-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪವರ್‌ಫುಲ್ ವರ್ಣವೆಂದೇ ಕರೆಯಲಾಗುವ ಕೆಂಪು ಬಣ್ಣ ಟ್ರೆಡಿಷನಲ್ ಲುಕ್ (Navaratri Fashion 2026) ಜತೆಜತೆಗೆ ಗ್ರ್ಯಾಂಡ್ ಲುಕ್ ಕಲ್ಪಿಸುತ್ತವೆ. ಈ ವರ್ಣದ ಸೀರೆಗಳನ್ನು ಧರಿಸಿದಾಗ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ತಂತಾನೇ ಹಬ್ಬದ ಕಳೆ ಕೂಡ ಎಲ್ಲರಲ್ಲೂ ಮನೆ ಮಾಡುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ವೇತಾ.
ಧೈರ್ಯ-ಸೌಂದರ್ಯದ ಧ್ಯೋತಕ
ಕೆಂಪು ಬಣ್ಣ ಧೈರ್ಯ ಹಾಗೂ ಸೌಂದರ್ಯದ ಧ್ಯೋತಕ . ಈ ಕಲರ್‌ಗೆ ಹಿಸ್ಟರಿ ಕೂಡ ಇದೆ. ಶಕ್ತಿ ದೇವಿ ದುರ್ಗೆ ಈ ಇನ್ನು ಸಮೀಕ್ಷೆಯೊಂದರ ಪ್ರಕಾರ, ಅತಿ ಹೆಚ್ಚು ಶೇಡ್‌ನ ಕೆಂಪು ವರ್ಣದ ಔಟ್‌ಫಿಟ್‌ಗಳನ್ನು ನಮ್ಮ ಭಾರತದ ನಾರಿಯರನ್ನು ಧರಿಸುತ್ತಾರಂತೆ. ಇದಕ್ಕೆ ಪೂರಕ ಎಂಬಂತೆ ಪುರಾಣಗಳಲ್ಲೂ ಶಕ್ತಿ ದೇವತೆಗಳು ಕೆಂಪು ಸೀರೆಯನ್ನು ಧರಿಸುವುದನ್ನು ಕಾಣಬಹುದು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಬಗೆಬಗೆಯ ಕೆಂಪು ಶೇಡ್ ಸೀರೆಗಳು
ಗಾಢ, ತಿಳಿಗೆಂಪು, ರಕ್ತ ಕೆಂಪು, ಮರೂನ್ ಕೆಂಪು ಹೀಗೆ ಲೆಕ್ಕವಿಲ್ಲದಷ್ಟು ಬಗೆಯವು ಇದೆ. ಆಯಾ ವರ್ಣದ ಸೀರೆಗಳು ಒಂದೊಂದು ಬಗೆಯ ಲುಕ್ ನೀಡುತ್ತವೆ.
ಕೆಂಪು ಬಾರ್ಡರ್ ಸೀರೆ
ಕೆಂಪು ಬಣ್ಣದ ಬಾರ್ಡರ್ ರೇಷ್ಮೆ ಸೀರೆಯಾದಲ್ಲಿ ಗ್ರ್ಯಾಂಡ್ ಫೆಸ್ಟಿವ್ ಲುಕ್ ನೀಡುತ್ತದೆ. ಇನ್ನು ಸಾದಾ ಅಥವಾ ಗೋಲ್ಡನ್ ಪ್ರಿಂಟ್ಸ್ ಇಲ್ಲವೇ ಬೂಟಾ ಪ್ರಿಂಟ್ಸ್ ಇರುವ ಶಿಫಾನ್, ಜಾರ್ಜೆಟ್ ಡಿಸೈನರ್ ಸೀರೆಗಳಾದಲ್ಲಿ ಮನಮೋಹಕವಾಗಿ ಕಾಣುತ್ತವೆ ಎಂಬುದು ಫ್ಯಾಷನಿಸ್ಟಾಗಳ ಅಭಿಪ್ರಾಯ.
ಕೆಂಪು ಸೀರೆಯ ಮೇಕೋವರ್
ಇನ್ನು, ಸೀರೆಗಳಿಗೆ ಬಂಗಾರದ ಜ್ಯುವೆಲರಿಗಳು ಚೆನ್ನಾಗಿ ಒಪ್ಪುತ್ತವೆ. ಟ್ರೆಡಿಷನಲ್ ಮೇಕಪ್ ಇರಲಿ. ಹಣೆಗೊಂದು ಅಗಲವಾದ ಬಿಂದಿ ಇರಲಿ. ದೇಸಿ ಹೇರ್‌ಸ್ಟೈಲ್ ಮ್ಯಾಚ್ ಆಗುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)