ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Onam Saree Fashion 2026: ಓಣಂ ಸೀರೆ ಸೆಲೆಕ್ಷನ್‌ಗೆ ಇಲ್ಲಿದೆ ಸಿಂಪಲ್ ಐಡಿಯಾ

Onam Saree Fashion 2026: ಓಣಂ ಹಬ್ಬದಂದು ಸೀರೆ ಉಡುವಿರಾದಲ್ಲಿ ಯಾವ ರೀತಿಯ ಸೀರೆಗಳನ್ನು ಸೆಲೆಕ್ಟ್ ಮಾಡಬೇಕು? ಹೇಗಿರಬೇಕು? ಈ ಕುರಿತಂತೆ ಸೀರೆ ಎಕ್ಸ್‌ಪರ್ಟ್ಸ್ ಒಂದಿಷ್ಟು ಐಡಿಯಾ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಓಣಂ ಹಬ್ಬದಂದು ಸೀರೆ (Onam Saree Fashion 2026) ಉಡುವ ಹೆಣ್ಣುಮಕ್ಕಳು ಈ ಹಬ್ಬಕ್ಕೆ ಹೊಂದುವಂತಹ ಸೀರೆಯನ್ನೇ ಉಡಬೇಕು. ಇಲ್ಲವಾದಲ್ಲಿ ಹಬ್ಬಕ್ಕೆ ಮ್ಯಾಚ್ ಆಗುವುದಿಲ್ಲ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್ ಈ ಕುರಿತಂತೆ ಒಂದಿಷ್ಟು ಸಿಂಪಲ್ ಐಡಿಯಾ ಹಂಚಿಕೊಂಡಿದ್ದಾರೆ.

ಕೇರಳದ ಸೀರೆಗಳನ್ನು ಆಯ್ಕೆ ಮಾಡಿ

ಕೇರಳದ ಈ ಹಬ್ಬಗಳಲ್ಲಿ ಶ್ವೇತವರ್ಣದ ಸೀರೆಗೆ ಹೆಚ್ಚು ಮಹತ್ವ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಲ್ಲಿ ಬಿಳಿ ಬಣ್ಣದ ಗೋಲ್ಡನ್ ಕಲರ್ ಝರಿಗಳಲ್ಲಿರುವ ಸೀರೆಗಳನ್ನು ಆಯ್ಕೆ ಮಾಡಿ ಉಡಿ.

Onam Saree

ಕಸವು ಸೀರೆ ಸೆಲೆಕ್ಟ್ ಮಾಡಿ

ಇನ್ನು, ಕಲರ್ ಝರಿ ಪ್ರಿಂಟ್ ಸೀರೆ, ಕಸವು ಸೀರೆ ವಿತ್ ವೆನ್ನಕೃಷ್ಣನ್ ಎಂಬ್ರಾಯ್ಡರಿ, ಕೇರಳ ಸಿಂಪಲ್ ಝರಿ ಕಸವು, ಪಿಕಾಕ್ ಎಂಬ್ರಾಯ್ಡರಿ ಕಸವು, ಫ್ಯಾಬ್ರಿಕ್ ಪ್ರಿಂಟ್ ಡಿಸೈನ್ ಕಸವು, ಸಿಲ್ವರ್ ಎಂಬ್ರೋಸ್, ಕಸವು ಫುಲ್ ಟಿಶ್ಯೂ ಎಂಬೋಸಿಂಗ್, ವಲ್ಲಿಪ್ರಿಂಟ್, ಎಂಬ್ರಾಯಿಡರಿ ಫ್ಲೀಟ್ ಸೀರೆ, ಫ್ಲವರ್ ಪ್ರಿಂಟ್, ರಾಧಾ ಕೃಷ್ಣ ಪ್ರಿಂಟ್, ಸಿಲ್ವರ್ ಕಸವು ಡಿಸೈನರ್ ಸೀರೆಗಳು ಬೇಡಿಕೆ ಸೃಷ್ಟಿಸಿಕೊಂಡಿವೆ. ಈ ಸೀರೆಗಳನ್ನು ಆಯ್ಕೆ ಮಾಡಿ, ಉಟ್ಟುಕೊಳ್ಳಿ.

Onam Saree Fashion

ಮುಂಡುಂ ನೆರಿಯುಟ್ಟುಮ್‌ನಲ್ಲಿ ಕೇರಳದ ಕುಟ್ಟಿಯಾಗಿ

ನೀವು ಪಕ್ಕಾ ಕೇರಳದ ಕುಟ್ಟಿಯಂತೆ ಕಾಣಿಸಬೇಕೇ! ಹಾಗಾದಲ್ಲಿ ಕೇರಳದ ಟ್ರೆಡಿಷನಲ್ ಸೀರೆಗಳಲ್ಲಿ ಒಂದಾದ ಮುಂಡುಂ ನೆರಿಯುಟ್ಟುಮ್ ಉಡಿ. ಅಂದಹಾಗೆ, ಇದು ಟು ಪೀಸ್ ಸೀರೆ. ‘ಮುಂಡುʼ ಅನ್ನು ಸೊಂಟಕ್ಕೆ ಸುತ್ತಿಕೊಂಡರೆ ಅದರ ಮೇಲೆ ಹಾಫ್ ಸಾರಿ ತರಹ ಹಾಕುವುದೇ ನೆರಿಯುಟ್ಟುಮ್.

Saree Fashion

ರೆಡಿಮೇಡ್ ಕೇರಳದ ಸೀರೆಗಳು

ಓಣಂ ಹಬ್ಬಕ್ಕೆಂದೇ ಇದೀಗ ರೆಡಿಮೇಡ್‌ನಲ್ಲೂ ಸೀರೆಗಳು ದೊರೆಯುತ್ತಿವೆ. ಉಡಲು ಬರದವರೂ ಕೂಡ ಇವನ್ನು ಅತಿ ಸುಲಭವಾಗಿ ಡ್ರೆಸ್ನಂತೆ ಧರಿಸಬಹುದು.

Eid Milad Jewel Fashion 2026: ಈದ್ ಮಿಲಾದ್‌ಗೆ ಬಂತು ಮಿನುಗುವ ಇಯರಿಂಗ್ಸ್

ಶ್ವೇತ ವರ್ಣದ ಕಾಟನ್ ಸೀರೆ

ಕಾಟನ್ ಹಾಗೂ ಸಿಲ್ಕ್ ಮಿಕ್ಸ್ ಕಾಟನ್ನ ಝರಿ ಬಾರ್ಡರ್‌ನ ಸೀರೆಗಳನ್ನು ಕೂಡ ಓಣಂ ದಿನದಂದು ಸ್ಟೈಲಾಗಿ ಉಟ್ಟುಕೊಳ್ಳಬಹುದು. ಸಂಭ್ರಮಿಸಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author