ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season Saree Shopping 2025: ಗೌರಿ ಹಬ್ಬಕ್ಕೆ ಹೆಚ್ಚಾಯ್ತು ಸೀರೆ ಖರೀದಿ

Festive Season Saree Shopping 2025: ಗೌರಿ ಹಬ್ಬಕ್ಕೆ ಈಗಾಗಲೇ ಭರ್ಜರಿ ಸೀರೆ ಶಾಪಿಂಗ್ ಎಲ್ಲೆಡೆ ಶುರುವಾಗಿದೆ. ಸೀರೆ ಶಾಪಿಂಗ್ ಸೆಂಟರ್‌ಗಳಲ್ಲಿ ಈಗಾಗಲೇ ಮಾನಿನಿಯರ ಜಾತ್ರೆಯೇ ನೆರೆದಿದೆ. ಯಾವ್ಯಾವ ಸೀರೆಗಳಿಗೆ ಹೇಗೆಲ್ಲಾ ಬೇಡಿಕೆ ಸೃಷ್ಠಿಯಾಗಿದೆ? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.

ಚಿತ್ರಕೃಪೆ: ಮಿಂಚು
1/5

ಈ ವರ್ಷದ ಗೌರಿ ಹಬ್ಬದ ಫೆಸ್ಟೀವ್ ಸೀಸನ್ ಸೀರೆ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಚಿಕ್ಕ ಸೀರೆ ಅಂಗಡಿಯಿಂದಿಡಿದು ದೊಡ್ಡ ಸೀರೆ ಶಾಪಿಂಗ್ ಸೆಂಟರ್‌ಗಳಲ್ಲಿ, ಮಾಲ್‌ಗಳ ಬ್ರಾಂಡೆಡ್ ಸೀರೆ ಶಾಪ್‌ಗಳಲ್ಲೂ ಶಾಪಿಂಗ್ ಮಾಡುವ ಮಾನಿನಿಯರ ಜಾತ್ರೆಯೇ ನೆರೆಯಲಾರಂಭಿಸಿದೆ.

2/5

ಸೀರೆಗಳ ಶಾಪಿಂಗ್‌ಗೆ ಹಬ್ಬ ಸಕಾಲ

ಗೌರಿ ಹಬ್ಬಕ್ಕೆ ಮಾನಿನಿಯರು ಹೊಸ ಸೀರೆಯುಟ್ಟು ಹಬ್ಬ ಆಚರಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಇದಕ್ಕೆ ಪೂರಕ ಎಂಬಂತೆ, ಸೀರೆ ಅಂಗಡಿಗಳು ಕೂಡ ಲೆಕ್ಕವಿಲ್ಲದಷ್ಟು ಬಗೆಯ ಸೀರೆಗಳನ್ನು ಅನಾವರಣಗೊಳಿಸಿವೆ. ಲಕ್ಷಗಟ್ಟಲೇ ರೇಷ್ಮೆ ಸೀರೆಗಳಿಂದಿಡಿದು, ನೂರಾರು ರೂ.ಗಳಿಗೆ ಕಡಿಮೆ ಬೆಲೆಯಲ್ಲಿ ದೊರೆಯುವ ಬಗೆಬಗೆಯ ಕಾಟನ್ ಸೀರೆಗಳು ಕೂಡ ಬಂದಿವೆ. ಶ್ರೀಮಂತ ಮಹಿಳೆಯರು ಮಾತ್ರವಲ್ಲ, ಮಧ್ಯಮ ಹಾಗೂ ಸಾಮಾನ್ಯ ಮಹಿಳೆಯರು ಹಾಗೂ ಯುವತಿಯರು ಕೂಡ ಸೀರೆ ಶಾಪಿಂಗ್‌ನಲ್ಲಿ ಈಗಾಗಲೇ ನಿರತರಾಗಿದ್ದಾರೆ ಎನ್ನುತ್ತಾರೆ ಮಲ್ಲೇಶ್ವರದ ಸೀರೆ ಶಾಪ್‌ನ ಮಾರಾಟಗಾರರು.

3/5

ಇನ್ನು, ಗಾಂಧೀಬಜಾರ್‌ನ ಸೀರೆ ಮಳಿಗೆಯೊಂದರ ಮಾಲೀಕರು ಹೇಳುವಂತೆ, ಹಬ್ಬದ ಸೀಸನ್‌ನಲ್ಲಿ ಸಾಕಷ್ಟು ಬಗೆಯ ಡಿಸೈನ್‌ನ ಸೀರೆಗಳು ದೊರೆಯುತ್ತವೆ. ಹಾಗಾಗಿ ಈ ಸೀಸನ್ ಸೀರೆ ಶಾಪಿಂಗ್‌ಗೆ ಸಕಾಲ ಎನ್ನುತ್ತಾರೆ.

4/5

ಗೌರಿ ಹಬ್ಬಕ್ಕೆ ಡಿಮ್ಯಾಂಡ್ ಸೃಷ್ಠಿಸಿಕೊಂಡಿರುವ ಸೀರೆಗಳಿವು

ಬಾರ್ಡರ್ ಇರುವಂತಹ ರೇಷ್ಮೆ ಸೀರೆಗಳು, ಸೆಮಿ ಸಿಲ್ಸ್ಕ್, ಸೆಮಿ ಮೈಸೂರ್ ಸಿಲ್ಕ್, ಜಾರ್ಜೆಟ್, ಬನಾರಸ್ ಪ್ರಿಂಟೆಡ್, ಪ್ರಿಂಟೆಡ್ ಅರ್ಗಾನ್ಜಾ, ಮಾನೋಕ್ರೋಮ್ ಅರ್ಗಾನ್ಜಾ ಸೀರೆ, ಕಾಟನ್ ಸಿಲ್ಕ್ಸ್, ಕ್ರೇಪ್ ಸಿಲ್ಕ್ಸ್, ಮೈಸೂರು 3 ಡಿ ಪ್ಯೂರ್ ಸಿಲ್ಕ್ಸ್, ಪ್ರಿಂಟೆಡ್ ಡೋಲಾ ಸಿಲ್ಕ್ಸ್, ಎಂಬ್ರಾಯ್ಡರಿ ಡಿಸೈನರ್ ಸೀರೆಗಳು ಸೇರಿದಂತೆ ನಾನಾ ಬಗೆಯವು ಹೊಸ ಹೊಸ ವಿನ್ಯಾಸದಲ್ಲಿ ಬಂದಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ. ಲಕ್ಷಾಂತರ ರೂ. ಬೆಲೆ ಬಾಳುವ ಗ್ರ್ಯಾಂಡ್ ದುಬಾರಿ ಸೀರೆಗಳನ್ನೇ ಹೋಲುವ ಕಡಿಮೆ ಬೆಲೆಯ ರಿಪ್ಲೀಕಾ ಸೀರೆಗಳು ಇದೀಗ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ.

5/5

ಗೌರಿ ಹಬ್ಬದ ಸೀರೆ ಖರೀದಿಸುವವರ ಗಮನಕ್ಕೆ

  • ಟ್ರೆಂಡಿ ಫೆಸ್ಟೀವ್ ಸೀಸನ್‌ಗೆ ಹೊಂದುವಂತಹ ಸೀರೆಗಳನ್ನು ಖರೀದಿಸಿ.
  • ಗ್ರ್ಯಾಂಡ್ ಲುಕ್ ಸೀರೆಗಳನ್ನು ಆಯ್ಕೆ ಮಾಡಿ.
  • ಅತ್ಯುತ್ತಮ ಡಿಸೈನ್ನವು ಈ ಸೀಸನ್ನಲ್ಲಿ ಲಭ್ಯ. ಚೂಸ್ ಮಾಡಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author