ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Tips 2026: ಜಾನ್ವಿ ಕಪೂರ್‌ ಧರಿಸಿದ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್‌ಗೆ ಡಿಮ್ಯಾಂಡ್‌

Janhvi Kapoor: ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಧರಿಸಿದ್ದ, ಸಿಂಪಲ್‌ ಲುಕ್‌ ನೀಡುವ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್‌ಗೆ ಇದೀಗ ಡಿಮ್ಯಾಂಡ್‌ ಹೆಚ್ಚಾಗಿದೆ. ಇದ್ಯಾವ ಬಗೆಯ ಟೀ ಶರ್ಟ್ ? ಮಿಕ್ಸ್ ಮ್ಯಾಚ್‌ ಮಾಡಿ ಧರಿಸುವುದು ಹೇಗೆ?

ಚಿತ್ರಗಳು: ಜಾನ್ವಿ ಕಪೂರ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಾನ್ವಿ ಕಪೂರ್‌ ಧರಿಸಿದ್ಧ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್ ಇದೀಗ ಟೀನೇಜ್‌-ಕಾಲೇಜ್‌ ಹುಡುಗಿಯರನ್ನೂ ಸವಾರಿ ಮಾಡತೊಡಗಿದೆ. ಹೌದು, ಇತ್ತೀಚೆಗೆ ಕ್ಯಾಶುವಲ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಧರಿಸಿದ್ದ ಸಿಂಪಲ್‌ ಆಗಿರುವ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್ ಹುಡುಗಿಯರ ಡೈಲಿ ಔಟ್‌ಫಿಟ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ. ಕಂಫರ್ಟಬಲ್‌ ಫೀಲ್‌ನೊಂದಿಗೆ ಫ್ಯಾಷೆನಬಲ್‌ ಆಗಿಯೂ ಕಾಣಿಸುವ ಇವು ಸದ್ಯ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಮರಳಿದ ಗ್ರಾಫಿಕ್‌ ಪ್ರಿಂಟ್ಸ್‌ನ ಕ್ರಾಪ್ಡ್ ಟೀ ಶರ್ಟ್

ನೋಡಲು ಸಿಂಪಲ್‌ ಲುಕ್‌ ನೀಡುವ ಈ ಟೀ ಶರ್ಟ್‌ಗಳೇನೂ ಹೊಸ ಡಿಸೈನ್‌ವೇನಲ್ಲ! ಮೊದಲಿನಿಂದಲೂ ಇದೆ. ಆದರೆ, ಕೆಲವೊಮ್ಮೆ ಸಿನಿಮಾ ನಟಿಯರು ಧರಿಸಿದಾಗ ಅವು ಮತ್ತೊಮ್ಮೆ ಫ್ಯಾಷನ್‌ನಲ್ಲಿ ಮರುಕಳಿಸುತ್ತವೆ. ಟ್ರೆಂಡಿಯಾಗುತ್ತವೆ. ಈ ಸಾಲಿಗೆ ಇದೀಗ ಈ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್‌ಗಳು ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಚಿತ್ರಾ.

Janhvi Kapoor

ಕಂಫರ್ಟಬಲ್‌ ಫೀಲ್‌ ನೀಡುವ ಕ್ರಾಪ್ಡ್ ಗ್ರಾಫಿಕ್‌ ಟೀ ಶರ್ಟ್

ಇವು ಕೂಡ ಟೀ ಶರ್ಟ್‌ಗಳೇ ಆದರೆ, ಗಿಡ್ಡನಾಗಿರುತ್ತವೆ. ಸೊಂಟದಿಂದ ಅಂದರೇ, ಧರಿಸಿದಾಗ ಬೆಲ್ಲಿಯಿಂದ ಮೇಲಕ್ಕೆ ಕೂರುತ್ತವೆ. ಸ್ಲಿಮ್‌ ಹುಡುಗಿಯರನ್ನು ಸ್ಟೈಲಿಶ್‌ ಆಗಿ ಬಿಂಬಿಸುತ್ತವೆ. ಇನ್ನು, ಇದನ್ನು ಧರಿಸಿರುವ ಹುಡುಗಿ ಸ್ಲಿಮ್‌ ಆಗಿದ್ದರಂತೂ ಇವು ಮತ್ತಷ್ಟು ಗ್ಲಾಮರಸ್‌ ಆಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Star Fashion Tips

ಮಿಕ್ಸ್ ಮ್ಯಾಚ್‌ ಮಾಡುವ ಬಗೆ ಹೇಗೆ?

  • ಯಾವುದೇ ಜೀನ್ಸ್ ಅಥವಾ ಡೆನಿಮ್‌ ಪ್ಯಾಂಟ್‌ಗೆ ಧರಿಸಬಹುದು.
  • ವೈಟ್ ಕಲರ್‌ನವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
  • ಬಗೆಬಗೆಯ ಗ್ರಾಫಿಕ್‌ ಪ್ರಿಂಟ್ಸ್‌ನವನ್ನು ಧರಿಸುವಾಗ ಅವುಗಳ ಅರ್ಥವನ್ನು ಗಮನಿಸಿ, ನಂತರ ಪ್ಯಾಂಟ್‌ಗೆ ಮ್ಯಾಚ್‌ ಮಾಡಿ.
  • ಸ್ಕರ್ಟ್‌ಗೂ ಮ್ಯಾಚ್‌ ಮಾಡಬಹುದು.
  • ಕಂಫರ್ಟಬಲ್‌ ಆಗಿರುವಂತಹ ಕ್ರಾಪ್ಡ್ ಟೀ ಶರ್ಟ್‌ಗೆ ಮ್ಯಾಚ್‌ ಮಾಡಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author