-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಮೌನಿ ರಾಯ್ ಕಡು ಕಪ್ಪನೆಯ ಶೀರ್ ಸೀರೆಯಲ್ಲಿ ಗ್ಲಾಮರ್ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಹಾಟ್ ನಟಿ ಎಂದೇ ಹೆಸರು ಗಳಿಸಿರುವ ಬಾಲಿವುಡ್‌ನ ಮೌನಿರಾಯ್ ಸಾದಾ ಸೀರೆಯಲ್ಲಿ (Star Saree Fashion 2026) ಕಾಣಿಸಿಕೊಂಡಿದ್ದು, ಗ್ಲಾಮರಸ್ ಆಗಿ ಪೋಸ್ ನೀಡಿದ್ದಾರೆ. ಅರರೆ., ಇದರಲ್ಲೇನು ವಿಶೇಷ? ಎಂದು ಯೋಚಿಸುತ್ತಿದ್ದೀರಾ? ಸದಾ ಟೂ ಪೀಸ್ ಇಲ್ಲವೇ ಬಿಚ್ಚಮ್ಮಳಾಗಿಯೇ ಕಾಣಿಸಿಕೊಳ್ಳುವ ಮೌನಿರಾಯ್, ಈ ಸಾದಾ ಬ್ಲ್ಯಾಕ್ ಶೀರ್ ಸೀರೆಯಲ್ಲಿಯೂ ಗ್ಲಾಮರಸ್ ಬೊಂಬೆಯಂತೆಯೇ ಆಗಿಯೇ ಕಾಣಿಸಿಕೊಂಡಿದ್ದಾರೆ.
ಮೌನಿರಾಯ್ ಶೀರ್ ಸೀರೆ
ಅಂದಹಾಗೆ, ಮೌನಿರಾಯ್ ಉಟ್ಟಿರುವುದು ಸಾಲಿಡ್ ಬ್ಲ್ಯಾಕ್ ಶೇಡ್‌ನ ಪಾರದರ್ಶಕ ಸೀರೆ. ಅದು ಅರ್ಗಾನ್ಜಾ ಬ್ಲ್ಯಾಕ್ ಶೀರ್ ಸೀರೆಯಾಗಿದ್ದು, ಅವರಿಗೆ ಕಂಪ್ಲೀಟ್ ಗ್ಲಾಮರಸ್ ಲುಕ್ ನೀಡಿದೆ. ಕಂಪ್ಲೀಟ್ ಪಾರದರ್ಶಕವಾಗಿರುವ ಕಾರಣ ಅವರನ್ನು ಮತ್ತಷ್ಟು ಹಾಟ್ ಆಗಿ ಬಿಂಬಿಸಿದೆ.
ಬ್ಲ್ಯಾಕ್ ಸೀರೆಗೆ ಬ್ರಾಲೆಟ್ ಬ್ಲೌಸ್
ಬಹುತೇಕ ಬ್ಯಾಕ್‌ಲೆಸ್ ಆಗಿರುವ ಈ ಬ್ಲೌಸ್ ಬ್ರಾಲೆಟ್ ವಿನ್ಯಾಸದಲ್ಲಿದೆ. ಸ್ಲಿವ್‌ಲೆಸ್ ಆಗಿರುವ ಕಾರಣ ಸೀರೆಯನ್ನು ಇದು ಮತ್ತಷ್ಟು ಹೈಲೈಟಾಗಿಸಿದೆ. ಎಥ್ನಿಕ್ ಟಚ್ ಇದ್ದರೂ ಕೂಡ ಮನಮೋಹಕ ಲುಕ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಮೌನಿರಾಯ್ ಮೇಕೋವರ್
ಇನ್ನು ಮೌನಿರಾಯ್ ಅವರ ಸಿಂಪಲ್ ಮೇಕಪ್ ಹಾಗೂ ಕಿವಿಗೆ ಧರಿಸಿರುವ ಚಾಂದ್‌ಬಾಲಿಯಂತಹ ಕಿವಿಯೊಲೆ ಟ್ರೆಡಿಷನಲ್ ಲುಕ್ಕನ್ನು ಮಿಕ್ಸ್ ಮಾಡಿದೆ. ಒಟ್ಟಾರೆ, ಸೀರೆಯಲ್ಲಿಯೂ ಮೌನಿರಾಯ್ ತಮ್ಮ ಪರ್ಸನಾಲಿಟಿಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್ ಎಕ್ಸ್‌ಪರ್ಟ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)