ಇದೀಗ ನಮ್ಮ ಟ್ರೆಡಿಷನಲ್‌ ರೇಷ್ಮೆಯ ಉದ್ದ ಲಂಗದ ಜೊತೆ ಕಾಣಿಸಿಕೊಂಡಿವೆ. ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಟ್ರೆಡಿಷನಲ್‌ ಔಟ್‌ಫಿಟ್‌ ಜತೆ ಕಾರ್ಸೆಟ್‌ ಡಿಸೈನ್‌ನಲ್ಲಿ ಬ್ಲೌಸ್‌ ಡಿಸೈನ್‌ ಮಾಡಿಸಿ ಧರಿಸಿ, ಪ್ರದರ್ಶಿಸಿರುವುದು ಇದೀಗ ಪಾಪುಲರ್‌ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಚಿತ್ರಗಳು: ಜಸ್ನ್ಯಾ ಕೆ. ಜಯದೀಶ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾರ್ಸೆಟ್‌ ಬ್ಲೌಸ್‌ಗಳು ಇದೀಗ ಟ್ರೆಡಿಷನಲ್‌ ಲುಕ್‌ ನೀಡುವ ರೇಷ್ಮೆಯ ಉದ್ದ ಲಂಗಕ್ಕೆ ಜೋಡಿಯಾಗಿವೆ. ಹೌದು, ಮೊದಲಿನಿಂದಲೂ ವೆಸ್ಟರ್ನ್‌ ಕಾನ್ಸೆಪ್ಟ್‌ನಲ್ಲಿ ಟ್ರೆಂಡಿಯಾಗಿರುವ ಕಾರ್ಸೆಟ್‌ ಶೈಲಿಯ ಟಾಪ್‌ ಅಥವಾ ಬ್ಲೌಸ್‌ಗಳು ಇದೀಗ ನಮ್ಮ ಟ್ರೆಡಿಷನಲ್‌ ರೇಷ್ಮೆಯ ಉದ್ದ ಲಂಗದ ಜತೆ ಕಾಣಿಸಿಕೊಂಡಿವೆ. ಅದರಲ್ಲೂ ಈ ಜನರೇಷನ್‌ನ ಟೀನೇಜ್‌ ಅಥವಾ ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

Long silk skirts

ಜಸ್ಯ್ನಾ ಕಾರ್ಸೆಟ್‌ ಬ್ಲೌಸ್‌

ಅಂದಹಾಗೆ, ನಟಿ ಈ ಶೈಲಿಯ ಬ್ಲೌಸನ್ನು ಪ್ರಯೋಗ ಮಾಡಿ ಫೋಟೋ ಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದು ಫ್ಯಾಷನೆಬಲ್‌ ನಟಿ ಜಸ್ನ್ಯಾ ಕೆ. ಜಯದೀಶ್. ಟ್ರೆಡಿಷನಲ್‌ ಔಟ್‌ಫಿಟ್‌ ಜತೆ ಕಾರ್ಸೆಟ್‌ ಡಿಸೈನ್‌ನಲ್ಲಿ ಬ್ಲೌಸ್‌ ಡಿಸೈನ್‌ ಮಾಡಿಸಿ ಧರಿಸಿ, ಪ್ರದರ್ಶಿಸಿರುವುದು ಇದೀಗ ಪಾಪುಲರ್‌ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ಮಿಂಚು.

Ethnic Fashion

ಉದ್ದ-ಲಂಗದ ಕಾರ್ಸೆಟ್‌ ಬ್ಲೌಸ್‌

ರೇಷ್ಮೆಯ ಉದ್ದ ಲಂಗ ನಮ್ಮ ಲೋಕಲ್‌ ಟ್ರೆಡಿಷನಲ್‌ ಔಟ್‌ಫಿಟ್‌ ಎಂದರೂ ತಪ್ಪಾಗಲಾರದು. ಅದರಲ್ಲೂ ಈ ಬ್ಲೌಸ್‌ ವೆಸ್ಟೆರ್ನ್‌ ಕಾನ್ಸೆಪ್ಟ್‌ನಲ್ಲಿ ಸಖತ್‌ ಟ್ರೆಂಡಿಯಾಗಿರುವ ಕಾರ್ಸೆಟ್‌ ಸ್ಟಿಚ್ಚಿಂಗ್‌ ಹಾಗೂ ವಿನ್ಯಾಸದ ಶೈಲಿ ಹೊಂದಿದೆ. ನೋಡಲು ಟ್ರೆಡಿಷನಲ್‌ ಕಾರ್ಸೆಟ್‌ ಲುಕ್‌ ನೀಡಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು.

Corset blouses

ಉದ್ದ-ಲಂಗಕ್ಕೆ ನೀವು ಕಾರ್ಸೆಟ್‌ ಬ್ಲೌಸ್‌ ಮ್ಯಾಚ್‌ ಮಾಡುವುದಾದಲ್ಲಿ ಹೀಗೆ ಮಾಡಿ

  • ಟ್ರೆಡಿಷನಲ್‌ ಲುಕ್‌ನಲ್ಲಿ ಕಾರ್ಸೆಟ್‌ ವಿನ್ಯಾಸದಲ್ಲಿ ಹೊಲೆಸಿ.
  • ಫಿಟ್ಟಿಂಗ್‌ ಇರುವುದರಿಂದ ಸ್ಲಿಮ್‌ ಆಗಿರುವವರಿಗೆ ಈ ಡಿಸೈನ್‌ ಬೆಸ್ಟ್.
  • ಟಮ್ಮಿ ಪಾರ್ಟ್ ಕಾಣಿಸುವುದರಿಂದ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಧರಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author