Virosh Wedding Fashion 2026: ರಾಯಲ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ದಾಖಲೆ ಬರೆದ ವಿರೋಶ್ ರಾಜ-ರಾಣಿ ಲುಕ್
Virosh Wedding Fashion: ರಶ್ಮಿಕಾ-ವಿಜಯ್ ಅವರ ವೆಡ್ಡಿಂಗ್ ಅಟೈರ್‌ಗಳು ಅವರನ್ನು ಥೇಟ್ ರಾಜ-ರಾಣಿಯಂತೆ ಬಿಂಬಿಸಿದವು. ಅವರ ಈ ಅತ್ಯಾಕರ್ಷಕ ಉಡುಗೆ ಹಾಗೂ ಜ್ಯುವೆಲರಿಗಳ ವಿಶೇಷತೆಯಾದರೂ ಏನು? ಡಿಸೈನರ್ ಯಾರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರಶ್ಮಿಕಾ –ವಿಜಯ್ ದೇವರಕೊಂಡ., ಚಿತ್ರಕೃಪೆ: weddingvows.in (sketches) -
| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಥೇಟ್ ರಾಜ-ರಾಣಿಯಂತೆ ಬಿಂಬಿಸಿದ ರಶ್ಮಿಕಾ –ವಿಜಯ್ ದೇವರಕೊಂಡ ಮದುವೆಯ ರಾಯಲ್ ಅಟೈರ್‌ಗಳು ಹಾಗೂ ಜ್ಯುವೆಲರಿಗಳು ಈ ಬಾರಿಯ ಗ್ರ್ಯಾಂಡ್ ಟ್ರೆಡಿಷನಲ್ ರಾಯಲ್ ವೆಡ್ಡಿಂಗ್ ಸೀಸನ್‌ನಲ್ಲಿ (Virosh Wedding Fashion 2026) ದಾಖಲೆಯನ್ನೇ ಬರೆದಿವೆ.
ಹೌದು, ನೋಡಲು ಥೇಟ್ ಬಾಹುಬಲಿ ಸಿನಿಮಾದ ಮಹಾರಾಜ-ಮಹಾರಾಣಿಯಂತೆ ಬಿಂಬಿಸಿದ ಈ ವೆಡ್ಡಿಂಗ್ ಡಿಸೈನರ್‌ವೇರ್ಸ್ ಸೃಷ್ಟಿಕರ್ತರು ಬೇರ್ಯಾರು ಅಲ್ಲ! ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್ ಅನಾಮಿಕಾ ಖನ್ನಾ & ಟೀಮ್. (ಸ್ಟೈಲ್ ಬ್ಯಾಮಿ ಸ್ಟೈಲಿಂಗ್, ತನ್ವಿ ಚೆಂಬುರ್‌ಕರ್ ಮೇಕಪ್) ವಿರೋಷ್ ಮದುವೆಯ ಟ್ರೆಡಿಷನಲ್ ಕಾನ್ಸೆಪ್ಟ್‌ಗೆ ತಕ್ಕಂತೆ ಒಂದೊಂದು ಉಡುಗೆಯನ್ನು ಹಾಗೂ ಜ್ಯುವೆಲರಿಗಳನ್ನು ಸೂಕ್ಷ್ಮವಾಗಿ ಡಿಸೈನ್ ಮಾಡಿರುವ ಇವರ ತಂಡ ಇದಕ್ಕಾಗಿ ಸಾಕಷ್ಟು ತಿಂಗಳಿನಿಂದಲೇ ತಯಾರಿ ಮಾಡಿಕೊಂಡಿತ್ತು. ಇದಕ್ಕಾಗಿಯೇ ಕೋಟಿಗಟ್ಟಲೇ ರೂ.ಗಳನ್ನು ಖರ್ಚು ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ರಶ್ಮಿಕಾ ಮಂದಣ್ಣ ಮಹಾರಾಣಿ ಲುಕ್
ರಶ್ಮಿಕಾ ಉಟ್ಟಿದ್ದ ರಸ್ಟ್ ಆರೆಂಜ್‌ನ ರೆಡ್ ಗೋಲ್ಡನ್ ಬಾರ್ಡರ್‌ನ ಕಾಂಚೀವರಮ್ ರೇಷ್ಮೆ ಸೀರೆಯು ಹೈದರಾಬಾದ್ ಪಾರಂಪರಿಕ ಟೆಂಪಲ್ ವಿನ್ಯಾಸವನ್ನೊಳಗೊಂಡಿದೆ. ಕಾಡಿನ ವೈವಿಧ್ಯಮಯ ಪರಿಸರವನ್ನು ಕಲಾತ್ಮಕವಾಗಿ ಹ್ಯಾಂಡ್ ಎಂಬ್ರಾಯ್ಡರಿ ಮೂಲಕ ಸೀರೆಯ ಒಡಲಲ್ಲಿ ಮೂಡಿಸಲಾಗಿದೆ. ಗೋಲ್ಡನ್ ಮೇಲುಡುಗೆ ದುಪಟ್ಟಾದಲ್ಲೂ “ಇನ್ ಎವೆರಿ ಲೈಫ್‌ಟೈಮ್” ಎಂದು ಸೂಕ್ಷ್ಮ ಎಂಬ್ರಾಯ್ಡರಿಯಿಂದಲೇ ಸಿಂಗರಿಸಲಾಗಿದೆ.
ಮಹಾರಾಜನಂತೆ ಕಂಗೊಳಿಸಿದ ವಿಜಯ್ ದೇವರಕೊಂಡ
ಇನ್ನು, ವಿಜಯ್ ದೇವರಕೊಂಡ ವೆಡ್ಡಿಂಗ್ ಅಟೈರ್ ಹಾಗೂ ಲುಕ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ವನಸಿಂಗರಾಮ್ ನೇಯ್ಗೆಯಲ್ಲಿ ಸಿದ್ದಪಡಿಸಲಾಗಿದ್ದ ಅಂಗವಸ್ತ್ರ ಹಾಗೂ ಐವರಿ ಬಣ್ಣದ ಧೋತಿಯು ಕೂಡ ಟೆಂಪಲ್ ವಾಸ್ತು ಶಿಲ್ಪಕಲೆಯ ಕುಸುರಿ ಕಲೆಯ ಬಂಗಾರದ ವಿನ್ಯಾಸವನ್ನುಒಳಗೊಂಡಿವೆ.
ರಾಯಲ್ ಜ್ಯುವೆಲರಿ ಯಲ್ಲಿ ಮಿಂದೆದ್ದ ವಿರೋಶ್ ಜೋಡಿ
ಎಲ್ಲರೂ ನೋಡಿರುವಂತೆ, ವಿರೋಶ್ ಜೋಡಿ ಧರಿಸಿದ್ಧ ಆಭರಣಗಳೆಲ್ಲವೂ ರಾಯಲ್‌ಮಯವಾಗಿದ್ದವು. ಬಂಗಾರದ ಮಾಲೆಗಳ ಮಲ್ಟಿ ಲೇಯರ್ ರಾಣಿ ಹಾರ, ಐದಾರು ಎಳೆಗಳ ಲೇಯರ್ಡ್‌ನ ರಾಣಿ ನೆಕ್ಲೇಸ್, ಲೇಯರ್ಡ್ ಮಾಟಿ, ಬಿಗ್ ಜುಮ್ಕಾ, ಮಾತಾ ಪಟ್ಟಿ, ಬಂಗಾರದ ಜ್ಯುವೆಲ್ ಬ್ಲೌಸ್‌ನಲ್ಲಿ ಪಟ್ಟಿಯಲ್ಲಿ ರಶ್ಮಿಕಾ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದರು.
ಇದೇ ರೀತಿ ವಿಜಯ್ ಕೂಡ ಮಹಾರಾಜನಂತೆ ಟೆಂಪಲ್ ಡಿಸೈನ್‌ನ ಹೆವ್ವಿ ನೆಕ್ಲೇಸ್, ಬಿಗ್ ಹಾರ, ಕಡಗ, ಸ್ಟಡ್ಸ್, ಬಾಜುಬಂಧ್, ಸೊಂಟದ ಕಮರ್‌ಬಾಂದ್ ಧರಿಸಿ ಥೇಟ್ ಬಾಹುಬಲಿ ಸಿನಿಮಾದ ರಾಜನಂತೆ ಕಾಣಿಸುತ್ತಿದ್ದರು.
ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ಒಟ್ಟಾರೆ, ವಿರೋಶ್ ವೆಡ್ಡಿಂಗ್ ಫ್ಯಾಷನ್, ಎಲ್ಲರ ಹುಬ್ಬೇರಿಸುವುದರೊಂದಿಗೆ ಐತಿಹಾಸಿಕ ಅಟೈರ್ ಹಾಗೂ ಜ್ಯುವೆಲರಿಗಳಲ್ಲಿ ಕಂಗೊಳಿಸುವುದರ ಮೂಲಕ ದಾಖಲೆಯನ್ನೇ ಸೃಷ್ಠಿಸಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.