ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಜೆನ್‌ ಜಿ ಗಮನ ಸೆಳೆದ ತಾಪ್ಸಿಯ ಕ್ರಾಪ್ಡ್ ಟ್ರೆಂಚ್‌ ಜಾಕೆಟ್‌

Taapsee Pannu: ಬಾಲಿವುಡ್‌ ನಟಿ ತಾಪ್ಸಿ ಪನ್ನು ಸಿನಿಮಾ ಇವೆಂಟ್‌ವೊಂದರಲ್ಲಿ ಫೆನ್ನೆಲ್‌ ನೆಕ್‌ ಬೆಲ್ಟೆಡ್‌ ಶಾರ್ಟ್ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡು ಮಾನ್ಸೂನ್‌ ಲುಕ್‌ಗೆ ಸೈ ಎಂದಿದ್ದಾರೆ. ಜೆನ್‌ ಜಿ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ತಾಪ್ಸಿ ಪನ್ನು, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ತಾಪ್ಸಿ ಪನ್ನು ಧರಿಸಿದ್ಧ ಫೆನ್ನೆಲ್‌ ನೆಕ್‌ಲೈನ್‌ ಹೊಂದಿರುವ ಬೆಲ್ಟೆಡ್‌ ಶಾರ್ಟ್ ಟ್ರೆಂಚ್‌ ಕೋಟ್‌ ಸದ್ಯ ಮಾನ್ಸೂನ್‌ ಫ್ಯಾಷನ್‌ ಪ್ರಿಯ ಜೆನ್‌ ಜಿಯ ಗಮನಸೆಳೆದಿದೆ. ಹೌದು, ಬಾಲಿವುಡ್‌ ನಟಿ ತಾಪ್ಸಿ ಪನ್ನು (Star Fashion 2026) ಸಿನಿಮಾ ಇವೆಂಟ್‌ವೊಂದರಲ್ಲಿ ಡಿಸೈನರ್‌ ಉಡುಗೆಯನ್ನು ತ್ಯಜಿಸಿ ಕ್ಯಾಶುವಲ್‌ ಲುಕ್‌ ನೀಡುವಂತಹ ಟ್ರೆಂಡಿಯಾಗಿರುವಂತಹ ಫನ್ನೆಲ್‌ ನೆಕ್‌ ಬೆಲ್ಟೆಡ್‌ ಶಾರ್ಟ್ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡು ಈ ಸೀಸನ್‌ನ ಮಾನ್ಸೂನ್‌ ಲುಕ್‌ಗೆ ಸೈ ಎಂದಿದ್ದಾರೆ.

Taapsee Pannu

ಇದ್ಯಾವ ಬಗೆಯ ಔಟ್‌ಫಿಟ್‌?

ಅಂದಹಾಗೆ, ತಾಪ್ಸಿ ಪನ್ನು ಧರಿಸಿರುವ ಈ ಮಾನ್ಸೂನ್‌ ಔಟ್‌ಫಿಟ್‌ ಕೊಂಚ ಡಿಫರೆಂಟಾಗಿದೆ. ಟ್ರೆಂಚ್‌ ಕೋಟ್‌ ಎಂದಾಕ್ಷಣಾ ಎಲ್ಲರೂ ಯೋಚಿಸುವುದು ಉದ್ದುದ್ದ ಕೋಟ್‌! ಆದರೆ, ಇದು ಅದಲ್ಲ! ಬದಲಿಗೆ ಕ್ರಾಪ್‌ ಆಗಿರುವಂತೆ ಕಾಣಿಸುವ ಶಾರ್ಟ್ ಟ್ರೆಂಚ್‌ ಕೋಟ್‌. ವಿಶೇಷವೆಂದರೇ ಈ ಟ್ರೆಂಚ್‌ ಕೋಟ್‌ ಡಬ್ಬಲ್‌ ಬ್ರೇಸ್ಟೆಡ್‌ ಬಟನ್‌ ಡಿಸೈನ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಲರ್‌ ಬದಲು ಫನ್ನಲ್‌ ನೆಕ್‌ಲೈನ್‌ ಹೊಂದಿದೆ ಎಂದಿದ್ದಾರೆ ಸ್ಟೈಲಿಸ್ಟ್‌ಗಳು.

Cropped trench jacket

ಜೆನ್‌ ಜಿ ಸೆಳೆದ ತಾಪ್ಸಿ ಪನ್ನು ಡ್ರೆಸ್‌ಕೋಡ್‌

ತಾಪ್ಸಿ ಪನ್ನುವಿನ ಈ ಡ್ರೆಸ್‌ಕೋಡ್‌ ಸದ್ಯ ಜೆನ್‌ ಜಿ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಉದ್ದುದ್ದ ಟ್ರೆಂಚ್‌ಕೋಟ್‌ ನೋಡಿದ್ದವರಿಗೆ ಹೀಗೂ ಧರಿಸಬಹುದು, ಈ ರೀತಿಯ ಕೋಟ್‌ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ತೋರ್ಪಡಿಸಿದೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

Bollywood actress Taapsee Pannu

ತಾಪ್ಸಿ ಪನ್ನು ಟ್ರೆಂಚ್‌ ಕೋಟ್‌ ಹೈಲೈಟ್ಸ್

  • ಕ್ರಾಪ್‌ನಂತೆ ಕಾಣಿಸುವ ಶಾರ್ಟ್ ಟ್ರೆಂಚ್‌ ಕೋರ್ಟ್ ಇದಾಗಿದೆ.
  • ಈ ಡ್ರೆಸ್‌ಕೋಡ್‌ಗೆ ಹೆಚ್ಚು ಮೇಕೋವರ್‌ ಬೇಕಾಗಿಲ್ಲ!
  • ನ್ಯಾಚುರಲ್ ಲುಕ್‌ ಕೂಡ ಮ್ಯಾಚ್‌ ಆಗಬಲ್ಲದು.

(ಲೇಖಕಿ, ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author