-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನಿಕಾ ಕಪೂರ್ ಫ್ರಿಂಝ್ ಲಾಂಗ್ ಸ್ಕರ್ಟ್ (Star Fashion 2026) ಸದ್ಯ ಫ್ಯಾಷನ್ ಪ್ರಿಯರ ಹುಬ್ಬೇರಿಸಿದ್ದು, ಅವರ ಈ ಫ್ಯಾಷನ್ ಸ್ಟೇಟ್‌ಮೆಂಟ್ ಯಾವ ಮಾಡೆಲ್‌ಗಳಿಗೂ ಕಡಿಮೆಯಿಲ್ಲ! ಎಂಬಂತೆ ಅವರನ್ನು ಬಿಂಬಿಸಿದೆ ಎನ್ನುತ್ತಿದ್ದಾರೆ ಫ್ಯಾಷನ್ ವಿಮರ್ಶಕರು. ಹೌದು, ಪ್ಯಾರೀಸ್ ಫ್ಯಾಷನ್ ವೀಕ್ ಸಂದರ್ಭದಲ್ಲಿ ನಟಿ ಹಾಗೂ ಗಾಯಕಿ ಕನಿಕಾ ಕಪೂರ್ ಧರಿಸಿದ್ಧ ರೆಡ್-ವೈಟ್-ಬ್ಲ್ಯಾಕ್ ಕಾಂಬಿನೇಷನ್‌ನ ಫುಲ್ ಸ್ಲೀವ್ ನಿಟ್ಟೆಡ್‌ನ ಅಸ್ಸೆಮ್ಮಿಟ್ರಿಕಲ್ ಪ್ರಿಂಟ್ಸ್ ಇರುವಂತಹ ಜಾಕೆಟ್ ಹಾಗೂ ಇದರೊಂದಿಗೆ ಧರಿಸಿದ್ಧ ಬ್ಲ್ಯಾಕ್ ಕಲರ್‌ನ ಫ್ರಿಂಜ್ ಲಾಂಗ್ ಸ್ಕರ್ಟ್ ಅವರ ಸ್ಟೈಲ್ ಸ್ಟೇಟ್‌ಮೆಂಟನ್ನು ಸೂಪರ್ ಮಾಡೆಲ್‌ನಂತೆ ಬಿಂಬಿಸಿತ್ತು.
ಫ್ಯಾಷನಿಸ್ಟಾಗಳ ಮೆಚ್ಚುಗೆ ಪಡೆದ ಕನಿಕಾ ಔಟ್‌ಫಿಟ್
ಇನ್ನು, ಕನಿಕಾಳ ಈ ಔಟ್‌ಫಿಟ್ ಸದ್ಯ ಫ್ಯಾಷನ್ ಪ್ರಿಯರ ಹಾಗೂ ಫ್ಯಾಷನಿಸ್ಟಾಗಳ ಮೆಚ್ಚುಗೆ ಕೂಡ ಗಳಿಸಿದೆ. ಅವರ ಈ ಕಂಪ್ಲೀಟ್ ಲುಕ್ ಅವರಿಗೆ ಸೂಪರ್ ಮಾಡೆಲ್ ಲುಕ್ ನೀಡಿದೆ ಎಂದು ಪ್ರಶಂಸಿಸಿದ್ದಾರೆ.
ಕನಿಕಾ ಮೇಕೋವರ್ ಡಿಟೇಲ್ಸ್
ಅಂದ ಹಾಗೆ, ಕನಿಕಾ ಕಪೂರ್, ಜೆನ್ ಜಿ ಹುಡುಗಿಯರ ಚಿಕ್ ಲುಕ್ ನೀಡುವ ಕಲರ್‌ಫುಲ್ ಗ್ರಾಫಿಕ್ ಜಾಕೆಟ್ ಹಾಗೂ ಫ್ರಿಂಜ್ ಸ್ಕರ್ಟ್ ಧರಿಸಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಮೇಕೋವರ್ ಅವರಿಗೆ ಇಂಟರ್‌ನ್ಯಾಷನಲ್ ಮಾಡೆಲ್ ಲುಕ್ ನೀಡಿತ್ತು ಎನ್ನಬಹುದು ಎಂಬುದು ಫ್ಯಾಷನಿಸ್ಟಾ ಜಿಯಾ ಅಭಿಪ್ರಾಯ.
ಪರ್ಫ್ಯೂಮ್ ಬಾಟಲ್‌ನಂತಿರುವ ಬ್ಯಾಗ್
ಕನಿಕಾರ ಈ ಲುಕ್‌ಗೆ ಇನ್ನೊಂದಿಷ್ಟು ಸಾಥ್ ನೀಡಿದ್ದು, ಅವರ ಕೈಯಲ್ಲಿದ್ದ ಪರ್ಫ್ಯೂಮ್ ಶೇಪ್‌ನ ಬ್ಯಾಗ್! ಇದು ಅವರ ಫ್ಯಾಷನ್ ಫೋಟೋಶೂಟನ್ನು ಮತ್ತಷ್ಟು ಹೈಲೈಟ್ ಮಾಡಿತು ಎನ್ನುವ ಫ್ಯಾಷನ್ ವಿಮರ್ಶಕರು ಕನಿಕಾ ಲುಕ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)