-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆಶ್ ಡ್ರೆಸ್‌ಗಳು ಈ ಸೀಸನ್ ಎಂಡ್‌ನಲ್ಲೂ ಟ್ರೆಂಡಿಯಾಗಿವೆ. ಅದರಲ್ಲೂ ನೋಡಲು ಆಕರ್ಷಕವಾಗಿ ಕಾಣಿಸುವ ಇವುಗಳ ಫ್ಯಾಷನ್ (Mesh Dress Fashion 2026) ಇಂದಿಗೂ ಸೈಡಿಗೆ ಸರಿದಿಲ್ಲ!. ಸೂಕ್ಷ್ಮ ಫ್ಯಾಬ್ರಿಕ್‌ನಲ್ಲಿ ಜಾಲರಿಯಂತಿರುವ ಇವನ್ನು ಮೆಶ್ ಡ್ರೆಸ್ ಎನ್ನಲಾಗುತ್ತದೆ. ಇತ್ತೀಚೆಗಂತೂ ಇವುಗಳಲ್ಲಿ ಲೈಟ್‌ವೈಟ್ ಫ್ಯಾಬ್ರಿಕ್‌ನವು ಬಂದಿವೆ. ಹಾಗಾಗಿ ಇತ್ತೀಚೆಗೆ ಇವನ್ನು ಧರಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಭಾರವಿಲ್ಲದ ಈ ಡ್ರೆಸ್‌ಗಳು ಕಂಫರ್ಟಬಲ್ ಆಗಿರುವ ಕಾರಣ, ಟ್ರೆಂಡ್‌ನಿಂದ ಹೊರ ಬಿದ್ದಿಲ್ಲ ಎನ್ನುತ್ತಾರೆ ಮಾರಾಟಗಾರರು.
ಟ್ರೆಂಡಿಯಾಗಿರುವ ಮೆಶ್ ಡ್ರೆಸ್‌ಗಳಿವು
ಅಂದಹಾಗೆ, ಮೆಶ್ ಡ್ರೆಸ್‌ಗಳು ನೋಡಲು ನೆಟ್ಟೆಡ್ ಫ್ಯಾಬ್ರಿಕ್‌ನಂತಿರುತ್ತವೆ. ಚಿಕ್ಕ ಚಿಕ್ಕ ಜಾಲರಿಯಂತೆ ಕಾಣಿಸುತ್ತವೆ. ಎಂದಿನಂತೆ ಬೇಸಿಗೆ ಸೀಸನ್‌ನ ಆರಂಭದಲ್ಲೆ ಹಂಗಾಮ ಎಬ್ಬಿಸಿದ್ದವು. ಅವುಗಳಲ್ಲಿ ಸ್ಟ್ರಾಪ್, ಸ್ಟ್ರಾಪ್‌ಲೆಸ್, ಟ್ಯೂಬ್ ಡ್ರೆಸ್, ಬಾಡಿಕಾನ್ ಡ್ರೆಸ್, ಫ್ರಾಕ್ ಹಾಗೂ ಮಿಡಿ ಡ್ರೆಸ್‌ಗಳು ಪಾಪುಲರ್ ಆದವು. ಫ್ಲೋರಲ್ ಹಾಗೂ ಮಾರ್ಬಲ್ ಪ್ರಿಂಟ್ಸ್ ಇರುವಂತಹ ಕಲರ್‌ಫುಲ್ ಡ್ರೆಸ್‌ಗಳು ಟಾಪ್ ಹಿಟ್ ಲಿಸ್ಟ್ ಸೇರಿದವು. ಫ್ಯಾಷನ್ ಪ್ರಿಯರನ್ನು ಸವಾರಿ ಮಾಡಿದವು ಎನ್ನುತ್ತಾರೆ ಫ್ಯಾಷನಿಸ್ಟಾ ಜೀತ್.
ಮೆಶ್ ಡ್ರೆಸ್‌ಗಳ ಆಯ್ಕೆ
ಈ ಹಿಂದೆ ಮೆಶ್ ಡ್ರೆಸ್‌ಗಳು ಕೊಂಚ ಭಾರವಾಗಿದ್ದವು. ಪಾರದರ್ಶಕವಾಗಿದ್ದವು. ಆದರೆ, ಈಗ ಎಲ್ಲವೂ ಬದಲಾಗಿದೆ. ಇವು ಕೂಡ ಲೈಟ್‌ವೈಟ್ ಆಗಿವೆ. ಆಯ್ಕೆ ಮಾಡುವಾಗ ತೀರಾ ಟೈಟಾದವನ್ನು ಆಯ್ಕೆ ಮಾಡಬೇಡಿ. ಉಸಿರುಗಟ್ಟಿಸಬಹುದು. ಮೊದಲಿಗೆ ಟ್ರಯಲ್ ನೋಡಿ ಖರೀದಿಸಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
Belt Dress Fashion 2026: ವೈವಿಧ್ಯಮಯ ವಿನ್ಯಾಸಗಳಲ್ಲಿ ಬಂತು ಬೆಲ್ಟ್ ಡ್ರೆಸ್
ಮೆಶ್ ಡ್ರೆಸ್ ಸ್ಟೈಲಿಂಗ್
- ಈ ಉಡುಗೆಗಳು ವೆಸ್ಟರ್ನ್ ಲುಕ್ ನೀಡುವುದರಿಂದ ಸಿಂಪಲ್ ಲುಕ್‌ಗೆ ಆದ್ಯತೆ ನೀಡಿ.
- ಕೊಂಚ ಲೂಸಾಗಿರುವ ಮೆಶ್ ಡ್ರೆಸ್ಸಿಗೆ ಲೇಯರ್ ಲುಕ್ ಕೂಡ ನೀಡಬಹುದು.
- ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ಫ್ಯಾಬ್ರಿಕ್ ಕಿತ್ತು ಹೋಗಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)