ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಸನ್ನಿ ಲಿಯೋನ್‌ ಉಟ್ಟ ಬ್ಲ್ಯಾಕ್‌ ಲೇಸ್‌ ಸೀರೆಗೆ ಭಾರಿ ಡಿಮ್ಯಾಂಡ್‌

Sunny Leone: ಸದಾ ಹಾಟ್‌ ಲುಕ್‌ನಲ್ಲೆ ಕಾಣಿಸಿಕೊಳ್ಳುತ್ತಿದ್ದ ನಟಿ ಸನ್ನಿ ಲಿಯೋನ್‌ ಉಟ್ಟ ಬ್ಲ್ಯಾಕ್‌ ಲೇಸ್‌ ಸೀರೆಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಸನ್ನಿ ಲಿಯೋನ್‌ ಉಟ್ಟ ಬ್ಲ್ಯಾಕ್‌ ಕಲರ್‌ನ ಅತ್ಯಾಕರ್ಷಕ ಪಾರ್ಟಿವೇರ್‌ ಲೇಸ್‌ ಸೀರೆ ಇದೀಗ ಆಕೆಯ ಫಾಲೋವರ್‌ಗಳನ್ನು ಮಾತ್ರವಲ್ಲ, ಮಡಿವಂತಿಕೆ ಬಯಸುವ ಸೀರೆ ಪ್ರಿಯರನ್ನು ಸೆಳೆದಿದೆ. ಇದ್ಯಾವ ಬಗೆಯ ಸೀರೆ? ಏನಿದರ ವಿಶೇಷತೆ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸನ್ನಿ ಲಿಯೋನ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸದಾ ಬಿಚ್ಚಮ್ಮಳಾಗಿ ಕಾಣಿಸಿಕೊಳ್ಳುವ ಸನ್ನಿ ಲಿಯೋನ್‌ (Sunny Leone) ಬ್ಲ್ಯಾಕ್‌ ಲೇಸ್‌ ಸೀರೆಯಲ್ಲಿ (Star Fashion 2026) ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದೇ ತಡ, ಆ ಸೀರೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಉಂಟಾಗಿದೆ. ಹೌದೌದು, ಪ್ರತಿ ಬಾರಿಯೂ ಹಾಟ್‌ ಲುಕ್‌ನಲ್ಲೆ ಕಾಣಿಸಿಕೊಳ್ಳುವ ಸನ್ನಿ ಲಿಯೋನ್‌ ಉಟ್ಟ ಬ್ಲ್ಯಾಕ್‌ ಕಲರ್‌ನ ಅತ್ಯಾಕರ್ಷಕ ಪಾರ್ಟಿವೇರ್‌ ಲೇಸ್‌ ಸೀರೆ ಇದೀಗ ಆಕೆಯ ಫಾಲೋವರ್‌ಗಳನ್ನು ಮಾತ್ರವಲ್ಲ, ಮಡಿವಂತಿಕೆ ಬಯಸುವ ಸೀರೆ ಪ್ರಿಯರನ್ನು ಸೆಳೆದಿದೆ.

Sunny Leone

ಸನ್ನಿ ಸಿನಿಮಾ ಸೀರೆ

ಅಂದಹಾಗೆ, ಸನ್ನಿ ಲಿಯೋನ್‌ ಸಿನಿಮಾಗಾಗಿ ಈ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರಿಗೆ ಈ ಸೀರೆ ಅತಿ ಹೆಚ್ಚು ಪ್ರಿಯವಾಗಿದ್ದರಿಂದ ಈ ಸೀರೆಯ ಫೋಟೋಶೂಟ್‌ ಕೂಡ ಮಾಡಿದ್ದರೆನ್ನಲಾಗಿದೆ. ನಂತರ ಸೋಷಿಯಲ್‌ ಮೀಡಿಯಾದಲ್ಲಿ ಈ ಸೀರೆಯ ಅನೇಕ ಫೋಟೋಗಳನ್ನು ಅಪ್‌ಲೋಡ್‌ ಮಾಡಿರುವ ಸನ್ನಿ ಲಿಯೋನ್‌ಗೆ ಸೀರೆ ಪ್ರಿಯರ ಮೆಚ್ಚುಗೆಯೂ ದೊರೆತಿದೆ.

Black Lace Saree

ಸನ್ನಿ ಸೀರೆಯ ವಿಶೇಷತೆ

ಸೀರೆ ಪ್ರಿಯರಿಗೆ ತಿಳಿದಿರುವಂತೆ, ಸನ್ನಿ ಲಿಯೋನ್‌ ಉಟ್ಟ ಸೀರೆ ಸಾಲಿಡ್‌ ಬ್ಲ್ಯಾಕ್‌ ಕಲರ್‌ನ ಲೇಸ್‌ ಅಲ್ಲಲ್ಲಿ ಶೀರ್‌ ಲುಕ್‌ ಕೂಡ ಹೊಂದಿದೆ. ಬ್ಯಾಕ್ಲೆಸ್‌ ಬ್ಲೌಸ್‌ ಜತೆ ಮ್ಯಾಚ್‌ ಮಾಡಲಾಗಿದೆ. ಇದು ಅವರಿಗೆ ಗ್ಲಾಮರಸ್‌ ಟಚ್‌ ಕೂಡ ನೀಡಿದೆ. ಇನ್ನು ಇವರ ಒಟ್ಟಾರೆ, ಸೀರೆಯ ಮೇಕೋವರ್‌ ಅವರಿಗೆ ಕಂಪ್ಲೀಟ್‌ ಎಲಿಗೆಂಟ್‌ ಲುಕ್‌ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Actress Sunny Leone

ಪಾರ್ಟಿವೇರ್‌ ಕೆಟಗರಿಯಲ್ಲಿ ಸನ್ನಿಯ ಬ್ಲ್ಯಾಕ್‌ ಲೇಸ್‌ ಸೀರೆ

ಈಗಾಗಲೇ ಈ ಸೀಸನ್‌ನ ಪಾರ್ಟಿವೇರ್‌ ಕೆಟಗರಿಯಲ್ಲಿ ಸನ್ನಿ ಉಟ್ಟಿರುವ ಈ ಬ್ಲ್ಯಾಕ್‌ ಲೇಸ್‌ ಸೀರೆಯೂ ಕೂಡ ಸೇರಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಒಟ್ನಲ್ಲಿ, ಸನ್ನಿ ಕೂಡ ಸೀರೆಯಲ್ಲಿ ಅಂದವಾಗಿ ಕಾಣಿಸುತ್ತಾಳೆ ಎಂಬುದನ್ನು ಈ ಫೋಟೋಗಳು ಪ್ರೂವ್‌ ಮಾಡಿವೆ ಎನ್ನಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author