ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion: ಅತ್ಯಾಕರ್ಷಕ ಬ್ರೋಕೆಡ್‌ ಸಿಲ್ಕ್‌ ಬ್ಲೇಜರ್‌ನಲ್ಲಿ ನಟಿ ಮಾನ್ವಿತಾ ಕಾಮತ್ ಕ್ಲಾಸಿಕ್‌ ಲುಕ್‌!

Star Fashion: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ತಮ್ಮದೇ ಆದ ಮಾನೆಕಿನ್‌ ಬ್ರಾಂಡ್‌ನ ಅತ್ಯಾಕರ್ಷಕ ಬ್ರೋಕೆಡ್‌ ಸಿಲ್ಕ್ ಬ್ಲೇಜರ್‌ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಕ್ಲಾಸಿಕ್‌ ಲುಕ್‌ ಹೇಗಿತ್ತು? ವಿಶೇಷತೆಯೇನು? ಈ ಕುರಿತಂತೆ ಖುದ್ದು ಮಾನ್ವಿತಾ ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರಗಳು: ಮಾನ್ವಿತಾ ಕಾಮತ್‌, ನಟಿ
1/5

ನಟಿ ಮಾನ್ವಿತಾ ಕಾಮತ್‌ ಬ್ರೋಕೆಡ್‌ ಸಿಲ್ಕ್‌ ಬ್ಲೇಜರ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಆವಾರ್ಡ್ ಸಮಾರಂಭವೊಂದರಲ್ಲಿ, ಮಾನ್ವಿತಾ ಕಾಮತ್‌ ಈ ಸ್ಪೆಷಲ್‌ ಬ್ಲೇಜರ್‌ ಸೆಟ್‌/ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು, ನಂತರ ಇದೇ ಔಟ್‌ಫಿಟ್‌ನಲ್ಲಿ ಅತ್ಯಾಕರ್ಷಕವಾದ ಫ್ಯಾಷನ್‌ ಫೋಟೋ ಶೂಟ್‌ ಕೂಡ ಮಾಡಿಸಿದ್ದಾರೆ. ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ.

2/5

ಮಾನ್ವಿತಾ ಸಿಲ್ಕ್‌ ಬ್ಲೇಜರ್‌

ಅಂದಹಾಗೆ, ನಟಿ ಮಾನ್ವಿತಾ, ತಮ್ಮದೇ ಆದ ಮಾನೆಕಿನ್‌ ಬ್ರಾಂಡ್‌ನ ಅತ್ಯಾಕರ್ಷಕ ಜಲ್‌ ಸಿಲ್ಕ್‌ ಬ್ರೋಕೆಡ್‌ ಫ್ಯಾಬ್ರಿಕ್‌ನ ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎನ್ನಲು ನಾನಾ ಕಾರಣಗಳಿವೆ. ಯಾಕೆಂದರೆ, ಸಾಮಾನ್ಯವಾಗಿ ಇಂತಹ ಫ್ಯಾಬ್ರಿಕ್‌ನಿಂದ ಬ್ಲೇಜರ್‌ ಸೆಟ್‌ ವಿನ್ಯಾಸಗೊಳ್ಳುವುದು ಅಪರೂಪ. ಹಾಗಾಗಿ ಈ ಪ್ರಯೋಗಾತ್ಮಕ ಡಿಸೈನರ್‌ವೇರ್‌ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಿಂಕ್‌ & ಗೋಲ್ಡ್ ಕಾಂಬಿನೇಷನ್‌ ಈ ಔಟ್‌ಫಿಟ್‌ ಲುಕ್‌ ಅನ್ನು ಹೈಲೈಟ್‌ ಮಾಡಿದೆ. ಈ ಔಟ್‌ಫಿಟ್‌ನ ಮತ್ತೊಂದು ವಿಶೇಷತೆ ಎಂದರೇ, ಶಿಮ್ಮರಿಂಗ್‌ನಿಂದ ಕೂಡಿರುವುದು! ಕ್ಲಾಸಿಕ್‌ ಲುಕ್‌ ನೀಡಿರುವ ಈ ಬ್ಲೇಜರ್‌ ಎರಡು ಪಾಕೆಟ್‌ಗಳನ್ನು ಹೊಂದಿದೆ.

3/5

ಮಾನ್ವಿತಾ ಬ್ಲೇಜರ್‌ ಲವ್‌

ಇನ್ನು, ನಟಿ ಮಾನ್ವಿತಾ ಅವರೇ ಹೇಳುವಂತೆ, ಅವರ ಈ ಬ್ರಾಂಡ್‌ನ ಜಲ್‌ ಸಿಲ್ಕ್‌ ಬ್ರೋಕೆಡ್‌ನ ಈ ಬ್ಲೇಜರ್‌, ಪ್ರೊಫೆಷನಲ್‌ ಹುಡುಗಿಯರಿಗೆ ಮಾತ್ರವಲ್ಲ ಹಾಗೂ ಯೂನಿಕ್‌ ಆಗಿ ಜತೆಜತೆಗೆ ಕ್ಲಾಸಿಕ್‌ ಆಗಿಯೂ ಕಾಣ ಬಯಸುವವರಿಗೆ ಬೆಸ್ಟ್ ಔಟ್‌ಫಿಟ್‌ ಎನ್ನುತ್ತಾರೆ.

4/5

ಇಂತಹ ಬ್ಲೇಜರ್‌ ಸೂಟ್‌ ಹಾಗೂ ಸೆಟ್‌ಗಳನ್ನು ಈಗಾಗಲೇ ತಮ್ಮ ಮಾನೆಕಿನ್‌ ಬ್ರಾಂಡ್‌ ಡಿಸೈನ್‌ ಮಾಡುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿಯೂ ಕೂಡ ಲಭ್ಯ ಎಂದು ಮಾನ್ವಿತಾ ವಿಶ್ವವಾಣಿ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

5/5

ಮಾನ್ವಿತಾ ಫ್ಯಾಷನ್‌ ಚಾಯ್ಸ್

ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ವರ್ಗ ಗಳಿಸಿರುವ ಮಾನ್ವಿತಾ ಮೊದಲಿನಿಂದಲೂ ಸಖತ್‌ ಫ್ಯಾಷೆನಬಲ್‌! ಧರಿಸುವ ಔಟ್‌ಫಿಟ್‌, ಸೀರೆ ಎಲ್ಲದರ ಬಗ್ಗೆಯೂ ಗಮನಹರಿಸುತ್ತಾರೆ. ಇತ್ತೀಚೆಗೆ ತಮ್ಮದೇ ಆದ ಮಾನೆಕಿನ್‌ ಬ್ರಾಂಡ್‌ ಮೂಲಕ ಫ್ಯಾಷನ್‌ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author