ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Styling Tips 2026: ಸಿಲ್ವರ್‌ ಜರಿಯ ಸೀರೆ ಸ್ಟೈಲಿಂಗ್‌ಗೆ 3 ಐಡಿಯಾ

ಜೆನ್‌ ಜಿ ಯುವತಿಯರು ಹಾಗೂ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಇತ್ತೀಚೆಗೆ ಸಿಲ್ವರ್‌ ಜರಿಯ ಸೀರೆಗಳತ್ತ ವಾಲತೊಡಗಿದ್ದಾರೆ. ಸಿಲ್ವರ್‌ ಜರಿಯ ಸೀರೆಯನ್ನು ಆಕರ್ಷಕವಾಗಿ ಬಿಂಬಿಸಲು ಯಾವ ಬಗೆಯ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಬೇಕು? ಎಂಬುದರ ಬಗ್ಗೆ ಸೀರೆ ಸ್ಟೈಲಿಂಗ್‌ ಎಕ್ಸ್‌ಪರ್ಟ್ಸ್ ಸಿಂಪಲ್ಲಾಗಿ ತಿಳಿಸಿದ್ದಾರೆ.

ಚಿತ್ರಗಳು: ಸಂಯುಕ್ತಾ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜೆನ್‌ ಜಿ ಯುವತಿಯರು ಹಾಗೂ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಇತ್ತೀಚೆಗೆ ಸಿಲ್ವರ್‌ ಜರಿಯ ಸೀರೆಗಳತ್ತ (Saree Styling Tips 2026) ವಾಲತೊಡಗಿದ್ದಾರೆ. ಹೌದು, ಸದಾ ಟ್ರೆಂಡಿಯಾಗಿರುವ ಟ್ರೆಡಿಷನಲ್‌ ಲುಕ್‌ ನೀಡುವ ಗೋಲ್ಡನ್‌ ಜರಿಯ ಸೀರೆಗಳ ಬದಲು ಸಿಲ್ವರ್‌ ಜರಿಯ ಸೀರೆಗಳತ್ತ ಮುಖಮಾಡತೊಡಗಿದ್ದಾರೆ. ಇವು ಡಿಫರೆಂಟ್‌ ಆಗಿ ಕಾಣಿಸುತ್ತವೆ ಎಂಬ ನಿಟ್ಟಿನಲ್ಲಿ ಇವುಗಳನ್ನು ಕೊಳ್ಳತೊಡಗಿದ್ದಾರೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್ ಕನ್ಯಾ. ಈ ಸಿಲ್ವರ್‌ ಜರಿಯ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಲು ಯಾವ ಬಗೆಯ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

Saree Styling Tips

ಸಿಲ್ವರ್‌ ಸೀರೆಗೆ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿ

ಸಿಲ್ವರ್‌ ಝರಿ ಸೀರೆಗೆ ನೀವು ಟ್ರೆಡಿಷನಲ್‌ ಲುಕ್‌ ಮಾತ್ರವಲ್ಲ, ಇಂಟೋ-ವೆಸ್ಟರ್ನ್‌ ಲುಕ್‌ ನೀಡಬಹುದು. ಇದಕ್ಕಾಗಿ ಸಿಲ್ವರ್‌ ಲುಕ್‌ ನೀಡುವಂತಹ ಆಕ್ಸೆಸರೀಸ್‌ ಹಾಗೂ ಡಿಸೈನರ್‌ ಬ್ಲೌಸ್‌ ಧರಿಸಬಹುದು.

Saree Fashion

ಸಿಲ್ವರ್‌ ಜರಿ ಸೀರೆಯ ಡ್ರೇಪಿಂಗ್‌

ನಾರ್ಮಲ್‌ ಡ್ರೇಪಿಂಗ್‌ ಬದಲು ಕೊಂಚ ಹೊಸ ಬಗೆಯ ಡ್ರೇಪಿಂಗ್‌ ಟ್ರೈ ಮಾಡಬಹುದು. ಇದು ನೋಡಲು ವಿಭಿನ್ನ ಹಾಗೂ ಡಿಫರೆಂಟ್‌ ಲುಕ್‌ ನೀಡುತ್ತದೆ. ಆಕರ್ಷಕವಾಗಿ ಕಾಣಿಸುತ್ತದೆ.

Silver Zari saree

ಮೇಕೋವರ್‌ ಎಲಿಗೆಂಟಾಗಿರಲಿ

ಸಿಲ್ವರ್‌ ಜರಿ ಸೀರೆಗೆ ಹೆವ್ವಿ ಮೇಕಪ್‌ ಮಾಡುವುದು ಬೇಡ! ತೀರಾ ಸಿಂಪಲ್ಲಾಗಿರುವಂತಹ ಆಕ್ಸೆಸರೀಸ್‌ ಜತೆಗೆ ತಿಳಿಯಾದ ಲಿಪ್‌ಸ್ಟಿಕ್‌ ಹಾಗೂ ಮೇಕಪ್‌ ಮಾಡಿದರೇ ಉತ್ತಮ. ಆದಷ್ಟೂ ಟ್ರೆಡಿಷನಲ್‌ ಲುಕ್‌ಗಿಂತ ಕಂಟೆಂಪರರಿ ಲುಕ್‌ ಮಾಡುವುದು ಒಳಿತು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author