-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಸಾರ್ಟ್‌ವೇರ್ ಕೆಟಗರಿಯಲ್ಲಿ ಇದೀಗ ಚೆಕ್ಸ್ ಕೋ ಆರ್ಡ್ ಸೆಟ್‌ಗಳು ಆಗಮಿಸಿವೆ. ಪಕ್ಕಾ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತಿದ್ದ ಕಲರ್‌ಫುಲ್ ಚೆಕ್ಸ್ ಪ್ಯಾಟರ್ನ್ ಇದೀಗ ಗ್ಲಾಮರಸ್ ಲುಕ್ ಪಡೆದುಕೊಂಡಿದೆ. ಅಲ್ಟ್ರಾ ಮಾಡರ್ನ್ ಹುಡುಗಿಯರ ವಕೇಷನ್ ಮೂಡ್‌ಗೆ ಹೊಂದುವಂತಹ ಡಿಸೈನ್ ಹಾಗೂ ಶೈಲಿಯಲ್ಲಿ ಎಂಟ್ರಿ ನೀಡಿವೆ.
ರಿಧಿಮಾ ತಿವಾರಿಯ ಚೆಕ್ಸ್ ಕೋ ಆರ್ಡ್ ಸೆಟ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ರಿಧಿಮಾ ತಿವಾರಿ ತಮ್ಮ ವಕೇಷನ್‌ನಲ್ಲಿ ಧರಿಸಿದ್ದ ಚೆಕ್ಸ್ ಕೋ ಆರ್ಟ್ ಸೆಟ್ ಸೋಷಿಯಲ್ ಮೀಡಿಯಾ ಮೂಲಕ ಫ್ಯಾಷನ್ ಪ್ರಿಯರನ್ನು ತಲುಪಿತ್ತು. ಅದರಲ್ಲೂ ಜೆನ್ ಜಿ ಹಾಗೂ ಟೀನೇಜ್ ಹುಡುಗಿಯರನ್ನು ಸೆಳೆದಿತ್ತು.
ಗ್ಲಾಮರಸ್ ಲುಕ್‌ಗೆ ಚೆಕ್ಸ್ ಕೋ ಆರ್ಡ್ ಸೆಟ್
ರೈನ್ಬೋ ಅಥವಾ ಮಲ್ಟಿ ಕಲರ್‌ನ ಚೆಕ್ಸ್ ಕೋ ಆರ್ಡ್ ಸೆಟ್‌ಗಳಲ್ಲಿ ಇದೀಗ ಶಾರ್ಟ್ಸ್ ಹಾಗೂ ವಿ ನೆಕ್‌ಲೈನ್‌ನ ಕ್ರಾಪ್ಡ್ ಕೋ ಆರ್ಡ್ ಸೆಟ್‌ಗಳು ಪಾಪುಲರ್ ಆಗಿವೆ. ಅದನ್ನು ಹೊರತುಪಡಿಸಿದರೇ ಶಾರ್ಟ್ ಸ್ಕರ್ಟ್ ಹಾಗೂ ಮಿನಿ ಸ್ಕರ್ಟ್‌ಗಳು ಕೂಡ ಚಾಲ್ತಿಯಲ್ಲಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ದಿಯಾ.
ಚೆಕ್ಸ್ ಕೋ ಆರ್ಡ್ ಸೆಟ್ ಸ್ಟೈಲಿಂಗ್‌ಗೆ 5 ಸಿಂಪಲ್ ಟಿಪ್ಸ್
- ಫಿಟ್ ಬಾಡಿಯಿದ್ದಲ್ಲಿ ಮಾತ್ರ ಧರಿಸಲು ಪ್ರಿಫರ್ ಮಾಡಿ.
- ನೆಕ್ಲೈನ್‌ಗಳು ಡೀಪ್ ಆಗಿರುತ್ತವೆ, ಹಾಗಾಗಿ ಮೊದಲೇ ಟ್ರಯಲ್ ನೋಡಿ, ಧರಿಸಿ.
- ಆನ್‌ಲೈನ್‌ನಲ್ಲಿ ಸಾಕಷ್ಟು ಶೈಲಿಯವು ಲಭ್ಯ. ಆಯ್ಕೆಗೆ ಸಾಕಷ್ಟು ಅಪ್ಷನ್‌ಗಳಿರುತ್ತವೆ.
- ಫಂಕಿ ಆಕ್ಸೆಸರೀಸ್ ಮ್ಯಾಚ್ ಮಾಡಿ. ಫಂಕಿ ಲುಕ್ ಗ್ಯಾರಂಟಿ.
- ಹಾಲಿಡೇ ಹಾಗೂ ವಕೇಷನ್‌ಗೆ ಹೇಳಿ ಮಾಡಿಸಿದ ಔಟ್‌ಫಿಟ್. ಸೋ, ಕಲರ್‌ಫುಲ್ ಔಟ್‌ಫಿಟ್ ಆಯ್ಕೆ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)