ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ನೋಡುಗರ ಕಣ್ಮನ ಸೆಳೆದ ಮುದ್ದು ಸೊಸೆ ಖ್ಯಾತಿಯ ನಟಿ ಪ್ರತಿಮಾ ವೈಟ್‌ ಲೆಹೆಂಗಾ

Star Fashion 2025: ಮುದ್ದು ಸೊಸೆ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ನಟಿ ಪ್ರತಿಮಾ ಥಾಕೂರ್‌ ಧರಿಸಿರುವ ವೈಟ್‌ ಲೆಹೆಂಗಾ ನೋಡುಗರ ಕಣ್ಮನ ಸೆಳೆದಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಡಿಸೈನರ್‌ವೇರ್‌? ಅವರ ಲುಕ್‌ ಹೇಗಿದೆ? ಇವರಂತೆಯೇ ಸ್ಟೈಲಿಂಗ್‌ ಮಾಡುವುದು ಹೇಗೆ? ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

ಚಿತ್ರಗಳು: ಪ್ರತಿಮಾ ಥಾಕೂರ್‌, ಕಿರುತೆರೆ ನಟಿ.
1/5

ಕಿರುತೆರೆ ನಟಿ ಪ್ರತಿಮಾ ಥಾಕೂರ್‌ರ ವೈಟ್‌ ಲೆಹೆಂಗಾ ಇದೀಗ ನೋಡುಗರ ಕಣ್ಮನ ಸೆಳೆದಿದೆ. ಹೌದು, ಸದ್ಯ ಮುದ್ದು ಸೊಸೆ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ನಟಿ ಪ್ರತಿಮಾ ಥಾಕೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿರುವ ವೈಟ್‌ ಲೆಹೆಂಗಾ ಲುಕ್‌ ಫಾಲೋವರ್‌ಗಳ ಕಣ್ಮನ ಸೆಳೆದಿದೆ.

2/5

ರೀಲ್ಸ್ ಮೂಲಕ ಖ್ಯಾತಿ ಗಳಿಸಿರುವ ಪ್ರತಿಮಾ

ಅಂದಹಾಗೆ, ಪ್ರತಿಮಾ ಥಾಕೂರ್‌ ಮುದ್ದು ಸೊಸೆಗೆ ಆಯ್ಕೆ ಆಗಿದ್ದೇ ತನ್ನ ರೀಲ್ಸ್‌ಗಳ ಮೂಲಕವಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಈಗಾಗಲೇ 1 ಮಿಲಿಯನ್‌ ಫಾಲೋವರ್‌ಗಳನ್ನು ಪಡೆದಿರುವ ಪ್ರತಿಮಾ, ತಮ್ಮ ಮುದ್ದಾದ ಲುಕ್‌ ಹಾಗೂ ರೀಲ್‌ಗಳ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ರೀಲ್‌ಗಳಲ್ಲೂ ಕೂಡ ಅವರ ಒಂದೊಂದು ಲುಕ್ ನೋಡುಗರಿಗೆ ಪ್ರಿಯವಾಗಿದ್ದವು. ಸೀರಿಯಲ್‌ನಲ್ಲಿ ನಟಿಸಿದರೂ ಇಂದಿಗೂ ರೀಲ್‌ಗಳಲ್ಲೂ ಅವರನ್ನು ಇಷ್ಟಪಡುತ್ತಿದ್ದಾರೆ. ಇದಕ್ಕೆ ಅವರ ಲುಕ್‌ ಕೂಡ ಸಾಥ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಅತ್ಯಾಕರ್ಷಕ ವೈಟ್‌ ಲೆಹೆಂಗಾ

ನಟಿ ಪ್ರತಿಮಾ ಧರಿಸಿರುವ ಅತ್ಯಾಕರ್ಷಕ ವೈಟ್‌ ಲೆಹೆಂಗಾ ನೋಡಲು ಲಂಗ ದಾವಣಿಯಂತೆಯೇ ಇದೆ. ಇದಕ್ಕೆ ಕಾಂಟ್ರಸ್ಟಾ ಕಲರ್‌ ಆಗಿ ಅವರು ಧರಿಸಿರುವ ರೆಡ್‌ ಕಲರ್‌ನ ದಾವಣಿ ಸಖತ್‌ ಆಗಿ ಮ್ಯಾಚ್‌ ಆಗಿದೆ. ಈ ಡಿಸೈನರ್‌ವೇರ್‌ ಹ್ಯಾಂಡ್‌ಮೇಡ್‌ ಡಿಸೈನ್‌ ಹೊಂದಿರದಿದ್ದರೂ ಕೂಡ ಬ್ಲೌಸ್‌ನ ಬಾರ್ಡರ್‌ ಹಾಗೂ ಲಂಗದ ಬಾರ್ಡರ್‌ ಇಡೀ ಔಟ್‌ಫಿಟ್ಟನ್ನು ಹೈಲೈಟ್‌ ಮಾಡಿದೆ. ಇನ್ನು ದುಪಟ್ಟ ಅಂದರೇ ದಾವಣಿ ಕೂಡ ಕಾಂಟ್ರಸ್ಟ್ ಕಲರ್‌ನದ್ದು ಧರಿಸಿರುವುದರಿಂದ ನೋಡಲು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಂಗ್‌ ವಿಮರ್ಶಕರು.

4/5

ಪ್ರತಿಮಾರಂತೆ ಕಾಣಲು ಇಲ್ಲಿದೆ ಸಿಂಪಲ್‌ ಟಿಪ್ಸ್

ಸ್ಟೈಲಿಸ್ಟ್‌ಗಳ ಪ್ರಕಾರ, ಪ್ರತಿಮಾರಂತೆ ಕಾಣಲು ಈ ಸಿಂಪಲ್‌ ಟಿಪ್ಸ್ ಫಾಲೋ ಮಾಡಿದರೇ ಸಾಕಂತೆ!

  • ಬಾರ್ಡರ್‌ ಇರುವಂತಹ ವೈಟ್‌ ಲೆಹೆಂಗಾ ಆಯ್ಕೆ ಮಾಡಬೇಕು.
  • ದುಪಟ್ಟಾ ಅಥವಾ ದಾವಣಿ ಕಾಂಟ್ರಾಸ್ಟ್‌ ಬಣ್ಣದ್ದಾಗಿರಬೇಕು.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿರಬೇಕು.
  • ಕೈತುಂಬಾ ಬಳೆ ಧರಿಸಿದರೇ ಟ್ರೆಡಿಷನಲ್‌ ಲುಕ್‌ ಗ್ಯಾರಂಟಿ.
  • ಹಣೆಗೊಂದು ಬಿಂದಿ ಇಟ್ಟರೇ ನೋಡಲು ಲಕ್ಷಣವಾಗಿ ಕಾಣಿಸಬಹುದು.
5/5

ಮುದ್ದು ಸೊಸೆ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ನಟಿ ಪ್ರತಿಮಾ ಥಾಕೂರ್‌ ಧರಿಸಿರುವ ವೈಟ್‌ ಲೆಹೆಂಗಾ ನೋಡುಗರ ಕಣ್ಮನ ಸೆಳೆದಿದೆ.

ಶೀಲಾ ಸಿ ಶೆಟ್ಟಿ

View all posts by this author