ಬೆಂಗಳೂರು: ಉದ್ಯಾನನಗರಿ ಅರಮನೆ ಮೈದಾನದಲ್ಲಿ ವರ್ಣರಂಜಿತವಾಗಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ 2026 (Miss universe Karnataka 2026) ಪೇಜೆಂಟ್‌ನ ಫಿನಾಲೆಯಲ್ಲಿ ಲೇಖನಾ ಹೆಗ್ಡೆ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೇತರಾದರು. ಇನ್ನುಳಿದಂತೆ, ಕ್ರಮವಾಗಿ ಮೊದಲ ರನ್ನರ್ ಅಪ್ ಸ್ಫೂರ್ತಿ ಶೆಟ್ಟಿ, ಜಾಗೃತಿ ಚೋಪ್ರಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು.
ಕಳೆದ ಸಾಲಿನ ಮಿಸ್ ಯೂನಿವರ್ಸ್ ಕರ್ನಾಟಕ 2025ರ ವಿಜೇತರಾಗಿದ್ದ ವಂಶಿ ಉದಯ್ ಲೇಖನಾಗೆ ಕಿರೀಟವನ್ನು ಮುಡಿಗೇರಿಸಿ, ಸಂಭ್ರಮಿಸಿದರು.
ವಿಡಿಯೊ ಇಲ್ಲಿದೆ:
ರ‍್ಯಾಂಪ್ ವಾಕ್‌ನಲ್ಲಿ ನಾನಾ ರೌಂಡ್ಸ್
ಟ್ರೆಡಿಷನಲ್ ರೌಂಡ್ ಹಾಗೂ ರೆಸಾರ್ಟ್ವೇರ್ ರೌಂಡ್‌ಗಳು ನೋಡುಗರ ಮನಸೂರೆಗೊಂಡವು. ಡಿಜೆ ಮ್ಯೂಸಿಕ್ ಮಧ್ಯೆ ನಡೆದ ರ್ಯಾಂಪ್ ವಾಕ್ ರ‍್ಯಾಂಪ್ ಡ್ಯಾನ್ಸ್ ಹೊಸತನವನ್ನು ಮೂಡಿಸಿದವು. ಗ್ಲಾಮರ್ ಹಾಗೂ ಟ್ಯಾಲೆಂಟ್ ಸಮಾಗಮಕ್ಕೆ ಈ ವೇದಿಕೆ ಸಾಕ್ಷಿಯಾಗಿತ್ತು. ಈ ಬ್ಯೂಟಿ ಪೇಜೆಂಟ್‌ನಲ್ಲಿ ವಿಜೇತರಾಗುವ ಆಕಾಂಕ್ಷಿಗಳ ಲಿಸ್ಟ್‌ನಲ್ಲಿ ಒಟ್ಟಾರೆ 38 ಸ್ಪರ್ಧಾಳುಗಳು ಭಾಗವಹಿಸಿದ್ದರು.

2ನೇ ಬಾರಿ ಡಿಜಿಟಲ್ ಪಾರ್ಟ್‌ನರ್ ಆದ ವಿಶ್ವವಾಣಿ ಟಿವಿ ಸ್ಪೆಷಲ್
ಸಂತಸದ ವಿಷಯವೆಂದರೇ, ಸತತವಾಗಿ ಎರಡನೇ ಬಾರಿಯೂ ಕೂಡ ವಿಶ್ವವಾಣಿ ಟಿವಿ ಸ್ಪೆಷಲ್ ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ಗೆ ಡಿಜಿಟಲ್ ಪಾರ್ಟ್ನರ್ ಆಗಿ ಕೈ ಜೋಡಿಸಿತ್ತು.
ಮಿಸ್ ಟೀನ್ ಕಿರೀಟ ಮುಡಿಗೇರಿಸಿಕೊಂಡ ಸಮೀಕ್ಷಾ
ಈ ಬಾರಿ ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಮಿಸ್ ಟೀನ್ ಟೈಟಲ್‌ಗಾಗಿಯೂ ಸ್ಪರ್ಧೆ ನಡೆಸಲಾಯಿತು. ಸಮೀಕ್ಷಾ ಮಿಸ್ ಟೀನ್ ಆಗಿ ಆಯ್ಕೆಗೊಂಡು ಕಿರೀಟ ಮುಡಿಗೇರಿಸಿಕೊಂಡರೇ, ಇನ್ನುಳಿದಂತೆ ಕ್ರಮವಾಗಿ ವರ್ಷಾ ಹಾಗೂ ಆಯುಷ್ಮಾ ಶಾಂಭವಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ಇದೇ ಸಂದರ್ಭದಲ್ಲಿ ವಿವಾಹಿತರಿಗೆ ನಡೆದ ಮಿಸೆಸ್ ಇಂಡಿಯಾ ಕೆಟಗರಿಯಲ್ಲಿ ವಿಜೇತರಾದವರಿಗೂ ಕಿರೀಟವನ್ನು ಮುಡಿಗೇರಿಸಲಾಯಿತು.
ಜ್ಯೂರಿ ಪಾನೆಲ್‌ನಲ್ಲಿ ಫ್ಯಾಷನ್ ಸೆಲೆಬ್ರೆಟಿಗಳು
ಫ್ಯಾಷನ್ ಕ್ಷೇತ್ರದ ದಿಗ್ಗಜರಾದ ನಿಕಿಲ್ ಆನಂದ್, ಅಮ್ಜದ್ ಖಾನ್, ಮಹಮ್ಮದ್ ಸೈಜಲ್, ಮಿಸ್ ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮಾ ಹಾಗೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್ ಜ್ಯೂರಿ ಟೀಮ್‌ನಲ್ಲಿದ್ದರು. ಶೋ ಡೈರೆಕ್ಟರ್ ಶ್ರೀಕಾಂತ್ ಶೆಟ್ಟರ್ ಬ್ಯೂಟಿ ಪೇಜೆಂಟ್‌ನ ಉಸ್ತುವಾರಿ ವಹಿಸಿದ್ದರು.

ನಂದಿನಿ ನಾಗರಾಜ್ ನೇತೃತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆ
ಮಿಸ್ ಯೂನಿವರ್ಸ್ ಕರ್ನಾಟಕ ರಿಜಿನಲ್ ಡೈರೆಕ್ಟರ್ ನಂದಿನಿ ನಾಗರಾಜ್ ನೇತೃತ್ವದಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ ರಾಷ್ಟ್ರದ ಹಾಗೂ ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದ ಫ್ಯಾಷನ್ ಸೆಲೆಬ್ರೆಟಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)