-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾಯ್ತು, ಸಂಗೀತ್ ಕಾರ್ಯಕ್ರಮವೂ ಆಯ್ತು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿರೋಶ್ ವೆಡ್ಡಿಂಗ್ ಫ್ಯಾಷನ್‌ನ (Star Fashion 2026) ಭಾಗವಾಗಿದ್ದ ಮೆಹೆಂದಿ ಶಾಸ್ತ್ರದ ಡಿಸೈನರ್‌ವೇರ್‌ಗಳದ್ದೇ ಸುದ್ದಿ! ಆ ಮಟ್ಟಿಗೆ ಇವರಿಬ್ಬರ ಉಡುಗೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾಷನ್ ಪ್ರಿಯರ ಹುಬ್ಬೇರಿಸಿದೆ.
ಯೂನಿಕ್ ಡಿಸೈನ್‌ಗೆ ಸೈ ಎಂದ ವಿರೋಶ್ ಜೋಡಿ
ಅಂದಹಾಗೆ, ಕೆಲವು ತಿಂಗಳ ಹಿಂದೆಯೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಒಂದೊಂದು ಕಾರ್ಯಕ್ಕೂ ತಮ್ಮ ಡಿಸೈನರ್‌ವೇರ್ಸ್ ಹೀಗೆಯೇ ಇರಬೇಕೆಂದು ನಿರ್ಧರಿಸಿದ್ದರಂತೆ. ಮುಖ್ಯವಾದ ಕಾರ್ಯಕ್ರಮಗಳಲ್ಲಿ ಸೌತ್ ಇಂಡಿಯನ್ ಲುಕ್, ಇನ್ನು, ಸಂಗೀತ-ಮೆಹಂದಿಯಂತಹ ಕಾರ್ಯಕ್ರಮಗಳಿಗೆ ನಾರ್ತ್ -ಸೌತ್ ಮಿಕ್ಸ್ ಮ್ಯಾಚ್ ಆಗಿರುವ ಡಿಸೈನರ್‌ವೇರ್‌ಗಳ ಸ್ಕೆಚ್ಚನ್ನೇ ಆಯ್ಕೆ ಮಾಡಿದ್ದರಂತೆ. ಅಲ್ಲದೇ, ಇದುವರೆಗೂ ಯಾವ ಸೆಲೆಬ್ರೆಟಿ ಜೋಡಿಯೂ ಧರಿಸಿರದಂತಹ ಯೂನಿಕ್ ಫ್ಯಾಷನ್ ತಮ್ಮದಾಗಬೇಕೆಂದು ಬಯಸಿದ್ದರಂತೆ. ಅದು ಈಗ ಈಡೇರಿದೆ. ಹಾಗೆಂದಿದ್ದಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ಡಯಟ್ ಸಭ್ಯ.
ವಿರೋಶ್ ಮೆಹಂದಿ ಡಿಸೈನರ್‌ವೇರ್ಸ್
ವಿರೋಶ್ ಜೋಡಿ ಧರಿಸಿದ ಡಿಸೈನರ್‌ವೇರ್ ತೋರಾನಿ ಬ್ರ್ಯಾಂಡ್ ಡಿಸೈನ್ ಮಾಡಿದ್ದಾರೆ.
ರಶ್ಮಿಕಾ ಧರಿಸಿದ ಕಲಾತ್ಮಕ ಲೆಹೆಂಗಾ
ರಶ್ಮಿಕಾ ಧರಿಸಿದ ಕಾರ್ಸೆಟ್ ಶೈಲಿಯ ಆಫ್ ಶೋಲ್ಡರ್ ಬ್ಲೌಸ್ ಹಾಗೂ ಲೆಹೆಂಗಾ ಇದಕ್ಕೆ ಸಾಥ್ ನೀಡಿರುವ ಮಲ್ಟಿ ಕಲರ್ ಡಿಸೈನ್‌ನ ದುಪಟ್ಟಾ ಮೇಲೆ ತಂಜಾವೂರ್ ಪೇಟಿಂಗ್‌ನಲ್ಲಿ ಸೃಷ್ಟಿಸಿರುವ ಲಕ್ಷ್ಮಿದೇವಿಯ ಚಿತ್ತಾರವಿದೆ. ಇದು ಆರ್ಟಿಸಾನ್‌ಗಳ ಕೈಚಳಕವನ್ನು ಹೈಲೈಟ್ ಮಾಡಿದೆ.
ರಾಜಕುಮಾರನಂತೆ ಕಂಗೊಳಿಸಿದ ವಿಜಯ್ ದೇವರಕೊಂಡ
ಇನ್ನು ವಿಜಯ್ ದೇವರಕೊಂಡ ಧರಿಸಿರುವ ಉಡುಗೆಯಂತೂ ಯುವರಾಜನ ಲುಕ್ ನೀಡಿದೆ. ಹೆವಿ ಡಿಸೈನ್‌ನ ಎಥ್ನಿಕ್ ಜಾಕೆಟ್ ಅದಕ್ಕೆ ಸಾಥ್ ನೀಡಿರುವ ಅರ್ಜಕ್ ಪ್ರಿಂಟ್‌ನ ಪಂಚೆ ಶೈಲಿಯ ಧೋತಿ ಇದರ ಜತೆಗೆ ಕತ್ತಿಗೆ ಧರಿಸಿರುವ ಪ್ರಿಶಿಯಸ್ ಸ್ಟೋನ್‌ನ ಹಾರ ಎಲ್ಲವೂ ರಾಯಲ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ರಾಯಲ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ದಾಖಲೆ ಬರೆದ ವಿರೋಶ್ ರಾಜ-ರಾಣಿ ಲುಕ್
ಒಟ್ಟಾರೆ, ಒಂದರ ನಂತರ ಒಂದರಂತೆ ವಿರೋಶ್ ಜೋಡಿಯು ಸೋಶಿಯಲ್ ಮೀಡಿಯಾದಲ್ಲಿ ಒಟ್ಟೊಟ್ಟಿಗೆ ಅಪ್‌ಲೋಡ್ ಮಾಡುತ್ತಿರುವ ಉಡುಗೆಗಳು ಸದ್ಯ ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸುತ್ತಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)