ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಜೆನ್‌ ಜಿ ಪಾರ್ಟಿ ಫ್ಯಾಷನ್‌ಗೆ ಸೇರಿದ ಗೋಲ್ಡನ್‌ ಶರ್ಟ್

ಈ ಸೀಸನ್‌ನ ಜೆನ್‌ ಜಿ ಪಾರ್ಟಿ ಫ್ಯಾಷನ್‌ನಲ್ಲಿ ಮಿರಮಿರ ಮಿನುಗುವ ಗೋಲ್ಡ್ ಶರ್ಟ್‌ಗಳು ಲಗ್ಗೆ ಇಟ್ಟಿವೆ. ಧರಿಸಿದಾಗ ಜಗಮಗಿಸುವ ಈ ಔಟ್‌ಫಿಟ್‌ ಜೆನ್‌ ಜಿ ಫ್ಯಾಷನ್‌ ಪ್ರಿಯರನ್ನು ಸದ್ಯ ಸವಾರಿ ಮಾಡತೊಡಗಿವೆ. ಇದ್ಯಾವ ಬಗೆಯ ಫ್ಯಾಷನ್‌ವೇರ್‌? ಏನಿದರ ವಿಶೇಷತೆ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ತ್ರಿನಾ ಸನಾ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ನ ಜೆನ್‌ ಜಿ ಪಾರ್ಟಿ ಫ್ಯಾಷನ್‌ನಲ್ಲಿ (Season Fashion 2026) ಮಿರಮಿರ ಮಿನುಗುವ ಗೋಲ್ಡ್ ಶರ್ಟ್‌ಗಳು ಲಗ್ಗೆ ಇಟ್ಟಿವೆ. ಧರಿಸಿದಾಗ ಜಗಮಗಿಸುವ ಈ ಔಟ್‌ಫಿಟ್‌ ಜೆನ್‌ ಜಿ ಫ್ಯಾಷನ್‌ ಪ್ರಿಯರನ್ನು ಸದ್ಯ ಸವಾರಿ ಮಾಡತೊಡಗಿವೆ.

Gold Shirts

ತ್ರಿನಾ ಸಹಾ ಗೋಲ್ಡನ್‌ ಶರ್ಟ್

ಇದಕ್ಕೆ ಪೂರಕ ಎಂಬಂತೆ ಒಮ್ಮೆ ನಟಿ ತ್ರಿನಾ ಸಹಾ ಧರಿಸಿದ್ಧ ಗೋಲ್ಡನ್‌ ಶರ್ಟ್, ಫ್ಯಾಷನ್‌ ಪ್ರೇಮಿಗಳಾದ ಜೆನ್‌ ಜಿ ಹುಡುಗಿಯರನ್ನು ಸಾಕಷ್ಟು ಸೆಳೆದಿತ್ತು. ಇದೀಗ ಪಾರ್ಟಿ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿಕೊಂಡಿದೆ.

Sparkling gold shirts

ಪಾರ್ಟಿ ಔಟ್‌ಫಿಟ್‌ ಲಿಸ್ಟ್‌ಗೆ ಗೋಲ್ಡನ್‌ ಶರ್ಟ್

ಗೋಲ್ಡನ್‌ ಶೇಡ್‌ನ ನಾನಾ ಬಗೆಯ ಟಾಪ್‌ಗಳು ಔಟ್‌ಫಿಟ್‌ಗಳು ಇದುವರೆಗೂ ಪಾರ್ಟಿ ಫ್ಯಾಷನ್‌ ಲಿಸ್ಟ್‌ನಲ್ಲಿದ್ದವು. ಆದರೆ, ಇದೀಗ ಕೊಂಚ ವಿಭಿನ್ನ ಎಂಬಂತೆ ಶರ್ಟ್‌ಗಳು ಗೋಲ್ಡ್‌ ಲುಕ್‌ ಪಡೆದಿವೆ. ಇದು ಕೊಂಚ ಅತಿ ಏನಿಸಿದರೂ ಜೆನ್‌ ಜಿ ಹುಡುಗಿಯರ ಹೊಸ ಪಾರ್ಟಿ ಉಡುಗೆಗಳ ಆವಿಷ್ಕಾರದ ಸಾಲಿಗೆ ಸೇರಿಕೊಂಡಿವೆ.

New Fashion

ಗೋಲ್ಡ್ ಶರ್ಟ್ ವಿಶೇ‍ಷತೆ

ಅಂದ ಹಾಗೆ, ಇವು ಶರ್ಟ್‌ಗಳೇ ಆದರೆ, ಕಲರ್‌ ಮಾತ್ರ ಗೋಲ್ಡ್‌ ಶೇಡ್‌ ಹೊಂದಿರುತ್ತವೆ. ಲಾಂಗ್‌ ಸ್ಲೀವ್‌ ಹೊಂದಿರುತ್ತವೆ. ಕೆಲವು ಬಟನ್‌ ಇನ್ನು ಕೆಲವು ಬಟನ್‌ ಡಿಸೈನ್‌ನಂತೆ ವಿನ್ಯಾಸ ಹೊಂದಿರುತ್ತವೆ. ಪಾರ್ಟಿ ಪ್ರಿಯ ಹುಡುಗಿಯರ ಅಭಿಲಾಷೆಗೆ ತಕ್ಕಂತೆ ಮಿಕ್ಸ್ ಮ್ಯಾಚ್‌ ಫ್ಯಾಷನ್‌ಗೆ ಮ್ಯಾಚ್‌ ಆಗಿವೆ ಎನ್ನುತ್ತಾರೆ ಡಿಸೈನರ್ಸ್.

Season Fashion 2026: ಸಿಂಪಲ್‌ ಲುಕ್‌ಗಾಗಿ ಬೇಡಿಕೆ ಸೃಷ್ಟಿಸಿಕೊಂಡ ಚಂದೇರಿ ಸಿಲ್ಕ್‌ ಕುರ್ತಾ ಸೆಟ್ಸ್

ಗೋಲ್ಡ್‌ ಶರ್ಟ್ ಮೇಕೋವರ್‌ಗೆ ಟಿಪ್ಸ್

  • ಆದಷ್ಟೂ ಕಾಂಟ್ರಾಸ್ಟ್ ಶೇಡ್‌ ಆಯ್ಕೆ ಮಾಡಿ.
  • ಗೋಲ್ಡ್‌ ಶರ್ಟ್‌ಗೆ ಬ್ಲ್ಯಾಕ್‌ ಇಲ್ಲವೇ ಚಾಕೋಲೇಟ್‌ ಕಲರ್‌ನ ಶಾರ್ಟ್ಸ್ ಅಥವಾ ಸ್ಕರ್ಟ್ ಮ್ಯಾಚ್‌ ಆಗುತ್ತವೆ.
  • ಪಾರ್ಟಿ ಲುಕ್‌ ಸಿಗುವುದು ಗ್ಯಾರಂಟಿ ಆದರೆ, ಶಿಮ್ಮರ್‌ ಮೇಕಪ್‌ ಮಾಡಿ.
  • ಮೇಕೋವರ್‌ ಪಾರ್ಟಿಗೆ ಹೊಂದುವಂತಿರಬೇಕು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author