-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಹುಬಲಿ ಸ್ಟೈಲಿನ ಕಾಶ್ಮೀರಿ ಜುಮ್ಕಾ ಇಯರಿಂಗ್ಸ್ (Jewel Fashion 2026) ಒಮ್ಮೆಯಾದರೂ ಧರಿಸಿದ್ದೀರಾ? ಹಾಗಾದಲ್ಲಿ ಒಮ್ಮೆ ಧರಿಸಿ ನೋಡಿ! ನಿಮ್ಮ ಇಡೀ ಲುಕ್ ಬದಲಾಗುವುದು. ಜತೆಗೆ ಟ್ರೆಡಿಷನಲ್ ಲುಕ್ ಜತೆಜತೆಗೆ ರಾಯಲ್ ಇಮೇಜ್ ನಿಮ್ಮದಾಗುವುದು ಹಾಗೆನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಕಾಶ್ಮೀರಿ ಜುಮ್ಕಾ ಪ್ರಿಯೆ ಟೀನಾ ದತ್ತಾ
ಟೆಲಿವುಡ್‌ನ ಕಿರುತೆರೆ ನಟಿ ಟೀನಾ ದತ್ತಾ ಈ ಶೈಲಿಯ ಇಯರಿಂಗ್ಸ್ ಪ್ರಿಯಳು ಎಂದರೂ ಅತಿಶಯೋಕ್ತಿಯಾಗದು. ಇದಕ್ಕೆ ಪೂರಕ ಎಂಬಂತೆ, ಅವರು ತಮ್ಮ ಬಹುತೇಕ ಫ್ಯಾಷನ್ ಶೂಟ್‌ಗಳಲ್ಲಿ ಗೋಲ್ಡ್ ಪ್ಲೇಟೆಡ್, ಬ್ಲ್ಯಾಕ್ ಅಥವಾ ವೈಟ್ ಇಲ್ಲವೇ ಸಿಲ್ವರ್ ಜ್ಯುವೆಲರಿ ಲಿಸ್ಟ್‌ಗೆ ಸೇರುವ ಈ ವಿನ್ಯಾಸದ ಇಯರಿಂಗ್ಸ್ ಧರಿಸಿಯೇ ಇರುತ್ತಾರೆ ಎನ್ನುವ ಜ್ಯುವೆಲ್ ಡಿಸೈನರ್ ಜಮುನಾ ಪ್ರಕಾರ, ಇತ್ತೀಚೆಗೆ ಈ ಇಯರಿಂಗ್ಸ್ ಎಲ್ಲಾ ವಯಸ್ಸಿನ ಮಾನಿನಿಯರನ್ನು ಅಲಂಕರಿಸುತ್ತಿವೆ ಎನ್ನುತ್ತಾರೆ.
ಕಾಶ್ಮೀರಿ ಜುಮ್ಕಾ ಇಯರಿಂಗ್ಸ್‌ಗೆ ಬಾಹುಬಲಿ ಸ್ಟೈಲ್ ಹೆಸರು ಯಾಕೆ?
ಮೂಲತಃ ಇದು ಕಾಶ್ಮೀರದ ಟ್ರೆಡಿಷನಲ್ ಜ್ಯುವೆಲ್. ಇದೀಗ ಗಡಿದಾಟಿ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಓಲೆಯೊಂದಿಗೆ ಮಲ್ಟಿ ಲೇಯರ್ ಜುಮ್ಕಾಗಳನ್ನು ಹಾಗೂ ಕಿವಿಗೆ ಹಾಕುವ ಮಾಟಿಯಂತಹ ಸರಪಳಿಯನ್ನು ಹೊಂದಿರುತ್ತವೆ. ಈ ಶೈಲಿಯ ಇಯರಿಂಗ್‌ಗಳನ್ನು ಬಾಹುಬಲಿ ಸಿನಿಮಾದಲ್ಲೂ ಕೂಡ ಅತಿ ಹೆಚ್ಚಾಗಿ ಬಳಸಲಾಗಿತ್ತು. ತದನಂತರ ಇವು ಅದೇ ಹೆಸರಿನಲ್ಲಿ ಪ್ರಚಲಿತಕ್ಕೆ ಬಂದವು ಎನ್ನುತ್ತಾರೆ ಜ್ಯುವೆಲ್ ಎಕ್ಸ್‌ಪರ್ಟ್ ರೋಶನಿ.
ಇಯರಿಂಗ್ಸ್ ವಿಶೇಷತೆ
ಸಿಂಪಲ್ ಆಗಿ ಹೇಳುವುದಾದಲ್ಲಿ ಭುಜವನ್ನು ಮುಟ್ಟುವ ಉದ್ದುದ್ದದ ಮಲ್ಟಿ ಲೇಯರ್ಡ್ ಜುಮ್ಕಾಗಳಿವು. ಕೂದಲಿನ ವಿನ್ಯಾಸಕ್ಕೆ ಸೇರಿಸುವಂತಹ ಲೇಯರ್ಡ್ ಲುಕ್ ನೀಡುವಂತಹ ಚೈನ್‌ಗಳನ್ನು ಒಳಗೊಂಡಿರುತ್ತವೆ.
Jewel Fashion 2026: ಮಾನಿನಿಯರನ್ನು ಸಿಂಗರಿಸುತ್ತಿರುವ 3 ಬಗೆಯ ಕುಂದನ್ ಚೋಕರ್ ನೆಕ್ಲೇಸ್‌ಗಳಿವು!
ಮೇಕೋವರ್ ನಂತರ ಧರಿಸಿ
ಹೇರ್ ಸ್ಟೈಲ್ ಹಾಗೂ ಔಟ್‌ಫಿಟ್ ಧರಿಸಿದ ನಂತರ ಕೊನೆಯಲ್ಲಿ ಇವನ್ನು ಧರಿಸುವುದು ಉತ್ತಮ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)