-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ ಮಾನ್ಸೂನ್ ಫ್ಯಾಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಮಳೆಯಲ್ಲಿ ಕೊಡೆ ಹಿಡಿದು ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ.
ತೇಜಸ್ವಿನಿ ಶರ್ಮಾ ಮಾನ್ಸೂನ್ ಡ್ರೆಸ್
ಅಂದಹಾಗೆ, ತೇಜಸ್ವಿನಿ ಶರ್ಮಾ ಧರಿಸಿರುವುದು ಪಕ್ಕಾ ಮಾನ್ಸೂನ್ ಡ್ರೆಸ್‌ಕೋಡ್ ಏನಲ್ಲ! ಆದರೆ, ಈ ಉಡುಗೆ ಈ ಮಳೆಯಲ್ಲಿನ ಫೋಟೋಶೂಟ್‌ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಎಂದರೇ, ನೋಡಲು ಮನಮೋಹಕವಾಗಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಅವರ ಪ್ರಕಾರ, ಈ ಉಡುಗೆ ಹಾಗೂ ಮೇಕೋವರ್ ತೇಜಸ್ವಿನಿ ಶರ್ಮಾ ಅವರನ್ನು ಅತ್ಯಾಕರ್ಷಕವಾಗಿಸಿದೆಯಂತೆ.
ಪೆಪ್ಲಂ ಜತೆಗೆ ಮ್ಯಾಕ್ಸಿ ಸ್ಕರ್ಟ್
ಶ್ವೇತ ವರ್ಣದ ಟೈಯರ್ಡ್ ಮ್ಯಾಕ್ಸಿ ಸ್ಕರ್ಟ್‌ಗೆ ಬ್ಲ್ಯೂ ಹಾಗೂ ವೈಟ್ ಪ್ರಿಂಟೆಡ್ ಪೆಪ್ಲಂ ಟಾಪನ್ನು ತೇಜಸ್ವಿನಿ ಶರ್ಮಾ ಧರಿಸಿದ್ದಾರೆ. ಅವರ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಈ ಉಡುಗೆ ಕೂಡ ಫಿಟ್ ಹಾಗೂ ಮ್ಯಾಚ್ ಆಗಿದೆ.
ಕ್ಲಾಸಿಕ್ ಲುಕ್ ನೀಡಿದ ಔಟ್‌ಲುಕ್
ನೋಡಲು ಲೇಯರ್ ಲುಕ್‌ನಂತೆ ಕಾಣಿಸುವ ಈ ಔಟ್‌ಫಿಟ್ ಅದರೊಂದಿಗೆ ಅವರು ಹಿಡಿದಿರುವ ಪಾರದರ್ಶಕವಾದ ಛತ್ರಿ ಅವರಿಗೆ ಕಂಪ್ಲೀಟ್ ಮಾನ್ಸೂನ್ ಫ್ಯಾಷನ್ ಲುಕ್ ನೀಡಿದೆ. ಕ್ಲಾಸಿಯಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರು.
ತೇಜಸ್ವಿನಿ ಶರ್ಮಾ ಮಾನ್ಸೂನ್ ಲವ್
ಇನ್ನು, ತೇಜಸ್ವಿನಿ ಶರ್ಮಾ ಅವರ ಮಾನ್ಸೂನ್ ಲವ್ ಈ ಫ್ಯಾಷನ್ ಶೂಟ್ ನೋಡಿದಾಗಲೇ ತಿಳಿಯುತ್ತದೆ. ಆ ಮಟ್ಟಿಗೆ ಅವರು ಈ ಲುಕ್‌ನಲ್ಲಿ ಅಂದವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)