ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season 2025: ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಜ್ಯುವೆಲರಿಗಳು

Festive Season 2025: ಕೈಗೆಟಕುವ ಬೆಲೆಯಲ್ಲಿ ಎಥ್ನಿಕ್‌ ಲುಕ್‌ ನೀಡುವ ಇಮಿಟೇಷನ್‌ ಜ್ಯುವೆಲರಿಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಲಕ್ಷಗಟ್ಟಲೆ ಖರ್ಚು ಮಾಡದೇ ಕೈಗೆಟಕುವ ಬೆಲೆಯಲ್ಲಿ ಕೊಳ್ಳಬಹುದಾದ ಈ ಇಮಿಟೇಷನ್‌ ಜ್ಯುವೆಲರಿ ಪ್ರಿಯರ ಮನ ಗೆದ್ದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಆಯ್ಕೆ ಹೇಗೆ? ಇಲ್ಲಿದೆ ವಿವರ.

ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಜ್ಯುವೆಲರಿಗಳು

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು‌

ಬಂಗಾರದ ಒಡವೆಗಳನ್ನು ನಾಚಿಸುವ ಇಮಿಟೇಷನ್ ಜ್ಯುವೆಲರಿಗಳು ಈ ಫೆಸ್ಟೀವ್ ಸೀಸನ್‌ನಲ್ಲಿ (Festive Season 2025) ಟ್ರೆಂಡಿಯಾಗಿವೆ. ಇದಕ್ಕೆ ಕಾರಣವೂ ಇದೆ. ಆಯಾ ಸೀರೆ ಹಾಗೂ ಉಡುಪಿಗೆ ತಕ್ಕಂತೆ ಧರಿಸಬಹುದಾಗಿದ್ದು, ಲಕ್ಷಗಟ್ಟಲೆ ಖರ್ಚು ಮಾಡದೇ ಕೈಗೆಟಕುವ ಬೆಲೆಯಲ್ಲಿ ಕೊಳ್ಳಬಹುದಾದ ಈ ಇಮಿಟೇಷನ್‌ ಜ್ಯುವೆಲರಿ ಪ್ರಿಯರ ಮನ ಗೆದ್ದಿವೆ. ನೋಡಲು ಸೇಮ್ ಟು ಸೇಮ್ ಬಂಗಾರದ ಆಭರಣಗಳಂತೆ ಕಾಣುವ ಇಮಿಟೇಷನ್‌ ಜ್ಯುವೆಲರಿಗಳು ಥೇಟ್‌ ಬಂಗಾರದ ಒಡವೆಗಳಂತೆಯೇ ಕಾಣುತ್ತವೆ. ಲಕ್ಷಗಟ್ಟಲೇ ಸುರಿದು ಕೊಂಡು ಧರಿಸಲಾಗದಿದ್ದಲ್ಲಿ, ಇವನ್ನು ಧರಿಸಿ ಸಂತೋಷ ಪಡಬಹುದು. ಸೀರೆಗಳಿಗೆ ಹಾಗೂ ಸಾಂಪ್ರದಾಯಿಕ ಉಡುಪುಗಳಿಗೆ ಮ್ಯಾಚ್ ಆಗುವ ಇವು ನೋಡಲು ಟ್ರೆಡಿಷನಲ್ ಲುಕ್ ನೀಡುತ್ತವೆ.

Festive Season 2025 1

ವೈವಿಧ್ಯಮಯ ಇಮಿಟೇಷನ್ ಆಭರಣಗಳು

ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಇಮಿಟೇಷನ್ ಜ್ಯುವೆಲರಿಗಳು ಲಭ್ಯ. ಕಿವಿಗೆ ಹಾಕುವ ಇಯರಿಂಗ್‌ಗಳಿಂದಿಡಿದು, ಚೋಕರ್, ಹಾರ, ಬಾಜುಬಂಧ್, ಕಮರ್ಬಾಂದ್, ಜುಮಕಿ, ಮಾಟಿ ಹೀಗೆ ಸಾವಿರಾರು ವಿನ್ಯಾಸದವು ಈ ಇಮಿಟೇಷನ್‌ ಜ್ಯುವೆಲರಿಗಳಲ್ಲಿ ಲಭ್ಯ. ಚಿಕ್ಕ ಆಭರಣಗಳಿಗೆ ನೂರು ರೂ.ಗಳಿಂದಿಡಿದು ಸಾವಿರ ರೂ.ಗಳಲ್ಲಿ ಹಾರ, ನೆಕ್ಲೇಸ್‌ಗಳಂತವು ದೊರೆಯುತ್ತವೆ. ಇಡೀ ಸೆಟ್‌ಗಳು ಸಾವಿರ ರೂ.ಗಳಲ್ಲೆ ದೊರೆಯುತ್ತವೆ. ಆದರೆ, ಇವಕ್ಕೆ ಕೆಲವಕ್ಕೆ ಗ್ಯಾರಂಟಿ ಇರುವುದಿಲ್ಲ ಎಂಬುದು ನೆನಪಿರಲಿ ಎನ್ನುತ್ತಾರೆ ಮಾರಾಟಗಾರರು. ಟ್ರೆಂಡಿ ಬಂಗಾರದ ಆಭರಣಗಳ ವಿನ್ಯಾಸವನ್ನು ಮೀರಿಸುವಂತೆ ಇವುಗಳ ಡಿಸೈನ್‌ಗಳು ಎದ್ದು ಕಾಣುತ್ತವೆ. ವನ್ ಗ್ರಾಮ್ ಗೋಲ್ಡ್ ಹಾಗೂ ಗೋಲ್ಡ್ ಕೋಟೆಡ್‌ನಲ್ಲಿ ಇವು ದೊರೆಯುತ್ತವೆ ಎನ್ನುತ್ತಾರೆ ಇಮಿಟೇಷನ್‌ ಜ್ಯುವೆಲರಿ ಪ್ರಿಯರಾದ ದಿವ್ಯಾ ಹಾಗೂ ರಾಣಿ.

Festive Season 2025 2

ತದ್ರೂಪಿ ಆಭರಣಗಳಿವು

ಅಷ್ಟೇಕೆ? ಬಂಗಾರದ ಹಾಗೂ ಡೈಮಂಡ್ ಆಭರಣಗಳ ತದ್ರೂಪದಂತಿರುವ ಈ ಆಭರಣಗಳು ಸೆಮಿ ಪ್ರಿಶಿಯಸ್ ಹಾಗೂ ಅಮೆರಿಕನ್ ಡೈಮಂಡ್ ಸೆಟ್‌ಗಳಲ್ಲೂ ದೊರೆಯುತ್ತವೆ. ಬಹಳಷ್ಟು ಮಂದಿ ಮದುವೆ ಸಮಾರಂಭಗಳಿಗೆ ಇವುಗಳನ್ನೇ ನಾಲ್ಕೈದು ಸೆಟ್‌ ಕೊಳ್ಳುತ್ತಾರೆ ಎನ್ನುತ್ತಾರೆ ಮಾರಾಟಗಾರರು. ಕೆಲವಕ್ಕೆ ಒಂದು ವರ್ಷ ಗ್ಯಾರಂಟಿ ಕೂಡ ಸಿಗುತ್ತದೆ. ಆಯಾ ಡಿಸೈನ್ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ.

Festive Season 2025 3

ಇಮಿಟೇಷನ್ ಜುವೆಲರಿ ಪ್ರಿಯರು ಗಮನಿಸಬೇಕಾದ ಅಂಶಗಳು

  • ಟ್ರಯಲ್ ನೋಡಿ ಪರಿಶೀಲಿಸಿ, ಕೊಳ್ಳಿ.
  • ಕಾಪರ್‌ ಫಿನಿಶಿಂಗ್ ಇರುವಂತವು ಡಲ್ ಆಗಿ ಕಾಣಿಸುತ್ತವೆ.
  • ಸರಿಯಾದ ಫಿನಿಶಿಂಗ್ ಇರುವಂತವನ್ನು ಆಯ್ಕೆ ಮಾಡಿ.
  • ಟ್ರೆಂಡಿ ಡಿಸೈನ್‌ನವನ್ನು ಖರೀದಿಸಿ.
  • ಸೂಕ್ತ ನಿರ್ವಹಣೆ ಮಾಡಿದಲ್ಲಿ ಬಹುಕಾಲ ಧರಿಸಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Wedding Nail Art Trend: ಶ್ರಾವಣದ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಯ್ತು ನೇಲ್ ಆರ್ಟ್ ಕ್ರೇಝ್!