ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion: ನಟಿ ಮೃಣಾಲ್‌ ಠಾಕೂರ್‌ ರೀತಿ ಬ್ಲ್ಯಾಕ್‌ ಜರ್ದೋಸಿ ಸೀರೆ ಸ್ಟೈಲಿಂಗ್‌ಗೆ ಇಲ್ಲಿವೆ ಟಿಪ್ಸ್

ನಟಿ ಮೃಣಾಲ್‌ ಠಾಕೂರ್‌ ಉಟ್ಟಿರುವ ಬ್ಲ್ಯಾಕ್‌ ಜರ್ದೋಸಿ ಸೀರೆ ಲುಕ್ಕನ್ನು ನೀವೂ ಸುಲಭವಾಗಿ ಕೂಡ ಪಡೆಯಬಹುದು. ಅದು ಹೇಗೆ? ಅಂತಿರಾ! ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್‌ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಟೈಲಿಂಗ್‌ ಎಕ್ಸ್‌ಪರ್ಟ್ಸ್.‌

ಚಿತ್ರಗಳು: ಮೃಣಾಲ್‌ ಠಾಕೂರ್‌, ಬಾಲಿವುಡ್‌ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬ್ಲ್ಯಾಕ್‌ ಜರ್ದೋಸಿ ಸೀರೆಯಲ್ಲಿ ನೀವು ಕೂಡ ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ರಂತೆ (Star Fashion) ಅತ್ಯಾಕರ್ಷಕವಾಗಿ ಗ್ಲಾಮರಸ್‌ ಆಗಿ ಕಾಣಿಸಬೇಕೇ! ಅವರಂತೆಯೇ ಸಾವಿರಾರು ಜನರ ಮಧ್ಯೆಯೂ ಹೈಲೈಟ್‌ ಆಗಬೇಕೆ! ಇದೇನೂ ಕಷ್ಟವಲ್ಲ! ಮೃಣಾಲ್‌ ಫಾಲೋ ಮಾಡಿರುವಂತಹ ಒಂದಿಷ್ಟು ಸೀರೆ ಸ್ಟೈಲಿಂಗ್‌ ನೀವೂ ಕೂಡ ಫಾಲೋ ಮಾಡಿದರೇ ಸಾಕು! ಅವರಷ್ಟೇ ಅಂದವಾಗಿ ಕಾಣಿಸಬಹುದು. ಮೃಣಾಲ್‌ರಂತೆಯೇ ನೀವೂ ಕೂಡ ಬ್ಲ್ಯಾಕ್‌ ಸೀರೆಯಲ್ಲಿ ಸುಂದರವಾಗಿ ಕಾಣಿಸಬಹುದು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.

ಬ್ಲ್ಯಾಕ್‌ ಸೀರೆಯ ಆಯ್ಕೆ ಹೀಗಿರಲಿ

ನಿಮ್ಮ ಬ್ಲ್ಯಾಕ್‌ ಸೀರೆಯ ಆಯ್ಕೆ ಸೂಕ್ತವಾಗಿರಲಿ. ಆದಷ್ಟೂ ಮೃಣಾಲ್‌ ಠಾಕೂರ್‌ ಉಟ್ಟಿರುವಂತಹ ಸೀರೆಯ ವಿನ್ಯಾಸದವನ್ನೇ ನೀವೂ ಕೂಡ ಆಯ್ಕೆ ಮಾಡಿ, ಖರೀದಿಸಿ. ಡಿಸೈನ್‌ ಕೂಡ ಸೇಮ್‌ ಟು ಸೇಮ್‌ ಆಗಿರಲಿ. ಆಗ ನೋಡಲು ಅದೇ ಲುಕ್‌ ಸಿಗುವುದು. ಇಲ್ಲವಾದಲ್ಲಿ ಲುಕ್‌ ಭಿನ್ನವಾಗಿ ಕಾಣಿಸಬಹುದು.

Mrunal Thakur

ಬ್ಲ್ಯಾಕ್‌ ಜರ್ದೋಸಿ ಸೀರೆ

ಬ್ಲ್ಯಾಕ್‌ ಜರ್ದೋಸಿ ಸೀರೆಯನ್ನೇ ಆಯ್ಕೆ ಮಾಡಿ ಉಟ್ಟುಕೊಳ್ಳಿ. ಇದು ಮೃಣಾಲ್‌ ಠಾಕೂರ್‌ ಉಟ್ಟಿರುವ ಸೀರೆಯನ್ನು ಹೋಲುತ್ತವೆ. ಆಗಷ್ಟೇ ಥೇಟ್‌ ಅವರಂತೆ ಲುಕ್‌ ಪಡೆಯಲು ಸಹಕಾರಿ.

ಬಾರ್ಡರ್‌ ಸೀರೆಯ ಅಂದ

ಇದು ರೇಷ್ಮೆ ಸೀರೆಯಲ್ಲದಿದ್ದರೂ ಕೂಡ ಆಕರ್ಷಕವಾದ ಬಾರ್ಡರ್‌ ಇದೆ. ಹಾಗಾಗಿ ಇಡೀ ಸೀರೆಯನ್ನು ಇದು ಹೈಲೈಟ್‌ ಮಾಡುತ್ತದೆ. ಸಾದಾ ಸೀರೆಯಾದರೂ ಬಾರ್ಡರ್‌ ಡ್ರೇಪಿಂಗ್‌ ಮಾಡಿದಾಗ ಅಂದವಾಗಿ ಕಾಣಿಸುತ್ತದೆ.

zardosi saree

ಡ್ರೇಪಿಂಗ್‌ ಸ್ಟೈಲಿಂಗ್‌ನ ಪ್ರಮುಖ ಪಾತ್ರ

ಸೀರೆ ಉಡುವಾಗ ಥೇಟ್‌ ಮೃಣಾಲ್‌ ಠಾಕೂರ್‌ ಉಟ್ಟಂತೆ ಡ್ರೇಪಿಂಗ್‌ ಮಾಡಿದಲ್ಲಿ ನಿಮ್ಮ ಲುಕ್‌ ಕೂಡ ಅದೇ ರೀತಿ ಕಾಣಿಸಬಹುದು. ಮೃಣಾಲ್‌ ಸೀರೆಯ ಬಾರ್ಡರನ್ನ ಒಟ್ಟಾಗಿ ಸೇರಿಸಿ, ಒಂದೇ ಕಡೆ ಉಟ್ಟಿದ್ದು, ಹಾಗಾಗಿ ನೋಡಲು ಬೋಲ್ಡ್‌ ಲುಕ್‌ ನೀಡಿದೆ. ಇದೇ ರೀತಿ ನೀವು ಸೀರೆ ಡ್ರೇಪ್‌ ಮಾಡಿ.

Saree Fashion

ಕಾಲರ್‌ ನೆಕ್‌ಲೈನ್‌ನ ಬ್ಲೌಸ್‌ ಧರಿಸಿ

ಇಡೀ ಸೀರೆಯ ಲುಕ್‌ ಬ್ಲೌಸ್‌ ಡಿಸೈನ್‌ ಮೇಲೆ ನಿರ್ಧರಿತವಾಗಿರುತ್ತದೆ. ಹಾಗಾಗಿ, ಮೃಣಾಲ್‌ ಧರಿಸಿರುವಂತಹ ಕಾಲರ್‌ ನೆಕ್‌ಲೈನ್‌ ಇರುವಂತಹ ಡಿಸೈನ್‌ನದ್ದನ್ನೇ ಧರಿಸಲು ಟ್ರೈ ಮಾಡಿ. ಅದೇ ರೀತಿ ಬ್ಲೌಸ್‌ ವಿನ್ಯಾಸ ಮಾಡಿಸಿಕೊಳ್ಳಿ.

Summer Fashion: ಹೀಗಿರಲಿ ಬೇಸಿಗೆಯ ಜಂಪ್‌ಸೂಟ್‌ ಸೆಲೆಕ್ಷನ್‌

ಆಕ್ಸೆಸರೀಸ್‌ ಕೂಡ ಮ್ಯಾಚ್‌ ಮಾಡಿ

ಕಿವಿಗೆ ಬಿಗ್‌ ಜುಮ್ಕಾ ಹಾಗೂ ನೆಕ್ಲೇಸ್‌ ಧರಿಸಿ ಅಥವಾ ಬ್ಲ್ಯಾಕ್‌ ಸೀರೆಗೆ ಹೊಂದುವಂತಹ ಆಕ್ಸೆಸರೀಸ್‌ ಧರಿಸಿ.‌

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author