- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನಲ್ಲಿ ಯುವಕರು ಬದಲಾಗುವುದು ಅಗತ್ಯ. ತಮ್ಮ ಪರ್ಸನಾಲಿಟಿ ಹಾಗೂ ಬಾಡಿ ಫಿಟ್‌ನೆಸ್‌ಗೆ ತಕ್ಕಂತೆ ಡ್ರೆಸ್‌ಕೋಡ್ ಬದಲಿಸಿಕೊಳ್ಳುವುದು ಅವಶ್ಯ ಎನ್ನುತ್ತಾರೆ ನಟ/ಮಾಡೆಲ್ ದರ್ಶ್ ಚಂದ್ರಪ್ಪ. ಅವರ ಪ್ರಕಾರ, ಸೀಸನ್ ಎಂಬುದು ಆಯಾ ಡ್ರೆಸ್‌ಕೋಡ್‌ಗೆ ಸೀಮಿತವಾಗಿರುತ್ತದೆ ಎನ್ನುತ್ತಾರೆ ಅವರು. ಇನ್ನು ಇದಕ್ಕೆ ಪೂರಕ ಎಂಬಂತೆ, ಈ ಸೀಸನ್‌ನ ಸಮ್ಮರ್ ಲುಕ್‌ಗೆ (Summer Fashion) ಸೂಟ್ ಆಗುವಂತೆ ಆಗಾಗ್ಗೆ ಸಾಕಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಿರುತ್ತಾರೆ. ಅಲ್ಲದೇ, ಯುವಕರಿಗೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಸಮ್ಮರ್‌ನಲ್ಲಿ ಪುರುಷರು, ಆದಷ್ಟೂ ಸಿಂಪಲ್ ಲುಕ್‌ಗೆ ಪ್ರಾಮುಖ್ಯತೆ ನೀಡಬೇಕು. ಲೈಟ್ ಕಲರ್‌ನ ಉಡುಗೆಗಳನ್ನು ಧರಿಸಬೇಕು. ಇನ್ನು, ವೀಕೆಂಡ್‌ನಲ್ಲಿ ಜೀನ್ಸ್ ಹಾಗೂ ಟೀ ಶರ್ಟ್ ಧರಿಸಬಹುದು. ಇನ್ನು ಪಾರ್ಟಿ ಪ್ರಿಯರು ಪಾರ್ಟಿಗಳಿಗೆ ಫಂಕಿ ಹೇರ್‌ಸ್ಟೈಲ್ ಮಾಡಬಹುದು ಎನ್ನುತ್ತಾರೆ.

ಸೀಸನ್‌ಗೆ ತಕ್ಕಂತೆ ಸಮ್ಮರ್ ಫ್ಯಾಷನ್
ಯುವಕರು ಕೂಡ ಸೀಸನ್‌ಗೆ ತಕ್ಕಂತೆ ಡ್ರೆಸ್ಸಿಂಗ್ ಸೆನ್ಸ್ ಫಾಲೋ ಮಾಡಬೇಕು. ಟ್ರೆಂಡಿ ಫ್ಯಾಷನ್ ಬಗ್ಗೆ ತಿಳಿದುಕೊಳ್ಳಲು ಅಗಾಗ್ಗೆ ಫ್ಯಾಷನ್ ಮ್ಯಾಗಝೀನ್ ಇಲ್ಲವೇ, ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಬ್ಲಾಗ್‌ಗಳನ್ನು ನೋಡುತ್ತಿರಬೇಕು ಎನ್ನುವ ದರ್ಶ್ ಪ್ರಕಾರ, ಹುಡುಗರು ನೋಡಲು ಎಷ್ಟೇ ರಫ್ ಆ್ಯಂಡ್ ಟಫ್‌ನಂತಿದ್ದರೂ ತಮ್ಮ ತ್ವಚೆಯ ಬಗ್ಗೆ ಅಷ್ಟೇ ಗಮನವಹಿಸುವುದು ಅಗತ್ಯ ಎನ್ನುತ್ತಾರೆ.

ಸಮ್ಮರ್ ಫ್ಯಾಷನ್‌ವೇರ್ ಸೆಲೆಕ್ಷನ್ ಹೀಗಿರಲಿ
ಸಮ್ಮರ್ ಫ್ಯಾಷನ್‌ನಲ್ಲಿ ಪುರುಷರು ಆದಷ್ಟೂ ಆರಾಮ ಎಂದೆನಿಸುವಂತಹ ಡಿಸೈನ್‌ನ ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಅಗತ್ಯ. ಅದು ಸಂದರ್ಭಕ್ಕೆ ಮ್ಯಾಚ್ ಆಗುವಂತಿರಬೇಕು ಎನ್ನುತ್ತಾರೆ.

ದರ್ಶ್ ಸಿಂಪಲ್ ಫ್ಯಾಷನ್ ಟಿಪ್ಸ್
- ಟ್ರಾವೆಲಿಂಗ್ ಹಾಗೂ ಔಟಿಂಗ್‌ಗೆ ಹೋಗುವಾಗ ಹುಡುಗರು ಆದಷ್ಟೂ ಸ್ಲಿವ್‌ಲೆಸ್ ಟೀ ಶರ್ಟ್ ಹಾಗೂ ಶಾರ್ಟ್ ಪ್ಯಾಂಟ್ ಧರಿಸಬಹುದು.
- ಕಾಲೇಜಿಗೆ ಹೋಗುವ ಯುವಕರಾದಲ್ಲಿ, ವೈಟ್, ಯೆಲ್ಲೊ, ಬ್ಲ್ಯೂ ಟೀ ಶರ್ಟ್‌ಗೆ ಬ್ಲೀಚ್ ಬ್ಲ್ಯೂ ಜೀನ್ಸ್ ಕಾಂಬಿನೇಷನ್ ಮಾಡಿ ಧರಿಸಬಹುದು.
- ಯುವಕರು ಈ ಸೀಸನ್‌ನಲ್ಲಿ ಆದಷ್ಟೂ ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಅಗತ್ಯ.
- ಕಚೇರಿಗೆ ತೆರಳುವ ಉದ್ಯೋಗಸ್ಥ ಪುರುಷರು, ಪಾಸ್ಟೆಲ್ ವರ್ಣಗಳ ಶರ್ಟ್‌ಗಳನ್ನು ಚೂಸ್ ಮಾಡಬಹುದು. ಇದಕ್ಕೆ ಮ್ಯಾಚ್ ಆಗುವ ಡಾರ್ಕ್ ಪ್ಯಾಂಟ್ ಮ್ಯಾಚ್ ಮಾಡಬಹುದು. ನೋಡಲು ಆಕರ್ಷಕವಾಗಿ ಕಾಣಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್