Jewel Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್ ಆಭರಣಗಳು
Jewel Trend 2025: ವರಮಹಾಲಕ್ಷ್ಮಿ ಹಬ್ಬದಂದು ಟ್ರೆಡಿಷನಲ್ ಉಡುಪಿನೊಂದಿಗೆ ಟ್ರೆಡಿಷನಲ್ ಆಭರಣಗಳನ್ನು ಧರಿಸುವ ಟ್ರೆಂಡ್ ಮರಳಿದೆ. ಈ ಫೆಸ್ಟೀವ್ ಸೀಸನ್‌ನಲ್ಲಿ ಯಾವ್ಯಾವ ಬಗೆಯ ಜ್ಯುವೆಲರಿಗಳು ಚಾಲ್ತಿಯಲ್ಲಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಸಾಂಪ್ರದಾಯಿಕ ಲುಕ್‌ಗೆ ಟ್ರೆಡಿಷನಲ್ ಡಿಸೈನ್‌ನ ಆಭರಣಗಳನ್ನು ಧರಿಸುವ ಟ್ರೆಂಡ್ ಈ ಫೆಸ್ಟೀವ್ ಸೀಸನ್‌ನಲ್ಲಿ ಮರಳಿದೆ.
ಟ್ರೆಡಿಷನಲ್ ಸೀರೆಗಳೊಂದಿಗೆ ಆಭರಣಗಳ ಸೆಟ್ ಮ್ಯಾಚಿಂಗ್
ಈ ಬಾರಿಯ ಫೆಸ್ಟೀವ್ ಸೀಸನ್‌ನಲ್ಲಿ ಮಿಕ್ಸ್ ಮ್ಯಾಚ್ ಆಭರಣಗಳನ್ನು ಧರಿಸುವ ಕಾನ್ಸೆಪ್ಟ್ ಮಾಯವಾಗಿದೆ. ಬದಲಿಗೆ ಟ್ರೆಡಿಷನಲ್ ಲುಕ್ ನೀಡುವ ಆಭರಣಗಳ ಸೆಟ್ ಧರಿಸುವ ಟ್ರೆಂಡ್ ಮರಳಿದೆ. ಅದು ಆಂಟಿಕ್ ಜ್ಯುವೆಲರಿಗಳಾಗಬಹುದು ಅಥವಾ ಟ್ರೆಡಿಷನಲ್ ಜ್ಯುವೆಲರಿಗಳಾಗಬಹುದು ಅಥವಾ ಸ್ಟೇಟ್‌ಮೆಂಟ್ ಬಂಗಾರದ ಆಭರಣಗಳಾಗಬಹುದು ಎನ್ನುತ್ತಾರೆ ಜ್ಯುವೆಲರಿ ಎಕ್ಸ್‌ಪರ್ಟ್ ರಮಣ್.
ಚಾಲ್ತಿಗೆ ಬಂದ ಆಭರಣ ಸೆಟ್‌ಗಳಿವು
ಆಭರಣ ಸೆಟ್‌ಗಳಲ್ಲಿ ಉದಾಹರಣೆಗೆ ಕಿವಿಯೋಲೆ, ಹಾರ, ಬಳೆ ಸೇರಿದ ಲಕ್ಷ್ಮಿ ಸೆಟ್, ಫ್ಲೋರಲ್ ಸ್ಟಡ್ಸ್, ಹಾರ, ಕಡ, ಸೊಂಟದ ಪಟ್ಟಿ ಸೇರಿದ ಜ್ಯುವೆಲರಿ ಸೆಟ್, ಎಮರಾಲ್ಡ್, ರೂಬಿ ಅಥವಾ ಪರ್ಲ್‌ನಿಂದ ಸಿದ್ಧಪಡಿಸಿದ ಜುಮಕಿ, ನೆಕ್ಲೇಸ್, ಹಾರ, ಬಾಜುಬಂದ್ ಹಾಗೂ ಮಾಟಿ ಸೇರಿದ ಸ್ಟೇಟ್‌ಮೆಂಟ್ ಆಭರಣಗಳನ್ನು ಹಬ್ಬದ ಉಡುಗೆ ಅಥವಾ ರೇಷ್ಮೆ ಸೀರೆಯೊಂದಿಗೆ ಧರಿಸುವುದು ಈ ಹಬ್ಬದ ಸೀಸನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೀರೆ ಜತೆ ಮ್ಯಾಚಿಂಗ್ ಹೀಗೆ
ಸಿಂಪಲ್ ಬಾರ್ಡರ್ ಸೀರೆಗಳೊಂದಿಗೆ ಗ್ರ್ಯಾಂಡ್ ಹಾಗೂ ಲೇಯರ್ ಲುಕ್ ನೀಡುವಂತಹ ಹೆವ್ವಿ ವಿನ್ಯಾಸದ ಇಮಿಟೇಷನ್ ಅಥವಾ ಬಂಗಾರದ ಸೆಟ್ ಆಭರಣಗಳನ್ನು ಧರಿಸಬಹುದು. ಇನ್ನು ಸೀರೆಯ ಒಡಲ ತುಂಬೆಲ್ಲಾ ಬೂಟಾ ಇರುವಂತಹ ರೇಷ್ಮೆ ಸೀರೆಯೊಂದಿಗೆ ಸಾದಾ ಡಿಸೈನ್ ಅಥವಾ ಹೆಚ್ಚು ಡಿಸೈನ್ ಇರದ ಆಭರಣದ ಸೆಟ್ ಧರಿಸಬಹುದು. ಇನ್ನು ಫ್ಲೋರಲ್ ಅಥವಾ ಪ್ರಿಂಟ್ಸ್ ಇರುವ ಡಿಸೈನ್‌ನ ರೇಷ್ಮೆ ಸೀರೆ ಜತೆಗೆ ಪರ್ಲ್, ಎಮರಾಲ್ಡ್, ರೂಬಿ ಸೆಟ್‌ಗಳನ್ನು ಧರಿಸಬಹುದು ಎಂದು ಸಿಂಪಲ್ ಸಲಹೆಗಳನ್ನು ನೀಡುತ್ತಾರೆ ಜ್ಯುವೆಲರಿ ಎಕ್ಸ್‌ಪರ್ಟ್ಸ್.
ಟ್ರೆಡಿಷನಲ್ ಲುಕ್‌ಗಾಗಿ ಆಭರಣದ ಜತೆ ಸ್ಟೈಲಿಂಗ್ ಹೀಗಿರಲಿ
- ಸ್ಟೇಟ್‌ಮೆಂಟ್ ಆಭರಣಗಳ ಸೆಟ್ ಜತೆ ಮ್ಯಾಚಿಂಗ್ ಬಿಂದಿ ಹಣೆಗೆ ಇರಿಸಿ.
- ನಿಮ್ಮ ಕತ್ತು ಉದ್ದವಿದ್ದಲ್ಲಿ ಲಾಂಗ್ ಗ್ರ್ಯಾಂಡ್ ಆಭರಣದ ಸೆಟ್ ಧರಿಸಿ.
- ಕತ್ತು ಭುಜಕ್ಕೆ ಅಂಟಿಕೊಂಡಂತೆ ಇದ್ದಲ್ಲಿ ಆದಷ್ಟೂ ಭಾರಿ ಡಿಸೈನ್ ನೆಕ್ಲೇಸ್ ಧರಿಸುವುದು ಬೇಡ.