ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಜೆನ್‌ ಜಿ ಫ್ಯಾಷನ್‌ ಕಾಪಿ ಮಾಡಿದ ನೋರಾ

Nora Fatehi: ಬಾಲಿವುಡ್‌ ನಟಿ ನೋರಾ ಫತೇಹಿ ಗ್ಲಾಮರಸ್‌ ಹೈ ಸ್ಲಿಟ್‌ ಡೆನಿಮ್‌ ಸ್ಕರ್ಟ್ ಹಾಗೂ ಕ್ರಾಪ್‌ ಟೈ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ ಹೇಗಿದೆ? ಫ್ಯಾಷನಿಸ್ಟಾಗಳೇನು ರಿವ್ಯೂ ನೀಡಿದ್ದಾರೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ನೋರಾ ಫತೇಹಿ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ನಟಿ ನೋರಾ ಫತೇಹಿ ಸಖತ್‌ ಹಾಟ್‌ ಆಗಿ (Star Fashion 2026) ಕಾಣಿಸಿಕೊಂಡಿದ್ದಾರೆ. ಜೆನ್‌ ಜಿ ಹುಡುಗಿಯರಂತೆ ಪೋಸ್‌ ನೀಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್‌ನಲ್ಲಿ ಮೊದಲಿನಿಂದಲೂ ನೋರಾ ಫತೇಹಿ (Nora Fatehi) ಹಾಟ್‌ ನಟಿ ಎಂದೇ ಗುರುತಿಸಿಕೊಂಡಿರುವವರು. ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹೊಸ ಹೊಸ ಔಟ್‌ಫಿಟ್‌ನ ಫ್ಯಾಷನ್‌ ಶೂಟ್‌ಗಳ ಹಂಗಾಮ ಎಬ್ಬಿಸುತ್ತಲೇ ಇರುತ್ತಾರೆ. ಇನ್ನು, ಈ ಬಾರಿ ಅವರು ಸದ್ಯ ಜೆನ್‌ ಜಿ ಹುಡುಗಿಯರ ಫ್ಯಾಷನ್‌ ಲಿಸ್ಟ್‌ನಲ್ಲಿರುವ ಹೈ ಸ್ಲಿಟ್‌ ಡೆನಿಮ್‌ ಲಾಂಗ್‌ ಸ್ಕರ್ಟ್ ಹಾಗೂ ಕ್ರಾಪ್‌ ಟೈ ಟಾಪ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಫಾಲೋವರ್‌ಗಳನ್ನು ಸೆಳೆದಿದ್ದಾರೆ.

Bollywood actress Nora Fatehi

ಜೆನ್‌ ಜಿ ಗೆ ಸೆಡ್ಡು ಹೊಡೆದ ನೋರಾ ಫ್ಯಾಷನ್‌

ಹರ್ಡೆಂಡ್‌ ಪರ್ಸೆಂಟ್‌ ಜೆನ್‌ ಜಿ ಫ್ಯಾಷನ್‌ಗೆ ನೋರಾ ಈ ಬಾರಿ ಸೆಡ್ಡು ಹೊಡೆದಿದ್ದಾರೆ. ಅದು ಹೇಗೆ? ಅಂತಿರಾ! ಸದಾ ಡ್ಯಾನ್ಸಿಂಗ್‌ ಸ್ಟೈಲ್‌ನಲ್ಲಿ ಫ್ಯಾಷನ್‌ ಫಾಲೋ ಮಾಡುತ್ತಿದ್ದ ನೋರಾ, ಜೆನ್‌ ಜಿ ಲಿಸ್ಟ್ನಲ್ಲಿರುವ ಕ್ರಾಪ್ಡ್ ಟೈಯಿಂಗ್‌ ಟಾಪ್‌ ಹಾಗೂ ಅದಕ್ಕೆ ಮಿಡ್‌ ಹೈ ಸ್ಲಿಟ್‌ ಇರುವಂತಹ ಮ್ಯಾಕ್ಸಿ ಡೆನಿಮ್‌ ಸ್ಕರ್ಟ್‌ ಅನ್ನು ಧರಿಸಿದ್ದಾರೆ. ನೋಡಲು ಥೇಟ್‌ ಟೀನೇಜ್‌ ಹುಡುಗಿಯರಂತೆ ಪೋಸ್‌ ನೀಡಿ, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾ ತೇಜ್‌.

High slit denim skirt and crop top

ನೋರಾ ಔಟ್‌ಫಿಟ್‌ ವಿಶೇಷತೆಯೇನು?

ಸದ್ಯ ಡೆನಿಮ್‌ ಕೇವಲ ಜಾಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ! ಬದಲಿಗೆ ಸ್ಕರ್ಟ್‌ನಲ್ಲೂ ಪಾಪುಲರ್‌ ಆಗಿದೆ. ಇದನ್ನು ನೋರಾ ಧರಿಸಿದ್ದು, ಅದಕ್ಕೆ ಡೀಪ್‌ ವಿ ನೆಕ್‌ನ ಕ್ರಾಪ್ಡ್ ಟೈಯಿಂಗ್‌ ಟಾಪ್‌ ಮ್ಯಾಚ್‌ ಮಾಡಿರುವುದು ಅವರ ಗ್ಲಾಮರಸ್‌ ಪರ್ಸನಾಲಿಟಿಯನ್ನು ತೋರ್ಪಡಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಂಕ್‌.

Nora Fatehi

ಗುಡ್‌ ಲುಕ್ಕಿಂಗ್‌ ನೋರಾ

ಎಂದಿನಂತೆ ನೋರಾ ಈ ಔಟ್‌ಫಿಟ್‌ನಲ್ಲೂ ಅಂದವಾಗಿ ಕಾಣಿಸುತ್ತಿದ್ದಾರೆ. ಜೆನ್‌ ಜಿಯವರನ್ನು ಮೀರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸ್ಟೈಲಿಸ್ಟ್ ರೀಟಾ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author