ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಮಹಿಳೆಯರ ಗಮನ ಸೆಳೆದ ಬದಲಾದ ಪ್ರಿಂಟೆಡ್‌ ಶಿಫಾನ್‌ ಸೀರೆಗಳು

Chiffon Sarees: ಶಿಫಾನ್‌ ಸೀರೆಗಳು ಇದೀಗ ನಾನಾ ಬಗೆಯಲ್ಲಿ ಕಾಣಿಸಿಕೊಂಡಿವೆ. ವಿನ್ಯಾಸ ಮಾತ್ರವಲ್ಲ! ಸ್ಟೈಲಿಂಗ್‌ ಮಾಡುವ ವಿಧಾನಗಳು ಕೂಡ ಬದಲಾಗಿವೆ. ಯಾವ್ಯಾವ ಬಗೆಯಲ್ಲಿ ಹೇಗೆಲ್ಲಾ ಕಾಣಿಸಿಕೊಳ್ಳುತ್ತಿವೆ? ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಚಿತ್ರಗಳು: ವಾಮಿಕಾ ಗಬ್ಬಿ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶಿಫಾನ್‌ ಸೀರೆಗಳು ಬದಲಾಗಿವೆ. ಜತೆಗೆ ಅವುಗಳ ಸ್ಟೈಲಿಂಗ್‌ ಕೂಡ ಬದಲಾಗಿದೆ.‌ ಹೌದು, ಇತ್ತೀಚೆಗೆ ಶಿಫಾನ್‌ ಸೀರೆಗಳು (Saree Fashion 2026) ನಾನಾ ಬಗೆಯಲ್ಲಿ ಕಾಣಿಸಿಕೊಂಡಿವೆ. ವಿನ್ಯಾಸ ಮಾತ್ರವಲ್ಲ! ಸ್ಟೈಲಿಂಗ್‌ ಮಾಡುವ ವಿಧಾನಗಳು ಬದಲಾಗಿವೆ. ರಫಲ್ಸ್ ಹಾಗೂ ಫ್ರಿಲ್‌ ರೆಡಿಮೇಡ್‌ ಸೀರೆಗಳಾಗಿ ಪರಿವರ್ತನೆಗೊಂಡಿವೆ ಜತೆಜತೆಗೆ ಬಗೆಬಗೆಯ ಪ್ರಿಂಟೆಡ್‌ ಡಿಸೈನ್‌ನಲ್ಲಿ ಪ್ರಚಲಿತದಲ್ಲಿವೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.

Chiffon sarees

ವಾಮಿಕಾ ಉಟ್ಟ ಪ್ರಿಂಟೆಡ್‌ ಸೀರೆ

ಕೆಲ ದಿನಗಳ ಹಿಂದೆ ನಟಿ ವಾಮಿಕಾ ಫ್ಯಾಷನ್‌ ಶೂಟ್‌ವೊಂದರಲ್ಲಿ ಕಾಣಿಸಿಕೊಂಡ ಫ್ಲೋರಲ್‌ ಪ್ರಿಂಟೆಡ್‌ ಸೀರೆಯು ಸಾಕಷ್ಟು ಮಹಿಳೆಯರ ಗಮನಸೆಳೆದಿತ್ತು. ವಾಮಿಕಾ ಉಟ್ಟ ಸೀರೆ ಹಳೆಯ ಡಿಸೈನ್‌ನಂತೆ ಕಂಡರೂ ಕೂಡ ಅವರು ಧರಿಸಿದ್ಧ ಎಂಬಾಲಿಶ್ಡ್‌ ಬಟರ್‌ಫ್ಲೈ ಬ್ಲೌಸ್‌, ಅವರಿಗೆ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡಿತ್ತು. ಅವರ ಸೀರೆಯ ರೆಟ್ರೊ ಸ್ಟೈಲ್‌ ಹಾಗೂ ಹೊಸ ಸ್ಟೈಲಿಂಗ್‌ ಈ ಜನರೇಷನ್‌ನ ಹುಡುಗಿಯರನ್ನು ಸಹ ಸೆಳೆಯಿತು ಎನ್ನುತ್ತಾರೆ ಸೀರೆ ವಿಮರ್ಶಕರು.

Saree Fashion

ಶಿಫಾನ್‌ ಸೀರೆಗಳ ಪ್ರೇಮ

ಮೊದಲಿನಿಂದಲೂ ನಾರಿಯರಿಗೆ ಪ್ರಿಂಟೆಡ್‌ ಶಿಫಾನ್‌ ಸೀರೆಗಳ ಮೇಲೆ ಮೋಹವಿದೆ. ಇದಕ್ಕೆ ಕಾರಣವೂ ಇದೆ. ಲೈಟ್‌ವೈಟ್‌ ಸೀರೆಗಳಾಗಿರುವ ಇವು ಉಟ್ಟರೇ ಕಂಫರ್ಟಬಲ್‌ ಫೀಲ್‌ ನೀಡುತ್ತವೆ ಹಾಗೂ ನೋಡಲು ಅಂದವಾಗಿ ಕಾಣಿಸುತ್ತವೆ. ಹಾಗಾಗಿ ಈ ಸೀರೆಗಳು ಇದುವರೆಗೂ ಟ್ರೆಂಡ್‌ನಿಂದ ಹೊರ ಬಿದ್ದಿಲ್ಲ! ಇಂದಿಗೂ ಚಾಲ್ತಿಯಲ್ಲಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

Saree Fashion 2026: ಸೀಸನ್‌ ಬದಲಾದರೂ ಟ್ರೆಂಡ್‌ನಲ್ಲೆ ಉಳಿದ ಲೇಸ್‌ ಸೀರೆಗಳು

ಡಿಫರೆಂಟಾಗಿರಲಿ ಶಿಫಾನ್‌ ಸೀರೆಗಳ ಸ್ಟೈಲಿಂಗ್‌

  • ರೆಟ್ರೊ ಲುಕ್‌ಗಾಗಿ ಬ್ಲೌಸನ್ನು ಡಿಸೈನ್‌ ಮಾಡಿಸಿ.
  • ರಫಲ್ಸ್ ಶಿಫಾನ್‌ ಸೀರೆಗಳು ಡ್ರೆಸ್‌ನಂತೆ ಕಾಣಿಸುತ್ತವೆ.
  • ಫ್ರಿಲ್‌ ಶಿಫಾನ್‌ ಸೀರೆಗಳನ್ನು ಗಾಗ್ರದಂತೆ ಉಡಬಹುದು.
  • ಶಿಫಾನ್‌ ಸೀರೆ ಕಂಫರ್ಟಲ್‌ ಫೀಲ್‌ ನೀಡುವುದರಿಂದ ನಾನಾ ಶೈಲಿಯಲ್ಲಿ ಡ್ರೇಪ್‌ ಮಾಡಬಹುದು.
  • ಈ ಸೀರೆಗೆ ಸಿಂಪಲ್‌ ಮೇಕೋವರ್‌ ಕೂಡ ಚೆನ್ನಾಗಿ ಕಾಣಿಸುತ್ತದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author