ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri/Dasara Trend 2025: ಫೆಸ್ಟೀವ್ ಸೀಸನ್‌ಗೂ ಮುನ್ನವೇ ಎಂಟ್ರಿ ಕೊಟ್ಟ ನವರಾತ್ರಿ ಟ್ರೆಡಿಷನಲ್‌ ವೇರ್ಸ್

Navaratri/Dasara Trend 2025: ಫೆಸ್ಟೀವ್ ಸೀಸನ್‌ಗೂ ಮುನ್ನವೇ ನವರಾತ್ರಿ/ದಸರಾಗೆ ಟ್ರೆಡಿಷನಲ್ ವೆರ್ಸ್ ಹಾಗೂ ಎಥ್ನಿಕ್ ಫ್ಯಾಷನ್‌ವೇರ್ಸ್ ಬಿಡುಗಡೆಗೊಂಡಿವೆ. ಈ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡಲು ಯಾವ್ಯಾವ ಬಗೆಯ ಗ್ರ್ಯಾಂಡ್ ಡಿಸೈನರ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ? ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ಫೆಸ್ಟೀವ್ ಸೀಸನ್ ಇನ್ನು ಶುರುವಾಗಿಲ್ಲ, ಆಗಲೇ ಮುಂಬರುವ ನವರಾತ್ರಿ ಹಾಗೂ ದಸರಾ ಟ್ರೆಡಿಷನಲ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹೌದು, ಈಗಾಗಲೇ ನವರಾತ್ರಿ ಹಾಗೂ ದಸರೆಯ ಶಾಪಿಂಗ್ ಶುರುವಾಗಿದೆ. ಮುಂಬರುವ ಸೀಸನ್‌ನಲ್ಲಿ ಒಂದರ ಹಿಂದೊಂದರಂತೆ ಆಗಮಿಸುವ ಸಾಲು ಸಾಲು ಹಬ್ಬಗಳಿಗೆ ಪೂರಕವಾಗುವಂತೆ, ಎಲ್ಲೆಡೆ ಎಥ್ನಿಕ್ ಲುಕ್‌ಗೆ ಸಾಥ್ ನೀಡುವ ಹೊಸ ಟ್ರೆಂಡಿ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದಿಡಿದು ಯುವಕ-ಯುವತಿಯರು ಹಾಗೂ ಹಿರಿಯರವರೆಗೂ ನಾನಾ ಶೈಲಿಯ ಟ್ರೆಡಿಷನಲ್‌ವೇರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

2/5

ನವರಾತ್ರಿ /ದಸರಾ ಫ್ಯಾಷನ್‌ವೇರ್ಸ್ ಬಿಡುಗಡೆ

ಎಂದಿನಂತೆ ಈ ಬಾರಿಯೂ ನವರಾತ್ರಿ ಹಾಗೂ ದಸರೆಯ ಸೀಸನ್‌ವೇರ್‌ಗಳು, ಟ್ರೆಡಿಷನಲ್ ಲುಕ್ ನೀಡುವಂತಹ ಡಿಸೈನರ್‌ವೇರ್‌ಗಳು ಆಗಮಿಸಿವೆ. ಇನ್ನು, ಟೀನೇಜ್ ಹುಡುಗಿಯರಿಗಾಗಿ ತೀರಾ ಟ್ರೆಡಿಷನಲ್ ಎಂದೆನಿಸದ ಸೆಮಿ ಹಾಗೂ ಇಂಡೋ-ವೆಸ್ಟನ್‌ವೇರ್‌ಗಳು ಕೂಡ ಕಾಲಿಟ್ಟಿವೆ.

ಕಥೆ ಹೇಳುವ ಡಿಸೈನರ್‌ವೇರ್ಸ್

ಇನ್ನು, ನಾನಾ ಬಗೆಯ ಹಿಸ್ಟಾರಿಕಲ್ ಹಾಗೂ ಮೈಥಲಾಜಿಕಲ್ ಕಥಾನಕಗಳನ್ನೊಳಗೊಂಡ ಮನಮೋಹಕ ಪ್ರಿಂಟೆಡ್ ಡಿಸೈನರ್‌ವೇರ್‌ಗಳು, ಗಾಗ್ರಾಗಳು, ಲೆಹೆಂಗಾಗಳು, ರೇಷ್ಮೆ ಹಾಗೂ ಸೆಮಿ ಸಿಲ್ಕ್ ಸೀರೆಗಳು ಮಾನಿನಿಯರನ್ನು ಸೆಳೆಯುತ್ತಿವೆ.

3/5

ಗ್ರ್ಯಾಂಡ್ ಲುಕ್ ನೀಡುವ ಡಿಸೈನರ್‌ವೇರ್ಸ್ ಲಗ್ಗೆ

ಹೆವ್ವಿ ಡಿಸೈನರ್‌ವೇರ್ ವಿಷಯಕ್ಕೆ ಬಂದಲ್ಲಿ, ಗಾಗ್ರ ಹಾಗೂ ಲೆಹೆಂಗಾಗಳಲ್ಲಿ ಊಹೆಗೂ ಮೀರಿದ ಗ್ರ್ಯಾಂಡ್ ವಿನ್ಯಾಸಗಳು ಲಗ್ಗೆ ಇಟ್ಟಿವೆ. ಹೆಚ್ಚು ಭಾರವೆನಿಸದ ಮನಮೋಹಕ ವರ್ಣದ ಮಲ್ಟಿ ಶೇಡ್‌ನ ಪ್ರಿಂಟೆಡ್ ಲೆಹೆಂಗಾ, ಗಾಗ್ರಾ, ಶರಾರ ಸೆಟ್, ಸಲ್ವಾರ್, ಚೂಡಿದಾರ್ ಅನಾರ್ಕಲಿ ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ. ಅದರಲ್ಲೂ ಲೇಯರ್ ಲೆಹೆಂಗಾ, ಶೀರ್ ಲೆಹೆಂಗಾ ಹಾಗೂ ಮಲ್ಟಿಪಲ್ ಶೇಡ್ ಲೆಹೆಂಗಾಗಳು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಪ್ರಿಯಾ ಪ್ರಶಾಂತ್.

4/5

ಆಕರ್ಷಕ ಮೆನ್ಸ್ ಎಥ್ನಿಕ್‌ವೇರ್ಸ್

ನವರಾತ್ರಿಯ ಮೆನ್ಸ್ ಎಥ್ನಿಕ್‌ವೇರ್ಸ್‌ನಲ್ಲಿ ಸಾಕಷ್ಟು ಅಪ್ಷನ್‌ಗಳು ಬಂದಿವೆ. ಹಿಂದಿನಂತೆ, ಪುರುಷರು ಯಾವುದೋ ಒಂದು ಎಥ್ನಿಕ್ ಉಡುಪು ಹಾಕಿದಾರಾಯಿತು ಎಂದು ಕೊಳ್ಳುವಂತಿಲ್ಲ! ಯಾಕೆಂದರೆ, ಹಳೆಯ ವಿನ್ಯಾಸಕ್ಕೆ ಹೊಸ ಟಚ್ ನೀಡಿರುವ ಎಥ್ನಿಕ್ ಫಾರ್ಮಲ್ಸ್ ಬಿಡುಗಡೆಗೊಂಡಿವೆ ಎನ್ನುತ್ತಾರೆ ಮಾಡೆಲ್ ವಿನಯ್.

5/5

ಚಿಣ್ಣರಿಗೆ ಮಿನಿ ಗ್ರ್ಯಾಂಡ್ ಡಿಸೈನರ್‌ವೇರ್ಸ್

ಅಷ್ಟ್ಯಾಕೆ! ಮಕ್ಕಳಿಗೂ ಮಿನಿ ಡಿಸೈನರ್‌ವೇರ್‌ಗಳು ಆಗಮಿಸಿವೆ. ಮಿನಿ ಲೆಹೆಂಗಾ, ಶರಾರ, ಗಾಗ್ರಗಳು ಪುಟ್ಟ ಹೆಣ್ಣುಮಕ್ಕಳಿಗೆಂದು ಆಗಮಿಸಿದ್ದರೇ, ಗಂಡು ಮಕ್ಕಳಿಗೆ ಧೋತಿ, ಕುರ್ತಾ, ಶೆರ್ವಾನಿಗಳು ಮಿನಿ ಸೈಝ್‌ನಲ್ಲಿ ಎಂಟ್ರಿ ನೀಡಿವೆ ಎನ್ನುತ್ತಾರೆ ಮಾಲ್‌ವೊಂದರ ಶಾಪಿಂಗ್ ಸೆಂಟರ್‌ವೊಂದರ ಮ್ಯಾನೇಜರ್.

ಶೀಲಾ ಸಿ ಶೆಟ್ಟಿ

View all posts by this author