-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಹುಡುಗಿಯರ ಬಿಂದಾಸ್ ಫ್ಯಾಷನ್‌ನಲ್ಲಿ (Gen G Fashion 2026) ಇದೀಗ ಚೆಸ್ ಬೋರ್ಡ್ ಪ್ರಿಂಟೆಡ್ ಪ್ಯಾಂಟ್ಸ್ ಲಗ್ಗೆ ಇಟ್ಟಿವೆ. ಹೌದು, ಈ ಚೆಕ್ಸ್ ಅಥವಾ ಚೆಕ್ಕರ್ಡ್ ಪ್ಯಾಂಟ್‌ಗಳು ಈ ಸೀಸನ್‌ನಲ್ಲಿ ನಾನಾ ಕಲರ್‌ನಲ್ಲಿ ಎಂಟ್ರಿ ನೀಡಿವೆ.
ಅಂದಹಾಗೆ, ಚೆಕ್ಸ್ ಪ್ರಿಂಟ್ ಇರುವ ಈ ಪ್ಯಾಂಟ್‌ಗಳು ಇಂದಿನ ಜೆನ್ ಜಿ ಹುಡುಗಿಯರ ವಾರ್ಡ್ರೋಬ್ ಸೇರಿಕೊಂಡಿವೆ. ಧರಿಸಿದಾಗ ನೋಡಲು ಇಲ್ಯೂಷನ್ ಕ್ರಿಯೇಟ್ ಮಾಡುವ ಇವು ಫಂಕಿ ಹಾಗೂ ಸೆಮಿ ಫಾರ್ಮಲ್ ಲುಕ್‌ನಲ್ಲಿ ಕಂಡು ಬರುತ್ತಿವೆ. ಧರಿಸುವ ಹುಡುಗಿಯರ ಸ್ಟೈಲಿಂಗ್ ಆಧಾರದ ಮೇಲೆ ಈ ಪ್ಯಾಂಟ್‌ಗಳು ಲುಕ್ ಬದಲಿಸಿಕೊಳ್ಳುತ್ತವೆ. ಹಾಗಾಗಿ ಈ ಪ್ಯಾಂಟ್‌ಗಳು ಹೀಗೆಯೇ ಕಾಣುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ! ಎಲ್ಲದಕ್ಕಿಂತ ಹೆಚ್ಚಾಗಿ ಮಿಕ್ಸ್ ಮ್ಯಾಚ್ ಅಪ್ಷನ್‌ಗೆ ಇವು ಸಾಥ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಮೆನ್ಸ್ ಲುಕ್‌ನಲ್ಲಿದ್ದ ಪ್ಯಾಂಟ್‌ಗಳಿವು
ಮೂರ್ನಾಲ್ಕು ದಶಕಗಳ ಹಿಂದೆ ರೆಟ್ರೊ ಮೆನ್ಸ್ ಲುಕ್‌ನಲ್ಲಿ ಈ ಚೆಸ್‌ಬೋರ್ಡ್ ಪ್ಯಾಂಟ್‌ಗಳು ಇದ್ದವು. ಆದರೆ, ಇದೀಗ ಹುಡುಗಿಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಕಿ.
ಬಗೆಬಗೆಯ ಚೆಸ್ ಬೋರ್ಡ್ ಪ್ಯಾಂಟ್ಸ್
ಕಲರ್ ಚೆಕ್ಸ್ ಇರುವಂತವು, ಬಾಕ್ಸ್ ಪ್ರಿಂಟ್ಸ್‌ನವು, ಸ್ಟ್ರೇಟ್ ಕಟ್‌ನವು ಸೆಮಿ ಫಾರ್ಮಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಇನ್ನು ಸ್ಕಿನ್‌ಟೈಟ್ ಚೆಸ್ ಬೋರ್ಡ್ ಪ್ಯಾಂಟ್‌ಗಳು ಫಂಕಿ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
Summer Fashion 2026: ಸೆಲೆಬ್ರಿಟಿಗಳ ಪಾರ್ಟಿವೇರ್‌ಗೆ ಸೇರಿದ ವೈಬ್ರೆಂಟ್ ವೆಲ್ವೆಟ್ ಕಾರ್ಸೆಟ್ ಡ್ರೆಸ್
ಹೀಗಿರಲಿ ಮಿಕ್ಸ್ ಮ್ಯಾಚ್
- ಟೈಟ್ ಫಿಟ್ಟಿಂಗ್ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ದೊಗಲೆ ಕಫ್ತಾನ್ ಶೈಲಿಯ ಕ್ರಾಪ್ ಟಾಪ್‌ಗಳು ಓಕೆ.
- ಆಯಾ ಪ್ಯಾಂಟ್‌ನ ಡಿಸೈನ್ ಹಾಗು ಪ್ರಿಂಟ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಬ್ಲಾಕ್ ಮತ್ತು ವೈಟ್ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ಆದಷ್ಟೂ ಅದೇ ಕಲರ್‌ನ ಕ್ರಾಪ್ ಟಾಪ್ ಅಥವಾ ಟೀ ಶರ್ಟ್ ಹೊಂದುತ್ತವೆ.
- ಲೂಸಾದ ಚೆಸ್ ಬೋರ್ಡ್ ಪ್ಯಾಂಟ್‌ಗಳಿಗೆ ಟೈಟ್ ಟಾಪ್‌ಗಳು ಹೊಂದುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)