ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೀಗಿರಲಿ ನವರಾತ್ರಿಯ ಬಿಳಿ ಬಣ್ಣದ ಸ್ಟೈಲಿಂಗ್

Navaratri styling 2026: ಈ ಬಾರಿಯ ನವರಾತ್ರಿಯ ಎರಡನೇ ದಿನ ಬಿಳಿ ಬಣ್ಣ ನಿಗದಿಯಾಗಿದೆ. ಈ ಕಲರ್ನಲ್ಲಿ ಸೀರೆ ಇಲ್ಲವೇ ಉಡುಗೆ ಧರಿಸುವವರು ಯಾವ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನಿಸ್ಟಾ ಶ್ವೇತಾ ನಂದಕುಮಾರ್ ತಿಳಿಸಿದ್ದಾರೆ.

ಚಿತ್ರ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶಾಂತಿಯ ಪ್ರತೀಕವಾದ ಬಿಳಿ ಬಣ್ಣದಲ್ಲೂ ನಾನಾ ಶೇಡ್ಗಳನ್ನು ಕಾಣಬಹುದು. ಪ್ರತಿಬಾರಿಯಂತೆ ಈ ಬಾರಿಯೂ ನವರಾತ್ರಿಯ ಎರಡನೇ ದಿನ ಬಿಳಿ ಬಣ್ಣ ನಿಗಧಿಯಾಗಿದೆ. ನಿಮಗೆ ಗೊತ್ತಿರುವಂತೆ, ಬಿಳಿ ಬಣ್ಣವು ಇತರೇ ಬಣ್ಣಗಳಂತಲ್ಲ! ಹಾಗಾಗಿ ಫ್ಯಾಬ್ರಿಕ್ ಆಯ್ಕೆಯ ಆಧಾರದ ಮೇಲೆ ಔಟ್ಲುಕ್ ನಿರ್ಧರಿತವಾಗುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ವೇತಾ ನಂದಕುಮಾರ್.

ಬಿಳಿ ವರ್ಣದ ಸೀರೆಗಳು

ಕಾಟನ್ ಅಥವಾ ಲೆನಿನ್ ಬಿಳಿ ಬಣ್ಣದ ಅದರಲ್ಲೂ ಪ್ರಿಂಟ್ಸ್ ಅಥವಾ ಕೊಂಚ ಅಬ್ಸ್ಟ್ರಾಕ್ಟ್ ಇಲ್ಲವೇ ಜಿಯಾಮೆಟ್ರಿಕಲ್ ಡಿಸೈನ್ನ ಸೀರೆಯನ್ನು ಆಯ್ಕೆ ಮಾಡಿ ನೀವು ಉಡುವಿರಾದರೇ ಆದಷ್ಟೂ ಕಾಂಟ್ರಾಸ್ಟ್ ಶೇಡ್ ಅಥವಾ ಇತರೇ ಕಲರ್ ಮಿಕ್ಸ್ ಆಗಿರುವ ಬ್ಲೌಸ್ ಧರಿಸಿ.

ಟ್ರೆಂಡಿಯಾಗಿರುವ ಬಿಳಿ ಸೀರೆಗಳಿವು

ಇನ್ನು, ಈ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಸಾಟಿನ್ನ ವೈಟ್ ಸ್ಟ್ರೈಪ್ಸ್ ಶಿಫಾನ್ನ ಡಬ್ಬಲ್ ವೈಟ್, ಕ್ರೇಪ್ನ ಫ್ಲೋರಲ್ ಪ್ರಿಂಟ್ಸ್, ಶಿಫಾನ್ನ ಫ್ರಿಲ್ ಸೀರೆ, ರೆಡಿ ವೈಟ್ ಸೀರೆಗಳನ್ನು ಉಡಬಹುದು. ಇನ್ನು, ಬಿಳಿಯಲ್ಲಿ ಹಾಫ್ ವೈಟ್, ಕ್ರೀಮಿಶ್ ವೈಟ್, ಐವರಿ ವೈಟ್ನ ಸೀರೆ ಶೇಡ್‌ ಲಭ್ಯ. ಸೀರೆ ತಕ್ಕಂತೆ ಸ್ಟೈಲಿಂಗ್ ಮಾಡಿದಾಗ ಮಾತ್ರ ಎಲಿಗೆಂಟ್ ಲುಕ್ ನೀಡುತ್ತದೆ.

Navaratri styling

ಪರ್ಲ್ ಜ್ಯುವೆಲರಿ ಮ್ಯಾಚಿಂಗ್ ಮಾಡಿ

ಈ ಸೀರೆಯನ್ನು ಉಡುವವರು ಆದಷ್ಟೂ ಪರ್ಲ್ ಇಲ್ಲವೇ ಕ್ರಿಸ್ಟಲ್ ಅಥವಾ ಸ್ಟೋನ್ಸ್ ಜ್ಯುವೆಲರಿ ಧರಿಸಬಹುದು. ಎದ್ದು ಕಾಣಬೇಕಿದ್ದಲ್ಲಿ ಬ್ಲಾಕ್ ಮೆಟಲ್ ಸೆಟ್ ಧರಿಸಬಹುದು.

ಬಿಳಿಯ ಬಣ್ಣದ ಎಥ್ನಿಕ್ ವೇರ್ಸ್‌

ಬಿಳಿಯ ನಾನಾ ಶೇಡ್ನ ಎಥ್ನಿಕ್ವೇರ್ ಗೋಲ್ಡನ್ ಹ್ಯಾಂಡ್ವರ್ಕ್ನಲ್ಲಿ ದೊರೆಯುತ್ತಿವೆ. ಬಿಳಿ ಬಣ್ಣದ ಕುರ್ತಾ, ಚೂಡಿದಾರ್, ಸೆಲ್ವಾರ್ ಅಥವಾ ಸ್ಕರ್ಟ್ ಕೂಡ ಧರಿಸಬಹುದು. ಹೊಸತನ್ನು ಕೊಳ್ಳದೇ ಹಳೆಯ ವೈಟ್ ಡ್ರೆಸ್ ಧರಿಸುವುದಾದಲ್ಲಿ ಹೊಸ ಜ್ಯುವೆಲರಿ ಧರಿಸುವುದರ ಮೂಲಕ ಈ ಡ್ರೆಸ್ಗಳಿಗೆ ನ್ಯೂ ಲುಕ್ ನೀಡಬಹುದು.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author