ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jewel Fashion 2026: ಜೆನ್‌ ಝೀ ಹುಡುಗಿಯರನ್ನು ಸೆಳೆದ ಪಾಯಲ್‌ ರಜಪೂತ್‌ ಧರಿಸಿದ ಲೇಯರ್ಡ್ ಜುಮ್ಕಾ ಮಾಟಿ

Payal Rajput: ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಪಾಯಲ್‌ ರಜಪೂತ್‌ ಅತ್ಯಾಕರ್ಷಕ ಲೆಹೆಂಗಾಗೆ ಮ್ಯಾಚ್‌ ಮಾಡಿ, ಧರಿಸಿದ್ಧ ಲೇಯರ್ಡ್ ಜುಮ್ಕಾ ಮಾಟಿ ಇಡೀ ಲುಕ್‌ಗೆ ಸಾಥ್‌ ನೀಡುವುದರೊಂದಿಗೆ ಜ್ಯುವೆಲ್‌ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಗೋಲ್ಡ್ ಹೊರತಾಗಿ ಇತರೇ ಮೆಟಲ್‌ ಜ್ಯುವೆಲರಿಗಳನ್ನು ಇಷ್ಟಪಡುವ ಜೆನ್‌ ಝೀ ಹುಡುಗಿಯರನ್ನೂ ಕೂಡ ಆಕರ್ಷಿಸಿದೆ.

ಚಿತ್ರಗಳು: ಪಾಯಲ್‌ ರಜಪೂತ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಪಾಯಲ್‌ ರಜಪೂತ್‌ (Payal Rajput) ಧರಿಸಿದ್ಧ ಲೇಯರ್ಡ್ ಜುಮ್ಕಾ ಮಾಟಿ (Jewel Fashion 2026) ಸದ್ಯ ಜೆನ್‌ ಝೀ ಹುಡುಗಿಯರನ್ನು ಸೆಳೆದಿದೆ. ಹೌದು, ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಪಾಯಲ್‌ ರಜಪೂತ್‌ ಅತ್ಯಾಕರ್ಷಕ ಲೆಹೆಂಗಾಗೆ ಮ್ಯಾಚ್‌ ಮಾಡಿ, ಧರಿಸಿದ್ಧ ಲೇಯರ್ಡ್ ಜುಮ್ಕಾ ಮಾಟಿ ಇಡೀ ಲುಕ್‌ಗೆ ಸಾಥ್‌ ನೀಡುವುದರೊಂದಿಗೆ ಜ್ಯುವೆಲ್‌ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಗೋಲ್ಡ್ ಹೊರತಾಗಿ ಇತರೇ ಮೆಟಲ್‌ ಜ್ಯುವೆಲರಿಗಳನ್ನು ಇಷ್ಟಪಡುವ ಜೆನ್‌ ಝೀ ಹುಡುಗಿಯರನ್ನು ಕೂಡ ಆಕರ್ಷಿಸಿದೆ.

Payal Rajput

ಬ್ಲ್ಯಾಕ್‌ ಮೆಟಲ್‌ ಜುಮ್ಕಾ ಮಾಟಿ

ಅಂದಹಾಗೆ, ಪಾಯಲ್‌ ರಜಪೂತ್‌ ಧರಿಸಿದ್ಧ ಮಾಟಿ ಗೋಲ್ಡ್ ಶೇಡ್‌ನದ್ದಲ್ಲ! ಇದೊಂದು ಬ್ಲ್ಯಾಕ್‌ ಮೆಟಲ್‌ ಇಲ್ಲವೇ ಆಕ್ಸಿಡೈಸ್ಡ್‌ನದ್ದು. ಲೇಯರ್ಡ್ ಡಿಸೈನ್‌ ಹೊಂದಿರುವಂತದ್ದು, ಜತೆಗೆ ಮಲ್ಟಿ ಜುಮ್ಕಾ ಹೊಂದಿರುವಂತದ್ದು ಎನ್ನುವ ಜ್ಯುವೆಲ್‌ ಸ್ಟೈಲಿಸ್ಟ್ ರಿಯಾ ಪ್ರಕಾರ, ಈ ಶೈಲಿಯವು ಇತ್ತೀಚೆಗೆ ಹೆಚ್ಚು ಟ್ರೆಂಡಿಯಾಗಿವೆಯಂತೆ.

Actress Payal Rajput

ಟ್ರೆಂಡಿಯಾಗಿರುವ ಬ್ಲ್ಯಾಕ್‌ ಮೆಟಲ್‌ ಜುಮ್ಕಾ ಮಾಟಿ

ಇನ್ನು, ಗೋಲ್ಡ್ ಹಾಗೂ ಇಮಿಟೇಷನ್‌ ಜುಮ್ಕಾ ಮಾಟಿಗಳು ಇದುವರೆಗೂ ಹೆಚ್ಚು ಚಾಲ್ತಿಯಲ್ಲಿದ್ದವು. ಕೊಂಚ ದುಬಾರಿಯಾಗಿದ್ದವು ಕೂಡ. ಆದರೆ, ಈ ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನ ಜುಮ್ಕಾ ಮಾಟಿಗಳು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಜೆನ್‌ ಜಿ ಹುಡುಗಿಯರು ಇವುಗಳತ್ತ ವಾಲತೊಡಗಿದ್ದಾರೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್.

Layered Jhumka Maati

ಬ್ಲ್ಯಾಕ್‌ ಮೆಟಲ್‌ ಲೇಯರ್ಡ್ ಜುಮ್ಕಾ ಪ್ರಿಯರಿಗೆ ಟಿಪ್ಸ್

  • ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಹಕಾರಿ.
  • ಮಿಕ್ಸ್ ಮ್ಯಾಚ್‌ ಫ್ಯಾಷನ್‌ವೇರ್‌ಗಳೊಂದಿಗೆ ಧರಿಸಬಹುದು.
  • ಫ್ರೀ ಹೇರ್‌ಸ್ಟೈಲ್‌ಗೂ ಧರಿಸಬಹುದು.
  • ಎಲ್ಲಾ ಜ್ಯುವೆಲರಿಗಳು ಆಕ್ಸಿಡೈಸ್ದ್ ಇಲ್ಲವೇ ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನದ್ದಾಗಿದ್ದಲ್ಲಿ ಅಂದವಾಗಿ ಕಾಣಿಸಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author