ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಎಥ್ನಿಕ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಂಬ್ರಾಯ್ಡರಿ ಸಿಲ್ಕ್‌ ಕ್ರೇಪ್‌ ಕುರ್ತಾ

ಎಥ್ನಿಕ್‌ ಕೆಟಗರಿಯಲ್ಲಿ ಗ್ರ್ಯಾಂಡ್‌ ಲುಕ್‌ಗಾಗಿ ವೈವಿಧ್ಯಮಯ ಥ್ರೆಡ್‌ ಎಂಬ್ರಾಯ್ಡರಿ ವರ್ಕ್‌ನ ಸಿಲ್ಕ್ ಕ್ರೇಪ್‌ ಕುರ್ತಾಗಳು ಬಿಡುಗಡೆಗೊಂಡಿವೆ. ಬಗೆಬಗೆಯ ಮೊಟಿಫ್ಸ್, ಫ್ಲೋರಲ್‌ ಪ್ರಿಂಟ್ಸ್, ಬಾಂದನಿ ಪ್ರಿಂಟ್ಸ್ ಹಾಗೂ ಬ್ಲಾಕ್‌ ಪ್ರಿಂಟ್ಸ್ ಸೇರಿದಂತೆ ನಾನಾ ಬಗೆಯ ಪ್ರಿಂಟ್ಸ್ ಹಾಗೂ ಡಿಸೈನ್‌ ಹೊಂದಿರುವ ಈ ಥ್ರೆಡ್‌ ಎಂಬ್ರಾಯ್ಡರಿ ಸಿಲ್ಕ್‌ ಕ್ರೇಪ್ ಕುರ್ತಾಗಳು ಈ ಸೀಸನ್‌ನ ಎಥ್ನಿಕ್‌ ಡಿಸೈನರ್‌ವೇರ್‌ನಲ್ಲಿ ಲಗ್ಗೆ ಇಟ್ಟಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಪೂಜಾ ಸಾವಂತ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಥ್ನಿಕ್‌ ಫ್ಯಾಷನ್‌ನಲ್ಲಿ ಇದೀಗ ಗ್ರ್ಯಾಂಡ್‌ ಲುಕ್‌ ನೀಡುವ ವೈವಿಧ್ಯಮಯ ಥ್ರೆಡ್‌ ಎಂಬ್ರಾಯ್ಡರಿ ವರ್ಕ್‌ನ ಸಿಲ್ಕ್ ಕ್ರೇಪ್‌ ಕುರ್ತಾಗಳದ್ದೇ ಕಾರುಬಾರು! ಬಗೆಬಗೆಯ ಮೊಟಿಫ್ಸ್, ಫ್ಲೋರಲ್‌ ಪ್ರಿಂಟ್ಸ್, ಬಾಂದನಿ ಪ್ರಿಂಟ್ಸ್ ಹಾಗೂ ಬ್ಲಾಕ್‌ ಪ್ರಿಂಟ್ಸ್ ಸೇರಿದಂತೆ ನಾನಾ ಬಗೆಯ ಪ್ರಿಂಟ್ಸ್ ಹಾಗೂ ಡಿಸೈನ್‌ ಹೊಂದಿರುವ ಈ ಥ್ರೆಡ್‌ ಎಂಬ್ರಾಯ್ಡರಿ ಸಿಲ್ಕ್‌ ಕ್ರೇಪ್ ಕುರ್ತಾಗಳು ಈ ಸೀಸನ್‌ನ (Season Fashion 2026) ಎಥ್ನಿಕ್‌ ಡಿಸೈನರ್‌ವೇರ್‌ನಲ್ಲಿ ಲಗ್ಗೆ ಇಟ್ಟಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನ ಡಿಸೈನ್‌ನಲ್ಲಿ ದೊರೆಯುತ್ತಿವೆ. ಸದ್ಯ ಮಾನಿನಿಯರ ವಾರ್ಡ್ರೋಬ್‌ ಸೇರಿವೆ.

Silk crepe kurtas

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಡಿಸೈನರ್‌ ಕುರ್ತಾ ಸೆಟ್‌ಗಳಿವು

ಎಥ್ನಿಕ್‌ ಮೊಟಿಫ್ಸ್‌ನಲ್ಲಿ ಜೆಮೆಟ್ರಿಕ್‌ ಪ್ಯಾಟ್ರನ್‌ನ ಟ್ರೆಡಿಷನಲ್‌ ವಿನ್ಯಾಸದವು, ಬಗೆಬಗೆಯ ಹೂಗಳ ಚಿತ್ತಾರದ ಫ್ಲೋರಲ್‌ ಪ್ರಿಂಟ್ಸ್‌ನವು, ಟೈ ಆಂಡ್‌ ಡೈ ಪ್ರಿಂಟ್ಸ್‌ನ ಬಾಂದನಿ ಪ್ರಿಂಟ್ಸ್, ಸ್ಟಾಂಪ್‌ ಪ್ಯಾಟರ್ನ್‌ ಬ್ಲಾಕ್‌ ಪ್ರಿಂಟ್ಸ್‌ನ ಬಣ್ಣ ಬಣ್ಣದ ಥ್ರೆಡ್‌ ಎಂಬ್ರಾಯ್ಡರಿ ಇರುವಂತಹ ಸಿಲ್ಕ್‌ ಕ್ರೇಪ್‌ ಕುರ್ತಾ ಸೆಟ್‌ಗಳು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಮಾರಾಟಗಾರರು.

Ethnic Fashion

ಡಿಸೈನರ್‌ ಕುರ್ತಾಗಳ ನಾನಾ ರೂಪ

ಅನಾರ್ಕಲಿ ವಿನ್ಯಾಸದ ಶಾರ್ಟ್ ಎಂಬ್ರಾಯ್ಡರಿ ಸಿಲ್ಕ್‌ ಕ್ರೇಪ್‌ ಕುರ್ತಾ, ತ್ರೀ ಪೀಸ್‌ ಕಮೀಜ್‌ ಶೈಲಿಯ ಡಿಸೈನರ್‌ ಕುರ್ತಾಗಳು, ವ್ರಾಪ್‌ ಸ್ಟೈಲ್‌ ಅಂಗ್ರಾಕ ಎಂಬ್ರಾಯ್ಡರಿ ಸಿಲ್ಕ್‌ ಕ್ರೇಪ್‌ ಕುರ್ತಾ, ಸ್ಟ್ರೈಟ್‌ ಕಟ್‌ ಎಂಬ್ರಾಯ್ಡರಿ ಕುರ್ತಾಗಳು ಫ್ಯಾಷನ್‌ಲೋಕದಲ್ಲಿ ಕಾಲಿಟ್ಟಿವೆ. ಎಲ್ಲಾ ವರ್ಗದ ಮಹಿಳೆಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ಜಯಂತ್‌.

Saree Fashion 2026: ಪಾರ್ಟಿ ಪ್ರಿಯ ಯುವತಿಯರಿಗಾಗಿ ಬಂತು ಓಂಬ್ರೆ ಸಿಕ್ವೀನ್ಸ್ ಸೀರೆಗಳು

ಎಂಬ್ರಾಯ್ಡರಿ ಸಿಲ್ಕ್‌ ಕೇಪ್‌ ಕುರ್ತಾ ಪ್ರಿಯರಿಗೆ ಸಲಹೆ

  • ಆದಷ್ಟೂ ಟ್ರೆಡಿಷನಲ್‌ ಲುಕ್‌ ನೀಡುವ ಡಿಸೈನ್‌ಗೆ ಆದ್ಯತೆ ನೀಡಿ.
  • ಟ್ರೆಂಡಿ ಕಲರ್ಸ್ ಕುರ್ತಾ ಆಯ್ಕೆ ಮಾಡಿ.
  • ಮೊದಲೇ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.
  • ಮನೆಯಲ್ಲಿ ಇವನ್ನು ವಾಶ್ ಮಾಡಲಾಗದು ಎಂಬುದು ನೆನಪಿರಲಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author