-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶರಾರ ಪ್ಯಾಂಟ್ಗಳು ಇದೀಗ ಕೋ ಆರ್ಡ್ ಸೆಟ್ಗಳಾಗಿವೆ. ನಯಾ ಲುಕ್ನಲ್ಲಿ ಎಂಟ್ರಿ ನೀಡಿವೆ. ಹೌದು, ಹಳೆಯ ಡಿಸೈನ್ನ ಶರಾರ ಪ್ಯಾಂಟ್ಗಳು ಇದೀಗ ಹೊಸ ರೂಪ ಪಡೆದಿದ್ದು, ಇವುಗಳ ಜತೆಗೆ ಮ್ಯಾಚಿಂಗ್ ಡಿಸೈನರ್ ಕುರ್ತಾ ಹಾಗೂ ದುಪಟ್ಟಾ (Season Fashion 2026) ಕೂಡ ಜತೆಯಾಗಿವೆ. ಪರಿಣಾಮ, ಶರಾರ ಕೋ ಆರ್ಡ್ ಸೆಟ್ ಸೂಟ್ಗಳ ರೂಪದಲ್ಲಿ ಕಾಣಿಸಿಕೊಂಡಿವೆ. ಈ ಫೆಸ್ಟೀವ್ ಸೀಸನ್ನಲ್ಲಿ ಟ್ರೆಂಡಿಯಾಗಿವೆ. ಮಾನಿನಿಯರನ್ನು ಸವಾರಿ ಮಾಡುತ್ತಿವೆ.
ಶರಾರ ಪ್ರಿಯರನ್ನು ಸೆಳೆದ ಅದಾ ಖಾನ್ ಶರಾರ
ಇನ್ನು, ಇದಕ್ಕೆ ಪೂರಕ ಎಂಬಂತೆ, ಫೆಸ್ಟೀವ್ ಸೀಸನ್ನಲ್ಲಿ ನಟಿ ಅದಾ ಖಾನ್ ಧರಿಸಿದ್ಧ ಎಮರಾಲ್ಡ್ ಗ್ರೀನ್ ಶರಾರ ಕೋ ಆರ್ಡ್ ಸೆಟ್ ಸೂಟ್ ಸಾಕಷ್ಟು ಶರಾರ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಶರಾರದ ಹೊಸ ರೂಪವನ್ನು ಪರಿಚಯಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.
ಪ್ರಿಂಟೆಡ್ ಶರಾರ ಕೋ ಆರ್ಡ್ ಸೂಟ್
ಬಾಲಿವುಡ್ ಸೆಲೆಬ್ರೆಟಿ ಡಿಸೈನರ್ ಅಕಾಂಕ್ಷಾ ಸೊಳಂಕಿ ಡಿಸೈನ್ ಮಾಡಿರುವ ಅದಾ ಖಾನ್ ಧರಿಸಿರುವ ಹಸಿರು ಬಣ್ಣದ ಶರಾರ ಈಗಾಗಲೇ ರಿಪ್ಲೀಕಾ ಆಗಿದ್ದು, ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಶರಾರದ ಪ್ರಿಂಟೆಡ್ ಕುರ್ತಾ ಯುವತಿಯರನ್ನು ಆಕರ್ಷಿಸಿದೆ. ವಿಶೇಷವೆನೆಂದರೇ, ಫೆಸ್ಟೀವ್ ಸೀಸನ್ ಮಾತ್ರವಲ್ಲ, ಇತರೇ ಸಮಯದಲ್ಲೂ ಧರಿಸಬಹುದಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಶರಾರ ಕೋ ಆರ್ಡ್ ಸೆಟ್ ಆಯ್ಕೆ
- ಮಾನೋಕ್ರೋಮ್ ಡಿಸೈನ್ದ್ದಾದಲ್ಲಿ ಎಲ್ಲಾ ಸೀಸನ್ಗೂ ಹೊಂದುತ್ತವೆ.
- ನಿಮ್ಮಹೈಟ್ಗೆ ತಕ್ಕಂತೆ ಶರಾರ ಪ್ಯಾಂಟ್ ಮ್ಯಾಚ್ ಮಾಡಬೇಕು. ನಿಮ್ಮ ಪಾದಗಳಿಗಿಂತ ಕೆಳಗಿಳಿದಿರಬಾರದು.
- ಪಾರ್ಟಿವೇರ್ ಆಗಿಯೂ ಇವನ್ನು ಧರಿಸಬಹುದು.
- ಪ್ರಿಂಟೆಡ್ನಲ್ಲಿ ಆದಷ್ಟೂ ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹದ್ದನ್ನು ಮಾತ್ರ ಆಯ್ಕೆ ಮಾಡಿ.
- ಆದಷ್ಟೂ ತ್ರೀ ಪೀಸ್ ಸೆಟ್ ಚೂಸ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)