-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೇಯರ್ಡ್ ಲುಕ್ ನೀಡುವ ಬಾಡಿಕಾನ್ ಮಿಡಿ ಡ್ರೆಸ್ ಮಾನ್ಸೂನ್‌ಗೂ ಮುನ್ನವೇ ಟ್ರೆಂಡಿಯಾಗಿದೆ. ಹೌದು. ಈ ಔಟ್‌ಫಿಟ್ ಮತ್ತೊಮ್ಮೆ ಟ್ರೆಂಡಿಯಾಗಲು ಕಾರಣ ಬೇರ್ಯಾರು ಯಾರೂ ಅಲ್ಲ! ಬಾಲಿವುಡ್ ನಟಿ ಶಾರ್ವರಿ. ಸಿನಿಮಾ ಇವೆಂಟ್‌ವೊಂದರಲ್ಲಿ ಶಾರ್ವರಿ ಧರಿಸಿದ್ಧ ಮಿನುಗುವ ಅಂದರೇ, ಸಿಕ್ವೀಬ್ಸ್‌ನ ಲೇಯರ್ಡ್ ಲುಕ್ ನೀಡುವ ಚಿತ್ತಾರವುಳ್ಳ ಬಾಡಿಕಾನ್ ಲೇಯರ್ಡ್ ಮಿಡಿ ಡ್ರೆಸ್ ಮುಂಬರುವ ಸೀಸನ್‌ಗೂ ಮುನ್ನವೇ ಟ್ರೆಂಡಿಯಾಗಿದೆ. ಹುಡುಗಿಯರನ್ನು ಮಾತ್ರವಲ್ಲ, ಮಾನಿನಿಯರನ್ನು ಸೆಳೆದಿದೆ.
ಶಾರ್ವರಿ ಧರಿಸಿರುವ ಲೇಯರ್ಡ್ ಮಿಡಿ ಡ್ರೆಸ್
ಪೀಚ್ ವರ್ಣದ ಈ ಡ್ರೆಸ್ ಸಿಕ್ವಿನ್ಸ್‌ನಿಂದ ಡಿಸೈನ್ ಮಾಡಲಾಗಿದೆ. ಡಾರ್ಕ್ ಶೇಡ್‌ನ ಕಲರ್‌ಗಳಿಂದ ಮಿನುಗುವ ಚಿತ್ತಾರ ಒಳಗೊಂಡಿದೆ. ವಿಶೇಷವೆಂದರೆ ಈ ಮಿಡಿ ಡ್ರೆಸ್ಸನ್ನು ಹಾಗೆಯೇ ಧರಿಸಬಹುದಿತ್ತು. ಆದರೆ, ಶಾರ್ವರಿ ಈ ಮಿಡಿ ಡ್ರೆಸ್ ಒಳಗೆ ಶ್ವೇತ ವರ್ಣದ ಶರ್ಟ್ ಧರಿಸಿದ್ದಾರೆ. ಇದು ಈ ಸೀಸನ್‌ಗೆ ದಿ ಎಂಡ್ ಎನ್ನುವಂತಿದೆ. ಮುಂಬರುವ ಮಾನ್ಸೂನ್‌ಗೆ ಲೇಯರ್ಡ್ ಲುಕ್ ಸ್ಯಾಂಪಲ್ ನೀಡುವಂತಿದೆ ಎನ್ನುವ ಫ್ಯಾಷನ್ ವಿಮರ್ಶಕರ ಪ್ರಕಾರ, ಎರಡು ದಶಕಗಳ ಹಿಂದೆ ಈ ಡ್ರೆಸ್ ಸಖತ್ ಟ್ರೆಂಡಿಯಾಗಿತ್ತು ಎನ್ನುತ್ತಾರೆ.
ಆನ್‌ಲೈನ್ ಶಾಪ್‌ಗಳಲ್ಲಿ ಬಿಕರಿಯಾಗುತ್ತಿರುವ ಮಿಡಿ ಡ್ರೆಸ್
ಅಂದಹಾಗೆ, ಶಾರ್ವರಿ ಧರಿಸಿರುವ ಲೇಯರ್ಡ್ ಮಿಡಿ ಡ್ರೆಸ್ ಈಗಾಗಲೇ ಆನ್‌ಲೈನ್ ಶಾಪ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಬಿಕರಿಗೊಳ್ಳುತ್ತಿವೆ. ನೋಡಲು ರೆಟ್ರೊ ಲುಕ್ ನೀಡುವ ಈ ಡ್ರೆಸ್ ನಯಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದೆ ಎನ್ನುತ್ತಾರೆ ಡಿಸೈನರ್ಸ್.
ಹೊಸ ಸ್ಟೈಲಿಂಗ್
ಒಟ್ಟಾರೆ, ಈ ಡ್ರೆಸ್ ಹೊಸ ಸ್ಟೈಲಿಂಗ್‌ನಲ್ಲಿ ಶಾರ್ವರಿ ಧರಿಸಿರುವುದು ಜೆನ್ ಜಿ ಹುಡುಗಿಯರಿಗೂ ಇಷ್ಟವಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.