-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ತೀರಾ ಸಿಂಪಲ್ ಆಗಿ ಕಾಣಿಸುತ್ತಿದ್ದ ಬಾಲಿವುಡ್ ನಟಿ ಕಾಜೋಲ್ ಉಟ್ಟಿದ್ದ, ಹಳದಿ ಜಾರ್ಜೆಟ್ ಸೀರೆ (Star Saree Fashion 2025) ಇದೀಗ ಟ್ರೆಂಡಿಯಾಗಿದ್ದು, ಲೋಕಲ್ ಬ್ರಾಂಡ್‌ಗಳಲ್ಲಿ ಕೈಗೆಟಕುವ ದರದಲ್ಲಿ ಬಿಡುಗಡೆಗೊಂಡಿವೆ. ಅಂದಹಾಗೆ, ಮಾ ಹಿಂದಿ ಸಿನಿಮಾ ಪ್ರಮೋಷನ್ ಸಮಯದಲ್ಲಿ, ನಟಿ ಕಾಜೋಲ್ ಉಟ್ಟಿದ್ದ, ಸನ್ ಕಲರ್ ಎಂದೇ ಕರೆಯುವ ಹಳದಿ ವರ್ಣದ ಜಾರ್ಜೆಟ್ ಸೀರೆಯು ಕೇವಲ ಸಿನಿಮಾ ಪ್ರಿಯರನ್ನು ಸೆಳೆದಿರುವುದು ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರನ್ನು ಆಕರ್ಷಿಸಿದೆ. ಪರಿಣಾಮ, ಈಗಾಗಲೇ ಲೋಕಲ್ ಸೀರೆ ಬ್ರಾಂಡ್‌ಗಳು ಕೈಗೆಟಕುವ ಬೆಲೆಯಲ್ಲಿ, ರಿಪ್ಲೀಕಾ ಸೀರೆಗಳನ್ನು ಬಿಡುಗಡೆಗೊಳಿಸಿದ್ದಾರೆ.

ಇದ್ಯಾವ ಬಗೆಯ ಸೀರೆ ?
ಅಂದಹಾಗೆ, ಈ ಯೆಲ್ಲೋ ವರ್ಣದ ಸೀರೆಯೇನೂ ಅಂತಹ ಭಾರಿ ಡಿಸೈನರ್ ಸೀರೆಯೇನಲ್ಲ! ಸಿಂಪಲ್ ಆಗಿ ಎದ್ದು ಕಾಣಿಸುವ ಕಲರ್‌ನ ಜಾರ್ಜೆಟ್ ಸೀರೆ! ಕಂಪ್ಲೀಟ್ ಸೆಲ್ಫ್ ಕಲರ್‌ನಲ್ಲಿದೆ. ಜಾರ್ಜೆಟ್ ಫ್ಯಾಬ್ರಿಕ್‌ನ ಮೇಲೆ ಅದೇ ವರ್ಣದ ಜತೆಗೆ ತಿಳಿ ಕೇಸರಿ ವರ್ಣ ಮಿಕ್ಸ್ ಆಗಿರುವಂತಹ ರೋಸ್ ಗುಚ್ಛದ ಚಿತ್ತಾರ ಮೂಡಿಸಲಾಗಿದೆ. ದೇವಗಿರಿ ಬ್ರಾಂಡ್‌ನ ಈ ಸೀರೆಯು ಕಾಜೋಲ್‌ರನ್ನು ಮತ್ತಷ್ಟು ಸ್ಲಿಮ್ ಆಗಿ ಬಿಂಬಿಸಿದೆ.
ಸೆಮಿ ಹೈ ನೆಕ್ ಸ್ಲಿವ್‌ಲೆಸ್ ಬ್ಲೌಸ್
ಸೆಮಿ ಹೈ ನೆಕ್‌ಲೈನ್ ಹೊಂದಿರುವ ಈ ಸೀರೆ ಬ್ಲೌಸ್, ಸೀರೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದೆ. ನೋಡಲು ಮಾನೋಕ್ರೋಮ್ ಲುಕ್ ನೀಡಿದೆ. ಈ ಸೀರೆಗೆ ಹಾಕಿರುವ ಅದೇ ವರ್ಣದ ಫ್ಲೋರಲ್ ಕಿವಿಯೊಲೆ, ಗೋಲ್ಡ್ ಶೇಡ್‌ನ ವಾಚ್ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಕಾಜೋಲ್ ಉಟ್ಟಿದ್ದ ಸೀರೆ ಬೆಲೆ ಗೊತ್ತೇ!
ಅಂದಹಾಗೆ, ನಟಿ ಕಾಜೋಲ್ ಉಟ್ಟಿದ್ದ ಸೀರೆಯ ಬೆಲೆ ಕಡಿಮೆಯೇನಲ್ಲ! ಸರಿ ಸುಮಾರು 59,500 ರೂ.ಗಳಿರಬಹುದು ಎಂದು ಅಂದಾಜಿಸಿದೆ ದಿ ಕ್ಲೋಸೆಟ್ ಡೈರಿ.

ಕೈಗೆಟಕುವ ಬೆಲೆಯಲ್ಲಿ ಬಂತು ರಿಪ್ಲೀಕಾ ಜಾರ್ಜೆಟ್ ಸೀರೆಗಳು
ಕಾಜೋಲ್ ಉಟ್ಟಿರುವ ವಿನ್ಯಾಸದ ಜಾರ್ಜೆಟ್ ರಿಪ್ಲೀಕಾ ಸೀರೆಗಳು, ಇದೀಗ ಲೋಕಲ್ ಬ್ರಾಂಡ್‌ಗಳಲ್ಲೂ ಬಿಡುಗಡೆಗೊಂಡು ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡಲು ಸಜ್ಜಾಗುತ್ತಿವೆ ಎನ್ನುತ್ತಾರೆ ಸೀರೆ ಮಾರಾಟಗಾರರು.
(ಲೇಖಕಿ:ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್