Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮಗೊಳಿಸಿದ ವಿಚಾರಕ್ಕೆ ತಗಾದೆಗಳು ಎದ್ದಿವೆ. ಅಂದ ಹಾಗೆ ಇದು ಖಾಸಗಿ ಆಸ್ತಿ ಆದ್ದರಿಂದ ಅದರ ಮಾಲೀಕರು ಖಾಸಗಿ ಕಾರಣಕ್ಕಾಗಿ ಸ್ಮಾರಕವನ್ನು ಕೆಡವಿದ್ದಾರೆ. ಆದರೆ ಇದಕ್ಕೆ ಬೇರೆ ಬಣ್ಣ ಬಳಿದು, ಅಭಿಮಾನ್ ಸ್ಟುಡಿಯೋ ದಲ್ಲಿ ಆಗಿದ್ದಕ್ಕೆ ಇವರೇ ಕಾರಣ ಅಂತ ಯಾರ‍್ಯಾರ ಕಡೆಗೋ ಬೆರಳು ತೋರಿಸಿ ವಿಷ್ಣು ಅಭಿಮಾನಿಗಳು ಕಿರಿಕಿರಿ ಮಾಡ್ತಾ ಇದ್ದಾರೆ.


ತುಂಟರಗಾಳಿ
ಸಿನಿಗನ್ನಡ
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮಗೊಳಿಸಿದ ವಿಚಾರಕ್ಕೆ ತಗಾದೆಗಳು ಎದ್ದಿವೆ. ಅಂದ ಹಾಗೆ ಇದು ಖಾಸಗಿ ಆಸ್ತಿ ಆದ್ದರಿಂದ ಅದರ ಮಾಲೀಕರು ಖಾಸಗಿ ಕಾರಣಕ್ಕಾಗಿ ಸ್ಮಾರಕವನ್ನು ಕೆಡವಿದ್ದಾರೆ. ಆದರೆ ಇದಕ್ಕೆ ಬೇರೆ ಬಣ್ಣ ಬಳಿದು, ಅಭಿಮಾನ್ ಸ್ಟುಡಿಯೋದಲ್ಲಿ ಆಗಿದ್ದಕ್ಕೆ ಇವರೇ ಕಾರಣ ಅಂತ ಯಾರ‍್ಯಾರ ಕಡೆಗೋ ಬೆರಳು ತೋರಿಸಿ ವಿಷ್ಣು ಅಭಿಮಾನಿಗಳು ಕಿರಿಕಿರಿ ಮಾಡ್ತಾ ಇದ್ದಾರೆ. ಮತ್ತು ಎಂದಿನಂತೆ ಡಾ. ರಾಜ್‌ಕುಮಾರ್ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಅನಗತ್ಯ ಮಾತುಗಳು ಕೇಳಿ ಬರುತ್ತಿವೆ.
ಈ ವಿಷಯವನ್ನು ನ್ಯೂಟ್ರಲ್ ಮನಸ್ಸಿನಿಂದ ನೋಡಿದರೆ ಸತ್ಯ ಅರ್ಥ ಆಗುತ್ತದೆ. ಒಬ್ಬ ಮನುಷ್ಯ ನಿಗೆ ಸತ್ತ ಮೇಲೆ ಒಂದು ಕಡೆ ಸ್ಮಾರಕ ಮಾಡ್ತಾರೆ. ಹಾಗೆ ವಿಷ್ಣುವರ್ಧನ್ ಅವರ ವಿಚಾರದಲ್ಲಿ ಅದು ಕೆಲವು ವಿವಾದಗಳ ನಂತರ ತಡವಾಗಿ ಮೈಸೂರಲ್ಲಿ ಆಗಿದೆ. ಹಾಗಾಗಿ ಇಲ್ಲಿ ಬೆಂಗಳೂರಲ್ಲಿ ಕೂಡ ಇನ್ನೊಂದು ಸ್ಮಾರಕ ಇರಬೇಕು ಅಂತ ನಿರೀಕ್ಷೆ ಮಾಡೋದೇ ತಪ್ಪು.
ಹಾಗಾಗಿ ಸ್ಮಾರಕವನ್ನು ಯಾರಿಗೂ ಹೇಳದೇ ರಾತ್ರೋರಾತ್ರಿ ಕೆಡವಿದ ರೀತಿ ಸರಿ ಅಲ್ಲ ಅಷ್ಟೇ. ಆದರೆ ವಿಷ್ಣು ಅವರಿಗೆ ಇದ್ದ ಒಂದೇ ಒಂದು ಸ್ಮಾರಕವನ್ನು ಕೆಡವಿzರೆ ಅನ್ನೋ ರೀತಿ ಮಾತಾಡೋದು ತಪ್ಪು. ಮತ್ತು ಅದಕ್ಕಾಗಿ ರಾಜ್‌ಕುಮಾರ್ ಅವರ -ಮಿಲಿ ಮೇಲೆ ಗೂಬೆ ಕೂರಿಸೋದು ಇನ್ನೂ ದೊಡ್ಡ ತಪ್ಪು.
ಇದನ್ನೂ ಓದಿ: Hari Paraak Column: ರಾಖಿ ಭಾಯ್: ದುಷ್ಟ ರಕ್ಷಕ, ಸಿಸ್ಟರ್ ರಕ್ಷಕ !
ಎರಡೆರಡು ಕಡೆ ಸ್ಮಾರಕ ಇದ್ರೆ ಅದು ಸ್ವತಃ ವಿಷ್ಣು ಅವರ ಅಭಿಮಾನಿಗಳಲ್ಲೂ ಗೊಂದಲ ಮೂಡಿ ಸುತ್ತಿತ್ತು. ಅಲ್ಲದೆ ಸ್ಮಾರಕವನ್ನು ಸರಕಾರ ಅಥವಾ ಇನ್ಯಾವುದೇ ಮೂರನೇ ಶಕ್ತಿ ನಿರ್ನಾಮ ಮಾಡಿಲ್ಲ. ಅದರ ಮಾಲೀಕರು ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯದ ಕಾರಣಕ್ಕೆ ಈ ಕೆಲಸ ಮಾಡಿದ್ದಾರೆ. ಅವರನ್ನೂ ಈ ವಿಷಯದಲ್ಲಿ ದೂರುವ ಹಾಗಿಲ್ಲ. ಆದರೆ ಮೈಸೂರಲ್ಲಿ ನಮ್ಮ ನೆಚ್ಚಿನ ನಟನ ಸ್ಮಾರಕ ಇದ್ದೇ ಇದೆ. ಎಂದಿಗೂ ಇರುತ್ತದೆ. ಹಾಗಾಗಿ ಈ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಳು ನಿಜಕ್ಕೂ ಅನವಶ್ಯಕ ಅನ್ನೋದಂತೂ ಸತ್ಯ.

ಲೂಸ್ ಟಾಕ್- ಪರಮೇಶ್ವರ್, ಗೃಹಸಚಿವ
ಅದೇನ್ ಪರಮೇಶ್ವರ್ ಸರ್, ಮಾಧ್ಯಮದವರು ಏನೇ ಪ್ರಶ್ನೆ ಕೇಳಿದ್ರೂ ನೀವು ಗೊತ್ತಿಲ್ಲ ಅಂತೀರಲ್ಲ?
- ಹೌದ್ರೀ, ನಾನು ತುಂಬಾ ಸಜ್ಜನ. ನಂಗೆ ಗೊತ್ತು ಅನ್ನೋದು ಅಹಂಕಾರ. ನಾನು ಅಂಥ ಪರಮ ಜ್ಞಾನಿ ಅಲ್ಲ. ಅದಕ್ಕೇ ನಂಗೇನು ಗೊತ್ತಿಲ್ಲ ಅನ್ನೋ ವಿನೀತ ಭಾವ ನನ್ನದು.
ಅಯ್ಯೋ, ದೊಡ್ಡ ಮಾತು. ಆದ್ರೂ ಹೋಮ್ ಮಿನಿಸ್ಟರ್ ಆಗಿರೋ ನಿಮ್ಮ ಮಾತು ಕೇಳಿ ಜನ ಏನಂದುಕೊಳ್ಳೋದಿಲ್ಲ?
-ಏನಂದುಕೋತಾರೆ? ಇಷ್ಟು ದಿನ ‘ಗತ್ತಿಲ್ಲದ’ ಹೋಮ್ ಮಿನಿಸ್ಟರ್ ಅಂತಿದ್ರು. ಈಗ ‘ಗೊತ್ತಿಲ್ಲದ’ ಹೋಮ್ ಮಿನಿಸ್ಟರ್ ಅಂತಾರೆ ಅಷ್ಟೇ.
ಅದ್ಸರಿ, ನೀವು ಮನೇಲೂ ಹಿಂಗೆನಾ? ಹೆಂಡತಿ ಕೇಳೋ ಪ್ರಶ್ನೆಗಳಿಗೂ ಹಿಂಗೇ ಹೇಳ್ತೀರಾ?
-ಅಯ್ಯೋ, ಎದ್ರೂ ಉಂಟೇ. ಹೆಂಡತಿ ಪ್ರಶ್ನೆಗಳಿಗೆ ಉತ್ತರ ಹೇಳಲೇಬೇಕು. ಆ ವಿಷಯದಲ್ಲಿ ನಾನು ಪತಿ ಪರಮೇಶ್ವರ.
ಮುಂದೆ ನೀವು ಮುಖ್ಯಮಂತ್ರಿ ಆಗೋ ಸಾಧ್ಯತೆಗಳೇನಾದ್ರೂ ಇವೆಯಾ?
- ಗೊತ್ತಿಲ್ಲ. ಅದರ ಬಗ್ಗೆ ನಂಗೆ ಮಾಹಿತಿ ಬಂದಿಲ್ಲ.
ಹ್ಞಾ, ಇದು ಸರಿಯಾದ ಉತ್ತರ. ಹೋಗ್ಲಿ, ದರ್ಶನ್ ಮತ್ತೆ ಜೈಲಿಗೆ ಹೋಗಿದ್ದಾರೆ. ಹೋಮ್ ಮಿನಿಸ್ಟರ್ ಆಗಿರೋ ನಿಮಗೆ ಇದಾದ್ರೂ ಗೊತ್ತಾ?
- ಗೊತ್ತು ಕಣ್ರೀ. ಆದ್ರೂ ಪಾಪ, ಇಂಡಿಪೆಂಡೆನ್ಸ್ ಡೇಗೆ ಒಂದಿನ ಮುಂಚೆ ಅವರಿಗೆ ಹಿಂಗಾಗಬಾರದಿತ್ತು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರೂ ಪ್ರತಿದಿನ ಲಂಚ್ ಬ್ರೇಕ್‌ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್ ನಲ್ಲಿ ತರ್ತಾ ಇದ್ರು. ಅವರೆಲ್ಲರಿಗೂ ಒಂದು ವಿಷಯದ ಬಗ್ಗೆ ಕಿರಿಕಿರಿ ಆಗ್ತಾ ಇತ್ತು. ಸೋಮು ಅವತ್ತು ಕ್ಯಾಂಟೀನ್‌ನಲ್ಲಿ ಕೂತು, “ನನ್ ಹೆಂಡ್ತಿ ಬೆಳಗ್ಗೆ ಮಾಡಿದ ತಿಂಡಿನೇ ಲಂಚ್‌ಗೂ ಹಾಕಿಕೊಡ್ತಾಳೆ. ಅದೂ ಬರೀ ಮೊಸರನ್ನ. ಹೆಂಗಪ್ಪಾ ತಿನ್ನೋದು?" ಅಂತ ತನ್ನ ಕಷ್ಟ ಹೇಳಿಕೊಂಡು, “ನೋಡು, ನನ್ನ ಬಾಕ್ಸ್ ನಲ್ಲಿ ಇವತ್ತೂ ಮೊಸರನ್ನ ಇದ್ರೆ, ನಾನು ಈ ಬಿಲ್ಡಿಂಗ್ ಮೇಲಿಂದ ಹಾರಿ ಕೆಳಗೆ ಬಿದ್ದು ಸತ್ತೋಗ್ತೀನಿ" ಅಂತ ಬಾಕ್ಸ್ ಓಪನ್ ಮಾಡಿದ. ಮೊಸರನ್ನ ಇತ್ತು. ರಾಮು ಮುಖ ನೋಡಿದ.
ರಾಮು ಕೂಡಾ ಅದೇ ಮಾತನ್ನ ಹೇಳಿ, “ನೋಡು, ಇವತ್ತೂ ನನ್ನ ಬಾಕ್ಸ್ ನಲ್ಲಿ ಚಿತ್ರಾನ್ನ ಇದ್ರೆ ನಾನೂ ಮೇಲಿಂದ ಬಿದ್ದು ಸಾಯ್ತೀನಿ" ಅಂತ ಓಪನ್ ಮಾಡಿದ. ಚಿತ್ರಾನ್ನವೇ ಇತ್ತು. ಇವರಿಬ್ಬರ ನಂತರ ಖೇಮು ಕೂಡಾ, “ಇವತ್ತೂ ನನ್ನ ಕ್ಯಾರಿಯರ್‌ನಲ್ಲಿ ಉಪ್ಪಿಟ್ಟು ಇದ್ರೆ, ನಾನೂ ಸಾಯ್ತೀನಿ" ಅಂತ ಅಂದ. ತೆಗೆದು ನೋಡಿದ್ರೆ ಉಪ್ಪಿಟ್ಟೇ ಇತ್ತು. ಮೂವರೂ ಮೇಲಿಂದ ಬಿದ್ದು ಸತ್ತೋದ್ರು. ಪೊಲೀಸರು ಬಂದು ವಿಚಾರಣೆ ಮಾಡುವಾಗ ಸೋಮು ಹೆಂಡ್ತಿ, “ಅಯ್ಯೋ ಅವರಿಗೆ ಮೊಸರನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಂಗೊತ್ತಿರಲಿಲ್ಲ" ಅಂದಳು. ರಾಮು ಹೆಂಡ್ತಿ, “ಅಯ್ಯೋ, ಅವರಿಗೆ ಚಿತ್ರಾನ್ನ ಕಂಡ್ರೆ ಇಷ್ಟ ಇಲ್ಲ ಅಂತ ಗೊತ್ತಿರಲಿಲ್ಲ" ಅಂದಳು. ಕೊನೆಗೆ ಖೇಮು ಹೆಂಡ್ತಿ ಹೇಳಿದಳು- “ಅದೇನಾಯ್ತು ಅಂತಲೇ ಗೊತ್ತಾಗ್ತಿಲ್ಲ, ಡೈಲಿ ಅವರ ಲಂಚ್ ಅವರೇ ಪ್ರಿಪೇರ್ ಮಾಡ್ಕೊತಾ ಇದ್ರು".
ಲೈನ್ ಮ್ಯಾನ್
ದರ್ಶನ್ ಮತ್ತೆ ಜೈಲಿಗೆ
- ಜೈಲಲ್ಲಿರೋ ಕೈದಿಗಳು ‘ಬಂದರೋ ಬಂದರೋ ಭಾವ ಬಂದರೋ’ ಅಂತ ಹಾಡ್ತಾ ಇದ್ದಾರಂತೆ
ಡೆವಿಲ್ ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಹಾಡು ಬಿಡುಗಡೆ
- ನೆಮ್ಮದಿಯಾಗ್ ಇರೋಕೆ ನಾವ್ ಬಿಡ್ಬೇಕಲ್ಲ: ಸುಪ್ರೀಂ ಕೋರ್ಟ್
ಜೀವನದಲ್ಲಿ ನಗು ಅನ್ನೋದೇ ಇಲ್ಲದಿದ್ರೆ ಏನಾಗುತ್ತೆ?
-ನಾಲ್ಕ್ ಜನ ನನ್ನ ನೋಡಿ ನಗ್ತಾರೆ ಅನ್ನೋ ಭಯ ಇರಲ್ಲ
ಹೊಸ ರೀತಿಯ ಬರಹಗಾರರು ಬೇಕು ಅಂದ್ರೆ ಏನ್ ಮಾಡಬೇಕು?
- ‘ನ್ಯೂಟೈಪ್- ರೈಟರ್’ ತರಬೇಕು
ಯಾರಿಗೂ ಗೊತ್ತಾಗದ ಹಾಗೆ ಮೆಲ್ಲಗೆ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು
- ‘ಜೆಂಟಲ್’ ಮ್ಯಾನ್
ಮೆಳ್ಳೆಗಣ್ಣಿನ ದೃಷ್ಟಿದೋಷಕ್ಕೆ ಏನಂತಾರೆ ?
- ‘ಕಾರ್ನರ್’ ‘ಸೈಟ್’
ದಾರಿಯಲ್ಲಿ ಒಂಟಿಯಾಗಿ ಹೋಗ್ತಾ ಇದ್ದ ಆಮೆ ಮೇಲೆ ಮೂರ್ನಾಲ್ಕು ಬಸವನ ಹುಳುಗಳು ದಾಳಿ ಮಾಡಿದ್ವು. ಅವುಗಳ ವಿರುದ್ಧ ಕಂಪ್ಲೇಂಟ್ ಕೊಡೋಣ ಅಂತ ಆಮೆ ಪೊಲೀಸ್ ಸ್ಟೇಷನ್‌ಗೆ ಹೋಯ್ತು. ಅಲ್ಲಿ ಪೊಲೀಸ್ ಅಧಿಕಾರಿ ಕೇಳಿದ- “ನಿನ್ನ ಮೇಲೆ ಅಟ್ಯಾಕ್ ಮಾಡಿದ ಯಾರನ್ನಾದ್ರೂ ನೀನು ಗುರುತು ಹಿಡಿಯೋಕೆ ಸಾಧ್ಯನಾ?".
- ಅದಕ್ಕೆ ಆಮೆ ಹೇಳ್ತು, “ಇಲ್ಲ, ಅದೆ ಎಷ್ಟು - ಆಗಿ ಆಯ್ತು ಅಂದ್ರೆ, ನಂಗೆ ಏನೂ ಗೊತ್ತೇ ಆಗ್ಲಿಲ್ಲ".
ಸದಾ ಅಭಿವೃದ್ಧಿಯ ಜಪ ಮಾಡೋ ದೇಶ
- ‘ಜಪಾ’ನ್