-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಕಾವ್ಯಾ ಶೆಟ್ಟಿ ಬ್ಲ್ಯಾಕ್ ನೆಟ್ಟೆಡ್ ಶೀರ್ ಡಿಸೈನರ್ ಸೀರೆಯಲ್ಲಿ ಸಖತ್ತಾಗಿ ಕಾಣಿಸುತ್ತಿದ್ದಾರೆ. ನೀವೂ ಕೂಡ ಬ್ಲ್ಯಾಕ್ ಡಿಸೈನರ್ ಸೀರೆಯಲ್ಲಿ (Star Saree Fashion) ಅವರಂತೆಯೇ ಕಾಣಿಸಬೇಕೇ! ಹಾಗಾದಲ್ಲಿ, ನೀವು ಒಂದಿಷ್ಟು ಫ್ಯಾಷನ್ ರೂಲ್ಸ್ ಹಾಗೂ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಬೇಕಾಗುತ್ತದೆ. ಆಗ ನೀವು ಕೂಡ ಸೆಲೆಬ್ರೆಟಿ ಸ್ಟಾರ್‌ನಂತೆ ಕಾಣಿಸಬಹುದು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಬ್ಲ್ಯಾಕ್ ಡಿಸೈನರ್ ಸೀರೆಯ ಆಯ್ಕೆ ಹೀಗಿರಲಿ
ನಟಿ ಕಾವ್ಯಾ ಶೆಟ್ಟಿ ಆಯ್ಕೆ ಮಾಡಿರುವ ಸೀರೆ ಸಾಮಾನ್ಯವಾದ ಡಿಸೈನ್ ಹೊಂದಿಲ್ಲ! ಹಾಫ್ ಆಂಡ್ ಹಾಫ್ ಡಿಸೈನರ್ ನೆಟ್ಟೆಡ್ ಶೀರ್ ಡಿಸೈನ್ ಹೊಂದಿದೆ. ಈ ಔಟ್‌ಲುಕ್‌ಗಾಗಿ ಇದೇ ರೀತಿಯ ಸೀರೆ ಆಯ್ಕೆ ಮಾಡುವುದು ಸೂಕ್ತ.
ಪಾರ್ಟಿಗೆ ಸಿಕ್ವಿನ್ಸ್ ಡಿಸೈನ್ ಸೀರೆ
ಕಾವ್ಯಾ ಉಟ್ಟಿರುವ ಬ್ಲ್ಯಾಕ್ ಸೀರೆ ಕೇವಲ ಡಿಸೈನರ್ ಸೀರೆ ಮಾತ್ರವಲ್ಲ, ಅಲ್ಲಲ್ಲಿ ಮಿನುಗುವ ಬ್ಲ್ಯಾಕ್ ಸಿಕ್ವಿನ್ಸ್ ಡಿಸೈನ್ ಹೊಂದಿದೆ. ಇದು ಪಾರ್ಟಿವೇರ್ ಸೀರೆಯೆಂದೇ ಹೇಳಬಹುದು. ಪಾರ್ಟಿ ಲುಕ್ ಪಡೆಯುವವರು ಸಿಕ್ವಿನ್ಸ್ ಡಿಸೈನ್ ಇರುವಂತಹ ಸೀರೆ ಆಯ್ಕೆ ಮಾಡುವುದು ಒಳಿತು. ಉಟ್ಟಾಗ ಆಕರ್ಷಕವಾಗಿ ಮಿನುಗಬಹುದು.
ಗ್ಲಾಮರಸ್ ಲುಕ್‌ಗೆ ಸಾಥ್ ನೀಡುವ ಡಿಸೈನರ್ ಸ್ಲಿವ್‌ಲೆಸ್ ಬ್ಲೌಸ್
ಯಾವುದೇ ಸೀರೆಯ ಲುಕ್ಕನ್ನು ಡಿಸೈನರ್ ಸೀರೆ ಬ್ಲೌಸ್‌ಗಳು ವಿಶೇಷವೆನಿಸುವಂತೆ ಬಿಂಬಿಸುತ್ತವೆ. ಹಾಗಾಗಿ ಬ್ಲೌಸ್ ಸೆಲೆಕ್ಷನ್ ಸರಿಯಾಗಿರಬೇಕು. ಅಲ್ಲದೇ, ಗ್ಲಾಮರಸ್ ಲುಕ್ ಬೇಕಿದ್ದಲ್ಲಿ ಸ್ಲಿವ್‌ಲೆಸ್ ಅಥವಾ ಹಾಲ್ಟರ್ ನೆಕ್ ಡಿಸೈನ್‌ಗೆ ಮೊರೆ ಹೋಗಬಹುದು.
ಮೇಕೋವರ್ ಹೀಗಿರಲಿ
ಸೆಲೆಬ್ರೆಟಿ ಲುಕ್ ಬಯಸುವ ಸೀರೆ ಪ್ರಿಯರು ಅದರಲ್ಲೂ ಪಾರ್ಟಿ ಡಿಸೈನರ್ ಸೀರೆ ಉಡಲು ಬಯಸುವವರು ಆದಷ್ಟೂ ತಿಳಿಯಾದ ಮುಖಕ್ಕೆ ಗ್ಲೋ ನೀಡುವಂತಹ ಮೇಕಪ್‌ಗೆ ಸೈ ಎನ್ನಬೇಕು.
ಜ್ಯುವೆಲರಿ ಅತ್ಯಾಕರ್ಷಕವಾಗಿರಲಿ
ಡಿಸೈನರ್ ಸೀರೆಗಳಿಗೆ ಆದಷ್ಟೂ ಜ್ಯುವೆಲರಿಗಳು ಟ್ರೆಡಿಷನಲ್‌ನಂತವನ್ನು ಧರಿಸಕೂಡದು. ಕಂಟೆಂಪರರಿ ಹಾಗೂ ಜರ್ಕೋನ್, ವಿಕ್ಟೋರಿಯನ್ ಡಿಸೈನಂತಹ ಸೆಟ್ ಧರಿಸಬಹುದು. ನೋಡಲು ಥೇಟ್ ಸೆಲೆಬ್ರೆಟಿ ಸ್ಟಾರ್‌ನಂತೆ ಕಾಣಿಸುವಿರಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Eco Friendly Fashion 2025: ಗ್ಲಾಮರಸ್ ವಿನ್ಯಾಸದಲ್ಲಿ ಕಾಲಿಟ್ಟ ಪರಿಸರ ಸ್ನೇಹಿ ಉಡುಪುಗಳು