ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಡೆನಿಮ್‌ ಟಾಪ್‌ನಲ್ಲಿ ಸೆಲೆಬ್ರಿಟಿ ಲುಕ್‌ ಪಡೆಯುವುದು ಹೇಗೆ?

ಜೀನ್ಸ್ ಪ್ಯಾಂಟ್‌ ಮೇಲೊಂದು ಡೆನಿಮ್‌ ಟಾಪ್‌ ಧರಿಸಿಯೂ ಸೆಲೆಬ್ರಿಟಿ ಲುಕ್‌ ಪಡೆಯಬಹುದು. ಅದು ಹೇಗೆ? ಅಂತಿರಾ! ಸಾಧ್ಯವಿದೆ. ಆದರೆ, ಇದಕ್ಕಾಗಿ ನೀವು ಒಂದಿಷ್ಟು ಐಡಿಯಾ ಫಾಲೋ ಮಾಡಬೇಕು ಎನ್ನುವ ಫ್ಯಾಷನಿಸ್ಟಾಗಳು, ಒಂದಿಷ್ಟು ಸಿಂಪಲ್‌ ಟಿಪ್ಸ್ ಕೂಡ ನೀಡಿದ್ದಾರೆ.

ಚಿತ್ರಗಳು: ಜೋಯಾ ಆಫ್ರೋಝ್‌, ನಟಿ
  • ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಿರುಬೇಸಿಗೆಯಲ್ಲಿ ಸಿಂಪಲ್‌ ಜೀನ್ಸ್ ಪ್ಯಾಂಟ್‌ಗೆ ಡೆನಿಮ್‌ ಟಾಪ್‌ ಧರಿಸಿ ಸೆಲೆಬ್ರಿಟಿ ಲುಕ್‌ (Summer Fashion 2026) ಪಡೆಯಬಹುದು. ಅದು ಹೇಗೆ? ಅಂತಿರಾ! ಸಾಧ್ಯವಿದೆ. ಆದರೆ, ಇದಕ್ಕಾಗಿ ನೀವು ಒಂದಿಷ್ಟು ಐಡಿಯಾ ಫಾಲೋ ಮಾಡಬೇಕು ಎನ್ನುವ ಫ್ಯಾಷನಿಸ್ಟಾಗಳು, ಒಂದಿಷ್ಟು ಸಿಂಪಲ್‌ ಟಿಪ್ಸ್ ಕೂಡ ನೀಡಿದ್ದಾರೆ.

ಡಿಸೈನರ್‌ ಡೆನಿಮ್‌ ಟಾಪ್‌ ಆಯ್ಕೆ ಮಾಡಿ

ತೀರಾ ಸಿಂಪಲ್‌ ಡೆನಿಮ್‌ ಟಾಪ್‌ ಬದಲು ಆದಷ್ಟೂ ಒಂದಿಷ್ಟು ಡಿಸೈನ್‌ ಇರುವಂತಹ ಡೆನಿಮ್‌ ಟಾಪ್‌ ಆಯ್ಕೆ ಮಾಡಿ. ಉದಾಹರಣೆಗೆ ಪ್ಯಾಚ್‌ ವರ್ಕ್‌ ಡಿಸೈನ್‌ ಇರುವಂತವು, ಬೆಲ್ಟ್ ಇರುವಂತವು, ಪಾಕೆಟ್‌ ವಿನ್ಯಾಸ ಹೊಂದಿರುವಂತವು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.

Denim Top

ಸ್ಲಿವ್‌ಲೆಸ್‌ ಇಲ್ಲವೇ ಹಾಲ್ಟರ್ ನೆಕ್‌ ಡೆನಿಮ್‌ ಟಾಪ್‌

ಸ್ಲಿವ್‌ ಅಥವಾ ಫುಲ್‌ ತೋಳು ಇರುವಂತಹ ಡೆನಿಮ್‌ ಟಾಪ್‌ ಆಯ್ಕೆ ಮಾಡುವುದು ಬೇಡ. ಇವು ಗ್ಲಾಮರಸ್‌ ಆಗಿ ಕಾಣಿಸುವುದಿಲ್ಲ. ಹಾಗಾಗಿ ಆದಷ್ಟೂ ಸ್ಲಿವ್‌ಲೆಸ್‌ ಹಾಗೂ ಹಾಲ್ಟರ್‌ ನೆಕ್‌ ಇರುವಂತಹ ವಿನ್ಯಾಸದವನ್ನು ಧರಿಸಿ. ಇವು ನೋಡಲು ಗ್ಲಾಮರಸ್‌ ಲುಕ್‌ ನೀಡುತ್ತವೆ.

Latest Fashion

ಸ್ಟ್ರೇಟ್‌ಮೆಂಟ್‌ ಡೆನಿಮ್‌ ಟಾಪ್‌

ನಾನಾ ವಿನ್ಯಾಸ ಇರುವಂತಹ ಸ್ಟೇಟ್‌ಮೆಂಟ್‌ ಡೆನಿಮ್‌ ಟಾಪ್‌ಗಳು ಹೈ ಫ್ಯಾಷನ್‌ ಲುಕ್‌ ನೀಡುತ್ತವೆ. ಅಲ್ಲದೇ ಜೀನ್ಸ್ ಪ್ಯಾಂಟ್‌ ಮೇಲೆ ಎದ್ದು ಕಾಣಿಸುವಂತೆ ಬಿಂಬಿಸುತ್ತವೆ.

Summer Fashion

ಸ್ಲಿಮ್ ಫಿಟ್ ಡೆನಿಮ್‌ ಟಾಪ್‌ ಧರಿಸಿ

ದೊಗಲೆಯಾಗಿರುವ ಡೆನಿಮ್‌ ಟಾಪ್‌ಗಳನ್ನು ಧರಿಸಬೇಡಿ. ನಿಮ್ಮ ಬಾಡಿ ಫಿಟ್‌ ಆಗಿ ಕೂರುವಂತಹ ಸ್ಲಿಮ್‌ ಫಿಟ್‌ ಡೆನಿಮ್‌ ಟಾಪ್‌ ಧರಿಸಿ. ಇವು ನೋಡಲು ಅಂದವಾಗಿ ಕಾಣಿಸುತ್ತವೆ.

Summer Fashion 2026: ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಕಾಲಿಟ್ಟ ಸ್ಟ್ರಾಪ್‌ ಕುರ್ತಾ-ಧೋತಿ

ಲೈಟ್‌ವೈಟ್‌ ಕ್ರಾಪ್‌ ಡೆನಿಮ್‌ ಟಾಪ್‌

ಕೊಂಚ ಯಂಗ್‌ ಲುಕ್‌ ಬೇಕಾದಲ್ಲಿ ಆದಷ್ಟೂ ಲೈಟ್‌ವೈಟ್‌ ಆಗಿರುವ ಕ್ರಾಪ್‌ ಡೆನಿಮ್‌ ಟಾಪ್‌ ಧರಿಸುವುದು ಉತ್ತಮ. ಇವು ಜೆನ್‌ ಜಿ ಫ್ಯಾಷನ್‌ಗೆ ಸಾಥ್‌ ನೀಡುತ್ತವೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author