Party Hairstyles 2025: ಇಯರ್ ಎಂಡ್ ಪಾರ್ಟಿ ಹೇರ್ ಸ್ಟೈಲ್‌ಗೆ ಇಲ್ಲಿದೆ 3 ಸಿಂಪಲ್ ಐಡಿಯಾ
Party Hairstyles: ಕ್ರಿಸ್‌ಮಸ್ ಇಲ್ಲವೇ ನ್ಯೂ ಇಯರ್ ಎಂಡ್ ಪಾರ್ಟಿಯಲ್ಲಿ ನೀವು ಈ ಕೆಲವು ಸಿಂಪಲ್ ಹೇರ್ ಸ್ಟೈಲ್ ಮಾಡಿ ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಈ ಕುರಿತಂತೆ 3 ಸಿಂಪಲ್ ಐಡಿಯಾ ನೀಡಿದ್ದಾರೆ.
ಕ್ರಿಸ್‌ಮಸ್ ಅಥವಾ ನ್ಯೂ ಇಯರ್ ಪಾರ್ಟಿಗಾಗಿ ನಿಮ್ಮ ಹೇರ್ ಸ್ಟೈಲನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿ. ಇದಕ್ಕಾಗಿ ಒಂದಿಷ್ಟು ಹೊಸ ವಿನ್ಯಾಸಗಳನ್ನು ಪ್ರಯೋಗ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ನಿಮ್ಮ ಕೂದಲು ಉದ್ದವಿರಲಿ, ಗಿಡ್ಡನಾಗಿರಲಿ, ಪಾರ್ಟಿಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿಕೊಳ್ಳುವುದು ಇಂದಿನ ಟ್ರೆಂಡ್. ಪಾರ್ಟಿಗೆ ಸುಲಭವಾಗಿ ಮಾಡಿಕೊಳ್ಳಬಹುದಾದ ಹೇರ್‌ಸ್ಟೈಲ್ ಕುರಿತಂತೆ ಇಲ್ಲಿ ತಿಳಿಸಿದ್ದಾರೆ. ನೀವು ಟ್ರೈ ಮಾಡಿ ನೋಡಿ.
ಅತ್ಯಾಕರ್ಷಕವಾಗಿ ಕಾಣಿಸುವ ಪಾರ್ಟಿ ರಿಂಗ್ಲೆಟ್ಸ್
ಈ ಹೇರ್ ಸ್ಟೈಲನ್ನು ಎಲೆಕ್ಟ್ರಿಕ್ ರೋಲ್ಸ್ ಬಳಸಿ ಮಾಡಿ. ಹದಿನೈದು ನಿಮಿಷ ಮೊದಲೇ ರೋಲರ್ಸ್‌ಗಳನ್ನು ನೆತ್ತಿಯ ಮೇಲಿನ ಕೂದಲಿಗೆ ಸುತ್ತಿಕೊಳ್ಳಿ. ಬೈತಲೆ ಮಾದರಿಯಂತೆ ಐದು ರೋಲ್ ಸುತ್ತಿ, ಈ ಕಿವಿಯಿಂದ ಆ ಕಿವಿಯವರೆಗೂ ಬಂದರೆ ಸಾಕು. ಹಿಂದಿನ ಕೂದಲನ್ನು ಬಾಚಿ ಬ್ಯಾಂಡ್ ಹಾಕಿ ಹೆಬ್ಬೆಟ್ಟು ಗಾತ್ರದ ಕೂದಲನ್ನು ವಿಂಗಡಿಸಿ ಹೀಟ್ ಆದ ರೋಲರ್ಸ್‌ಗಳನ್ನು ಸುತ್ತುತ್ತಾ ಬನ್ನಿ. ನಿಮ್ಮ ಬಳಿ ಎಷ್ಟು ರೋಲರ್ಸ್ ಇದೆಯೋ ಅಥವಾ ನಿಮ್ಮ ಕೂದಲಿಗೆ ಎಷ್ಟು ಅಗತ್ಯ ರೋಲರ್ ಬೇಕೋ ಅಷ್ಟು ಕೂದಲಿಗೆ ಹಾಕಿ. ಅರ್ಧ ಗಂಟೆ ಬಿಟ್ಟು ರೋಲರ್ಸ್‌ಗಳನ್ನು ತೆಗೆಯಿರಿ. ನಿಮ್ಮ ಕೂದಲು ಈಗ ರಿಂಗುರಿಂಗಾಗಿ ಬೀಳುವುದು.
ಸೈಡ್ ಪಾರ್ಟಿಷನ್ ಹೇರ್ ಸ್ಟೈಲ್
ನಿಮ್ಮ ಕೂದಲು ಬೌನ್ಸ್ ಆಗಲು ರೋಲರ್‌ಗೆ ನಿಮ್ಮ ಕೂದಲು ಸುತ್ತಿ ಹತ್ತು ನಿಮಿಷದ ನಂತರ ಬಿಚ್ಚಿ. ಹಗುರವಾಗಿ ಬಾಚಣಿಕೆಯಿಂದ ಬಾಚಿ. ನಂತರ ನಿಮ್ಮ ಕೂದಲನ್ನು ಅರ್ಧಚಂದ್ರಕಾರವಾಗಿ ಮಡಚಿ, ವಿಭಾಗಿಸಿ. ಚಂದ್ರರೇಖೆಯಿಂದ ಸ್ವಲ್ಪ ಮಡಚಿ ಸ್ಟಫಿಂಗ್ ಮಾಡಿ. ಸ್ಟಫಿಂಗ್ ನಂತರ ಪಫ್ಗಾಗಿ ಉಳಿದ ಕೂದಲನ್ನು ಟ್ವೀಝಿಂಗ್ ಬಾಚಣಿಕೆಯಿಂದ ಬ್ಯಾಕ್ ಕೋಮ್ ಮಾಡಿ. ಮುಂಭಾಗದಲ್ಲಿ ಬಿಡಲಾದ ಕೂದಲನ್ನು ನವಿರಾಗಿ ಹಿಂದಕ್ಕೆ ಬಾಚಿ ಪಿನ್ ಅಪ್ ಮಾಡಿ. ಸೈಡ್‌ನಲ್ಲಿ ಬಂದ ನಿಮ್ಮ ಹೇರ್ ಸ್ಟೈಲ್ ಕಣ್ಮನ ಸೆಳೆಯುವುದು.
ಹೇರ್ ಆಕ್ಸೆಸರೀಸ್‌ನಿಂದ ಅಲಂಕಾರ
ಮುಂದಿನ ಕೂದಲನ್ನು ಬಾಚಿ ಪಫ್ ಮಾಡಿ ಪಿನ್ ಮಾಡಿ. ಹಿಂದಿನ ಕೂದಲನ್ನು ಮತ್ತೊಮ್ಮೆ ಬಾಚಿ. ನಿಮ್ಮ ಬಳಿ ಇರುವ ಹೇರ್ ಆಕ್ಸೆಸರೀಸ್‌ನಿಂದ ಅಲಂಕರಿಸಿಕೊಳ್ಲಿ. ಇಲ್ಲವೇ ಬನ್ ಹೇರ್ ಸ್ಟೈಲ್ ಮಾಡಿಕೊಳ್ಳಿ. ಬನ್ಗೆ ಕ್ರಿಸ್ಟಲ್ ಕ್ಲಿಪ್ ಇಲ್ಲವೇ ಆ್ಯಂಟಿಕ್ ಲುಕ್‌ನ ಹೇರ್ ಆಕ್ಸೆಸರೀಸ್ ಸಿಕ್ಕಿಸಿಕೊಳ್ಳಿ. ಆಕರ್ಷಕವಾಗಿ ಕಾಣಿಸುವುದು.