-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರ್ಲ್ ಡಿಸೈನರ್ ಗೌನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಗೌನ್‌ಗಳು (Gown Fashion 2026) ನೈಟ್ ಪಾರ್ಟಿ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಪರ್ಲ್ ಪ್ರಿಯರನ್ನು ಬರಸೆಳೆದಿವೆ. ಒಟ್ಟಾರೆ ಇವನಿಂಗ್ ಹಾಗೂ ನೈಟ್ ಪಾರ್ಟಿಗಳಲ್ಲಿ ಹಂಗಾಮ ಎಬ್ಬಿಸಿವೆ.
ಗೌಹರ್ ಖಾನ್ ಧರಿಸಿದ್ಧ ಪರ್ಲ್ ಡಿಸೈನರ್ ಗೌನ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಗೌಹರ್ ಖಾನ್ ಧರಿಸಿದ್ಧ ಇವನಿಂಗ್ ಪಾರ್ಟಿವೇರ್ ಕೆಟಗರಿಯಲ್ಲಿ ಸೇರುವ ಆಫ್ ಶೋಲ್ಡರ್ ಡಿಸೈನರ್ ಪರ್ಲ್ ಎಂಬಾಲಿಶ್ಡ್ ಗೌನ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾಷನ್ ಪ್ರಿಯರನ್ನು ಸೆಳೆದಿತ್ತು. ಗೌಹರ್ ಅವರಿಗೆ ಈ ಪಾಸ್ಟೆಲ್ ಪಿಂಕ್ ಶೇಡ್‌ನ ಪರ್ಲ್ ಗೌನ್ ಕ್ಲಾಸಿ ಲುಕ್ ನೀಡಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪರ್ಲ್ ಡಿಸೈನರ್ ಗೌನ್‌ಗಳ ವಿಶೇಷತೆ
ಫೇಕ್ ಪರ್ಲ್‌ಗಳನ್ನು ಹೊಂದಿರುವ ಈ ಡಿಸೈನರ್ ಗೌನ್‌ಗಳು ಅಲ್ಲಲ್ಲಿ ರೈನೋಸ್ಟೋನ್‌ಗಳನ್ನು ವಿನ್ಯಾಸದಲ್ಲಿ ಜತೆಯಾಗಿಸಿಕೊಂಡಿವೆ. ಎಂತಹವರಿಗೂ ಕ್ಲಾಸಿ ಲುಕ್ ನೀಡುವ ಇವು ಸೆಲೆಬ್ರೆಟಿ ಲುಕ್ ನೀಡುತ್ತವೆ ಎಂಬ ಕಾರಣದಿಂದಾಗಿ ಈ ಶೈಲಿಯ ಗೌನನ್ನು ಜೆನ್ ಜಿ ಯುವತಿಯರು ಕೂಡ ಧರಿಸತೊಡಗಿದ್ದಾರೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ರಾಶಿ.
ಆನ್‌ಲೈನ್ ಶಾಪ್‌ಗಳಲ್ಲಿ ಬಗೆಬಗೆಯ ಪರ್ಲ್ ಡಿಸೈನರ್ ಗೌನ್
ಈಗಾಗಲೇ ಆನ್‌ಲೈನ್ ಶಾಪ್‌ಗಳಲ್ಲಿ ನಾನಾ ಬಗೆಯ ಪರ್ಲ್ ಡಿಸೈನರ್ ಗೌನ್‌ಗಳು ಟ್ರೆಂಡಿಯಾಗಿವೆ. ಕೆಲವು ಆಫ್ ಶೋಲ್ಡರ್‌ನಲ್ಲಿದ್ದರೇ ಇನ್ನು ಕೆಲವು ಕೇಪ್ ಡಿಸೈನ್, ಬೋಟ್ ನೆಕ್ ಹೀಗೆ ನಾನಾ ಬಗೆಯಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಪರ್ಲ್ ಡಿಸೈನರ್ ಗೌನ್ ಪ್ರಿಯರೇ ಗಮನಿಸಿ
- ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತವನ್ನು ಖರೀದಿಸಿ.
- ಪಾಸ್ಟೆಲ್ ಶೇಡ್‌ನವು ಟ್ರೆಂಡಿಯಾಗಿವೆ.
- ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)