-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಬಿಲ್ ಖಾನ್ ನೇವ್ ಲೆದರ್ ಜಾಕೆಟ್ ಸದ್ಯ ಜೆನ್ ಜಿ ಯುವಕರನ್ನು ಸೆಳೆದಿದೆ ಹಾಗೂ ಸವಾರಿ ಮಾಡತೊಡಗಿದೆ. ಹೌದು, ದಿವಂಗತ ಹಿರಿಯ ನಟ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್ ಇತ್ತೀಚೆಗೆ ಇವೆಂಟ್‌ವೊಂದರಲ್ಲಿ ಧರಿಸಿದ್ಧ ಅಸ್ಸೆಮ್ಮಿಟ್ರಿಕಲ್ ನೇವ್ ಲೆದರ್ ಜಾಕೆಟ್ ಸದ್ಯ ಮೆನ್ಸ್ ಜಾಕೆಟ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿದೆ. ಜೆನ್ ಜಿ ಯುವಕರ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿದೆ.
ಅಸ್ಸೆಮ್ಮಿಟ್ರಿಕಲ್ ನೇವ್ ಲೆದರ್ ಜಾಕೆಟ್ ಸ್ಪೆಷಾಲಿಟಿ
ಅಂದಹಾಗೆ, ಇದು ಸಾಮಾನ್ಯ ಜಾಕೆಟ್ ಅಲ್ಲವೇ ಅಲ್ಲ, ಸಾಕಷ್ಟು ವೆರೈಟಿ ಡಿಸೈನ್‌ವುಳ್ಳ ಜಾಕೆಟ್ ಎನ್ನಬಹುದು. ಆರ್‌ಎಸ್ ಆರ್ಚೀವ್ ಲೆಬೆಲ್‌ನ ವಕ್ರ ವಕ್ರವಾದ ಡಿಸೈನ್ ಜತೆಗೆ ಸಾಕಷ್ಟು ಡಿಸೈನರ್ ಬಟನ್‌ಗಳನ್ನು ಒಳಗೊಂಡಿದೆ. ಮಿಲಿಟರಿ ಜಾಕೆಟ್‌ನಿಂದ ಸ್ಫೂರ್ತಿಗೊಂಡ ವಿನ್ಯಾಸದಂತಿದೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ಸ್.
ಮೆನ್ಸ್ ಫ್ಯಾಷನ್‌ವೇರ್‌ನಲ್ಲಿ ಸ್ಥಾನ
ಲೆದರ್ ಜಾಕೆಟ್‌ಗಳಿಗೆ ಮೊದಲಿನಿಂದಲೂ ತನ್ನದೇ ಆದ ಸ್ಥಾನವಿದೆ. ಇತ್ತೀಚೆಗೆ ಫೇಕ್ ಲೆದರ್‌ಗಳಲ್ಲೂ ಈ ಶೈಲಿಯ ಡಿಸೈನ್ ಆಗಮಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲೆದರ್ ಜಾಕೆಟ್ ಪ್ರಿಯ ಯುವಕರಿಗೆ ತಿಳಿದರಬೇಕಾದ ಅಂಶಗಳು
- ಮಳೆಗಾಲದಲ್ಲಿ ಲೆದರ್ ಜಾಕೆಟ್ ಧರಿಸುವಾಗ ಸಾಕಷ್ಟು ಕ್ರಮಗಳನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಒದ್ದೆಯಾಗಿ ನಿರ್ವಹಣೆ ಕೊರತೆಯಿಂದಾಗಿ ಹಾಳಾಗಬಹುದು.
- ಮುಂಬರುವ ಸೀಸನ್‌ಗೆ ಹೇಳಿ ಮಾಡಿಸಿದ ಜಾಕೆಟ್ ಇದು.
- ಲೆದರ್ ಜಾಕೆಟ್ ಲಕ್ಷುರಿ ಲುಕ್ ಜತೆಗೆ ವಿಂಟೇಜ್ ಲುಕ್ ಕೂಡ ನೀಡುತ್ತದೆ.
- ಲೆದರ್ ಜಾಕೆಟ್ ಜೊತೆ ಬ್ಲ್ಯಾಕ್ ಪ್ಯಾಂಟ್ ಮ್ಯಾಚ್ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)