ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ ಫಾಲೋ ಮಾಡಿದ ಕೃತಿ ಸನೂನ್‌

Kriti Sanon: ಕಾಕ್‌ಟೈಲ್‌-2 ಸಿನಿಮಾ ಇವೆಂಟ್‌ವೊಂದರಲ್ಲಿ ನಟಿ ಕೃತಿ ಸನೂನ್‌, ಜೆನ್‌ ಜಿ ಹುಡುಗಿಯರ ಅಲ್ಟ್ರಾ ಮಾಡರ್ನ್‌ ಲುಕ್‌ ಫಾಲೋ ಮಾಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಅವರು ಧರಿಸಿದ್ಧ ಉಡುಗೆಯಾದರೂ ಯಾವುದು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಕೃತಿ ಸನೂನ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಲ್ಟ್ರಾ ಮಾಡರ್ನ್‌ ಜೆನ್‌ ಜಿ ಹುಡುಗಿಯರಂತೆ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ಬೆಡಗಿ ಕೃತಿ ಸನೂನ್‌ (Kriti Sanon). ಈಗಾಗಲೇ ಕೃತಿ ಸನೂನ್‌, ಕಾಕ್‌ಟೈಲ್‌-2 ಸಿನಿಮಾ ಇವೆಂಟ್‌ಗಳಲ್ಲಿ ಸಾಕಷ್ಟು ಬೋಲ್ಡ್ & ಬ್ಯೂಟಿಫುಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಅವರ ಎಲ್ಲಾ ಲುಕ್‌ಗಳು ಕೂಡ ಇಂದಿನ ಜೆನ್‌ ಜಿ ಹೈ ಫ್ಯಾಷನ್‌ ಥೀಮ್‌ಗೆ ಸೇರಿವೆ. ಅವುಗಳಲ್ಲಿ, ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ ಥೀಮ್‌ಗೆ ಸೇರಿದ ಅಲ್ಟ್ರಾ ಮಾಡರ್ನ್‌ ಲುಕ್‌ವೊಂದನ್ನು ಅವರು ಆಸಕ್ತಿಯಿಂದ ಫಾಲೋ ಮಾಡಿದ್ದಾರೆ.

ಟ್ಯೂಬ್‌ ಕಾಲಂ ಮ್ಯಾಕ್ಸಿ ಡ್ರೆಸ್‌ನಲ್ಲಿ ಕೃತಿ ಸನೂನ್‌

ಟ್ಯೂಬ್‌ ಡ್ರೆಸ್ ಕಾನ್ಸೆಪ್ಟ್‌ನ ಸ್ಟ್ರಾಪ್‌ಲೆಸ್‌ ಆಗಿರುವ ಮಲ್ಟಿ ಕಲರ್‌ನ ಕೀ ಹೋಲ್‌ ಕಟೌಟ್‌ ಇರುವಂತಹ ಕಾಲಂ ಮ್ಯಾಕ್ಸಿ ಡ್ರೆಸ್ಸನ್ನು ಕೃತಿ ಧರಿಸಿದ್ದು, ಅದರೊಂದಿಗೆ ಸ್ಟೇಟ್‌ಮೆಂಟ್‌ ಬೆಲ್ಟ್ ಕೂಡ ಮ್ಯಾಚ್‌ ಮಾಡಿರುವುದು ಜೆನ್‌ ಜಿಯ ಚಂಕಿ ಸ್ಟೇಟ್‌ಮೆಂಟನ್ನು ಫಾಲೋ ಮಾಡಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು. ಇನ್ನು, ಕೃತಿಯ ಈ ಡ್ರೆಸ್‌ನಲ್ಲಿನ ಮಲ್ಟಿ ಕಲರ್‌ ಹಾಗೂ ಹಾರಿಜಾಂಟಲ್‌ ಅಂದರೇ ಪಟ್ಟೆ ಪಟ್ಟೆ ಸ್ಟ್ರೈಪ್ಸ್ ಅವರ ಲುಕ್ಕನ್ನು ಹೈಲೈಟ್‌ ಮಾಡಿದೆ. ಜತೆಗೆ ಅವರಿಗೆ ನಯಾ ಲುಕ್‌ ನೀಡಿದೆ ಎಂದಿದ್ದಾರೆ.

Gen G girls

ಸುಕೃತಿ ಗ್ರೋವರ್‌ ಸ್ಟೈಲಿಂಗ್‌

ಸುಕೃತಿ ಗ್ರೋವರ್‌ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೂನ್‌ ಧರಿಸಿದ್ಧ ಈ ಮಲ್ಟಿ ಕಲರ್‌ನ ಈ ಫಿಟ್ಟಿಂಗ್‌ ಡ್ರೆಸ್‌ ಸೈಡ್‌ ಸ್ಲಿಟ್‌ ಕೂಡ ಒಳಗೊಂಡಿತ್ತು. ಹಾಗಾಗಿ ಅವರಿಗೆ ಕಂಪ್ಲೀಟ್‌ ಜೆನ್‌ ಜಿ ಹುಡುಗಿಯರ ಅಲ್ಟ್ರಾ ಮಾಡರ್ನ್‌ ಲುಕ್‌ ಯಶಸ್ವಿಯಾಗಿ ಫಾಲೋ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ಮೇಧಾ.

Kriti Sanon

ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ಗೆ ಸೈ ಎಂದ ಕೃತಿ

ಒಟ್ಟಾರೆ, ಈ ಬಾರಿ ಕೃತಿ ಸನೂನ್‌, ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ಗೆ ಸೈ ಎಂದಿರುವುದು ಸಾಕಷ್ಟು ಹೊಸ ಡ್ರೆಸ್‌ಗಳ ಪ್ರಯೋಗಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

ಶೀಲಾ ಸಿ ಶೆಟ್ಟಿ

View all posts by this author