-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾದಾ ಶಿಫಾನ್ ಸೀರೆಗೆ ಫೆಸ್ಟೀವ್ ಸೀಸನ್‌ನಲ್ಲಿ ಗ್ರ್ಯಾಂಡ್ ಲುಕ್ ದೊರಕಿದೆ. ಹೌದು, ಇದುವರೆಗೂ ಪ್ರಿಂಟೆಡ್ ಹಾಗೂ ಸೀದಾ ಸಾದಾ ಆಗಿದ್ದ ಶಿಫಾನ್ ಸೀರೆಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಸಖತ್ ಗ್ರ್ಯಾಂಡ್ ಆಗಿ ಕಾಣಿಸುವಂತಹ ಡಿಸೈನ್‌ನಲ್ಲಿ ಅದರಲ್ಲೂ ಮಿನುಗುವ ಜರ್ದೋಸಿ ಎಂಬ್ರಾಯ್ಡರಿ ವರ್ಕ್ ಇರುವಂತಹ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ. ಮುಂಬರುವ ಫೆಸ್ಟೀವ್ ಸೀಸನ್‌ಗೆ ಮಾನಿನಿಯರಿಗೆ ಜತೆಯಾಗಲು ರೆಡಿಯಾಗಿವೆ.
ಮಿರ್ನಾ ಮೆನನ್ ಗ್ರ್ಯಾಂಡ್ ಶೀರ್ ಶಿಫಾನ್
ಇದಕ್ಕೆ ಪೂರಕ ಎಂಬಂತೆ, ಜೈಲರ್ 2 ನಲ್ಲಿ ನಟಿಸಿದ್ದ ನಟಿ ಮಿರ್ನಾ ಮೆನನ್ ಉಟ್ಟಿದ್ದ ಪರ್ಪಲ್ ವೈಲೆಟ್ ಶೇಡ್‌ನ ಸಾದಾ ಶೀರ್ ಶಿಫಾನ್ ಗ್ರ್ಯಾಂಡ್ ಸೀರೆಯು ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್‌ಲೋಡ್ ಮಾಡಿದ ನಂತರ ಎಲ್ಲರ ಗಮನ ಸೆಳೆದಿತ್ತು.
ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಶಿಫಾನ್ ಗ್ರ್ಯಾಂಡ್ ಸೀರೆಗಳಿವು
ನಟಿ ಮಿರ್ನಾ ಮೆನನ್ ಈ ಸೀರೆಗಳ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದೇ ತಡ, ಈ ಶೈಲಿಯ ಸೀರೆಗಳಿಗೆ ಬೇಡಿಕೆ ಹೆಚ್ಚಾಯಿತು. ಅದರಲ್ಲೂ ಗೋಲ್ಡ್ ವರ್ಕ್ ಇರುವಂತಹ ಜರ್ದೋಸಿ ವಿನ್ಯಾಸದ ಶಿಫಾನ್ ಸೀರೆಗಳು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಬಿಕರಿಯಾಗತೊಡಗಿದವು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಗ್ರ್ಯಾಂಡ್ ಶಿಫಾನ್ ಸೀರೆಗಳ ಪ್ರಿಯರಿಗೆ ಇಲ್ಲಿವೆ ಟಿಪ್ಸ್
- ಟ್ರೆಂಡಿಯಾಗಿರುವ ವೈಬ್ರೆಂಟ್ ಶೇಡ್‌ನ ಗ್ರ್ಯಾಂಡ್ ಶಿಫಾನ್ ಸೀರೆಯನ್ನೇ ಖರೀದಿಸಿ. ಟ್ರೆಂಡ್‌ನಲ್ಲಿವೆ.
- ಡಿಸೈನರ್ ಬ್ಲೌಸ್‌ಗಳು ಸೀರೆಯ ಅಂದ ಹೆಚ್ಚಿಸಬಲ್ಲವು.
- ಗೋಲ್ಡ್ ಎಂಬ್ರಾಯ್ಡರಿ ಇರುವಂತವು ಹೆಚ್ಚು ಚಾಲ್ತಿಯಲ್ಲಿವೆ.
- ಶೀರ್ ಆಗಿರುವುದರಿಂದ ನಿಮ್ಮ ಪರ್ಸನಾಲಿಟಿಗೆ ಸೂಕ್ತವಾದುದನ್ನು ಆರಿಸಿಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)