-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪೋಲೋ ಫುಲ್ ಸ್ಲೀವ್ ಟೀ ಶರ್ಟ್‌ಗಳು ಜೆನ್ ಜಿ ಮಾನ್ಸೂನ್ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಹೌದು, ಈ ಸೀಸನ್‌ನ ಜೆನ್ ಜಿ ಫ್ಯಾಷನ್‌ನಲ್ಲಿ (Gen z Fashion 2026) ಕಲರ್‌ಫುಲ್ ವೈಬ್ರೆಂಟ್ ಶೇಡ್‌ಗಳ ಪೋಲೋ ಫುಲ್ ಸ್ಲೀವ್ ಕಾಲರ್ ಟೀ ಶರ್ಟ್‌ಗಳು ಹಂಗಾಮ ಎಬ್ಬಿಸಿದ್ದು, ಸ್ಟೈಲಿಶ್ ಲುಕ್‌ಗೆ ಸಾಥ್ ನೀಡುತ್ತಿವೆ.
ಸ್ಟ್ರೀಟ್ ಸ್ಟೈಲ್ ಫ್ಯಾಷನ್‌ವೇರ್ಸ್
ಪೋಲೋ ಟೀ ಶರ್ಟ್‌ಗಳು ಈ ಹಿಂದೆಯೂ ಫ್ಯಾಷನ್‌ನಲ್ಲಿದ್ದವು. ಟಾಮ್ ಬಾಯ್ ಇಮೇಜ್ ಬಯಸುವ ಹುಡುಗಿಯರನ್ನು ಮಾತ್ರ ಸವಾರಿ ಮಾಡುತ್ತಿದ್ದವು. ಆದರೆ, ಇದೀಗ ಜೆನ್ ಜಿ ಹುಡುಗಿಯರ ಅಭಿಲಾಷೆಗೆ ತಕ್ಕಂತೆ ಕೊಂಚ ರೂಪ ಬದಲಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಮಾನ್ಸೂನ್‌ಗೆ ಫುಲ್ ಸ್ಲೀವ್ ಟೀ ಶರ್ಟ್
ಇನ್ನು, ಈ ಸೀಸನ್‌ಗೆ ತಕ್ಕಂತೆ ಬೆಚ್ಚಗಿಡುವಂತಹ ಫುಲ್ ಸ್ಲೀವ್‌ಗಳು ಈ ಪೋಲೋ ಶರ್ಟ್‌ಗಳಿಗೆ ಜತೆಯಾಗಿವೆ. ಬಾಡಿಕ್ಆನ್ ಫಿಟ್ಟಿಂಗ್‌ನಲ್ಲಿ ಗ್ಲಾಮರಸ್ ಆಗುವುದರ ಜತೆಗೆ ಸೀಸನ್‌ಗೂ ಮ್ಯಾಚ್ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಪೋಲೋ ಟೀ ಶರ್ಟ್ ಸ್ಟೈಲಿಂಗ್‌ಗೆ 4 ಟಿಪ್ಸ್
- ಫಿಟ್ಟಿಂಗ್ ಇರಲಿ,ಹೆಚ್ಚು ಟೈಟಾಗಿರುವುದು ಬೇಡ!
- ಕಾಲೇಜು ಹುಡುಗಿಯರು ಕ್ರಾಪ್ ಪೋಲೋ ಟೀ ಶರ್ಟ್ ಆಯ್ಕೆ ಮಾಡಿಕೊಳ್ಳಬಹುದು.
- ಇದರ ಜತೆಗೆ ಟ್ರೆಂಚ್ ಕೋಟ್ ಅಥವಾ ಜಾಕೆಟ್ ಧರಿಸಿ ಲೇಯರ್ ಲುಕ್ ನೀಡಬಹುದು.
- ಸ್ಟ್ರೀಟ್ ಫ್ಯಾಷನ್‌ಗೆ ಹೇಳಿ ಮಾಡಿಸಿದ ಫ್ಯಾಷನ್‌ವೇರ್. ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)