ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಫೆಸ್ಟೀವ್‌ ಸೀಸನ್‌ಗೆ ಲಗ್ಗೆ ಇಟ್ಟ ಜ್ಯುವೆಲ್‌ ಡಿಸೈನ್‌ ಕುರ್ತಾ ಸೆಟ್ಸ್

Jewel Design Kurta Sets: ಮುಂಬರುವ ದೀಪಾವಳಿ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ಜ್ಯುವೆಲ್‌ ಡಿಸೈನ್‌ನ ಕುರ್ತಾ ಸೆಟ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ನಟಿ ಗೌಹರ್‌ ಖಾನ್‌ ಧರಿಸಿದ್ದ ಕುರ್ತಾ ಸೆಟ್‌ ಸಖತ್‌ ಟ್ರೆಂಡಿಯಾಗಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಗೌಹರ್‌ ಖಾನ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಗೌಹರ್‌ ಖಾನ್‌ ಧರಿಸಿರುವ ಜ್ಯುವೆಲ್‌ ಡಿಸೈನ್‌ನ ಕುರ್ತಾ ಸೆಟ್‌ಗಳು ಎಥ್ನಿಕ್‌ ಫ್ಯಾಷನ್‌ ಡಿಸೈನರ್‌ವೇರ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಇವೆಂಟ್‌ವೊಂದರ ಫ್ಯಾಷನ್‌ ಶೂಟ್‌ನಲ್ಲಿ ಬಾಲಿವುಡ್‌ ನಟಿ ಗೌಹರ್‌ ಖಾನ್‌ ಧರಿಸಿದ್ದ ಈ ಸೂಪರ್‌ ವಿನ್ಯಾಸದ ತೀರಾ ಗ್ರ್ಯಾಂಡ್‌ ಲುಕ್‌ ನೀಡುವಂತಹ ಜ್ಯುವೆಲ್‌ ವಿನ್ಯಾಸದ ಕುರ್ತಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದೇ ತಡ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Season Fashion

ಜ್ಯುವೆಲ್‌ ಕುರ್ತಾ ವಿಶೇಷತೆ ಏನು?

ಹೆಸರೇ ಹೇಳುವಂತೆ, ಗೌಹರ್‌ ಖಾನ್‌ ಧರಿಸಿರುವ ಕುರ್ತಾ ಕಂಪ್ಲೀಟ್‌ ಗೋಲ್ಡ್, ಸಿಲ್ವರ್‌, ಕ್ರಿಸ್ಟಲ್‌, ಜರ್ದೋಸಿ, ಕಟ್‌ದಾನದಂತಹ ಕಂಪ್ಲೀಟ್‌ ಹ್ಯಾಂಡ್‌ ಎಂಬ್ರಾಯ್ಡರಿ ಹೊಂದುವಂತಿದೆ. ನೋಡಲು ಥೇಟ್‌ ನೆಕ್ಲೇಸ್‌ ಹಾಗೂ ಭಾರಿ ಹಾರಗಳ ಡಿಸೈನ್‌ ಕೂಡ ಹೊಂದಿದೆ. ಈ ರೀತಿಯ ಜ್ಯುವೆಲರಿ ವಿನ್ಯಾಸ ಹೊಂದಿರುವಂತವನ್ನು ಸಾಮಾನ್ಯವಾಗಿ ಜ್ಯುವೆಲ್‌ ಡಿಸೈನರ್‌ ಕುರ್ತಾ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

Jewel design kurta sets

ಹಬ್ಬದ ಸೀಸನ್‌ಗೆ ಹೇಳಿಮಾಡಿಸಿದ ಡಿಸೈನ್‌ನ ಕುರ್ತಾ

ಇನ್ನು, ಗೌಹರ್‌ ಧರಿಸಿರುವ ಜ್ಯುವೆಲ್‌ ಡಿಸೈನ್‌ ಕುರ್ತಾ ಕೋರಲ್‌ ರಸ್ಟ್ ಎಂಬ್ರಾಯ್ಡರಿ ಟಿಶ್ಯೂ ಫ್ಯಾಬ್ರಿಕ್‌ನದ್ದಾಗಿದ್ದು, ನೆಕ್‌ಲೈನ್‌ ಹೆವ್ವಿ ವಿನ್ಯಾಸ ಒಳಗೊಂಡಿದೆ. ಈ ಕುರ್ತಾ ಸೆಟ್‌ ಸ್ವಿಶ್‌ ಬೈ ಡಾಲ್ಸಿ & ಸಿಮ್ರಾನ್‌ ಲೆಬಲ್‌ನದ್ದಾಗಿದೆ. ಇದರೊಂದಿಗೆ ದುಪಟ್ಟಾ ಹಾಗೂ ಪ್ಯಾಂಟ್‌ ಸಹ ಒಂದೇ ಬಣ್ಣದ್ದಾಗಿದೆ ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ಗಳು.

Kurta sets

ಮಾರುಕಟ್ಟೆಯಲ್ಲಿ ಜ್ಯುವೆಲ್‌ ನೆಕ್‌ಲೈನ್‌ ಕುರ್ತಾ ರಿಪ್ಲೀಕಾ

ಒಟ್ನಲ್ಲಿ, ಗೌಹರ್‌ ಧರಿಸಿರುವ ಈ ಕುರ್ತಾದ ರಿಪ್ಲೀಕಾ ಕುರ್ತಾ ಸೆಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಶಿಮ್ಮರ್‌ ಶೇಡ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಮಾನಿನಿಯರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author