ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion: ಸಮ್ಮರ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಕಾರ್ಸೆಟ್‌ ಲೆಹೆಂಗಾ

Golden Corset Lehenga: ಸಮ್ಮರ್‌ನಲ್ಲಿ ಸೆಲೆಬ್ರೆಟಿ ಲುಕ್‌ ನೀಡುವ ಕಾರ್ಸೆಟ್‌ ಬ್ಲೌಸ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಟೀನೇಜ್‌ ಹುಡುಗಿಯರನ್ನು ಹಾಗೂ ಜೆನ್‌ ಜಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಇದ್ಯಾವ ಬಗೆಯ ಡಿಸೈನರ್‌ವೇರ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.‌

ಚಿತ್ರಗಳು: ಅಲಯಾ ಎಫ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾರ್ಸೆಟ್‌ ಲೆಹೆಂಗಾ ಫ್ಯಾಷನ್‌ ಸಮ್ಮರ್‌ ಸೀಸನ್‌ನಲ್ಲಿ (Summer Fashion) ಟ್ರೆಂಡಿಯಾಗಿದೆ. ಹೌದು, ಈ ಸೀಸನ್‌ನ ಸಮಾರಂಭಗಳಲ್ಲಿ ಧರಿಸಿದಾಗ ಸೆಲೆಬ್ರೆಟಿ ಲುಕ್‌ ನೀಡುವ ಈ ಡಿಸೈನರ್‌ ಕಾರ್ಸೆಟ್‌ ಬ್ಲೌಸ್‌ ಲೆಹೆಂಗಾಗಳು (Golden Corset Lehenga), ಈಗಾಗಲೇ ಟೀನೇಜ್‌ ಹಾಗೂ ಕಾಲೇಜ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

ನಟಿ ಅಲಯಾ ಧರಿಸಿದ್ದ ಕಾರ್ಸೆಟ್‌ ಲೆಹೆಂಗಾ

ಈ ಸಮ್ಮರ್‌ ಸೀಸನ್‌ನಲ್ಲಿ ಇಂಡೋ-ವೆಸ್ಟರ್ನ್‌ ಲೆಹೆಂಗಾ ಕೆಟಗರಿಯಲ್ಲಿ ಈ ಕಾರ್ಸೆಟ್‌ ಲೆಹೆಂಗಾಗಳು ಟಾಪ್‌ ಲಿಸ್ಟ್‌ನಲ್ಲಿವೆ. ಇದಕ್ಕೆ ಪೂರಕ ಎಂಬಂತೆ, ಇತ್ತಿಚೆಗೆ ಫ್ಯಾಷನ್‌ ಫೋಟೋಶೂಟ್‌ನಲ್ಲಿ ನಟಿ ಅಲಯಾ ಎಫ್‌ (Actress Alaya F) ಧರಿಸಿದ್ದ ಗೋಲ್ಡನ್‌ ಶೇಡ್‌ನ ಮಿನುಗುವ ಡಿಸೈನರ್‌ ಕಾರ್ಸೆಟ್‌ ಲೆಹೆಂಗಾ, ಫ್ಯಾಷನ್‌ ಪ್ರಿಯ ಜೆನ್‌ ಜಿ ಹುಡುಗಿಯರನ್ನು ಸೆಳೆಯಿತು. ಪರಿಣಾಮ, ಈ ಶೈಲಿಯ ಕಾರ್ಸೆಟ್‌ ಲೆಹೆಂಗಾಗಳ ಕಾಪಿ ಕ್ಯಾಟ್‌ ಔಟ್‌ಫಿಟ್‌ಗಳು ಲೋಕಲ್‌ ಬ್ರ್ಯಾಂಡ್‌ಗಳಲ್ಲೂ ಬಿಡುಗಡೆಗೊಂಡವು. ಗ್ರ್ಯಾಂಡ್‌ ಟ್ರೆಡಿಷನಲ್‌ ಸಮಾರಂಭಗಳಲ್ಲಿ ಈ ಜನರೇಷನ್‌ ಹುಡುಗಿಯರನ್ನು ಅಪ್ಪಿಕೊಂಡವು ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್‌ ರಿಚಾ.

Lehenga Fashion

ಗೋಲ್ಡನ್‌ ಕಾರ್ಸೆಟ್‌ ಲೆಹೆಂಗಾ

ಇನ್ನು, ಅಲಯಾ ಧರಿಸಿದ್ದ ಕಾರ್ಸೆಟ್‌ ಹಾಗೂ ಅದರ ಲೆಹೆಂಗಾ ಕಂಪ್ಲೀಟ್‌ ಗೋಲ್ಡನ್‌ ಶೇಡ್‌ನದ್ದಾಗಿದ್ದು, ಮಿರರ್‌ ವರ್ಕ್‌, ಜರ್ದೋಸಿ ವರ್ಕ್‌ ಹಾಗೂ ಸೂಕ್ಷ್ಮ ಎಂಬ್ರಾಯ್ಡರಿಯನ್ನು ಒಳಗೊಂಡಿದೆ. ಈ ಲೆಹೆಂಗಾ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದ್ದು, ಈ ಸೀಸನ್‌ನ ಇಂಡೋ-ವೆಸ್ಟರ್ನ್‌ ಫ್ಯಾಷನ್‌ವೇರ್‌ಗಳಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಧೀರಜ್‌.

Corset lehenga

ಏನಿದು ಕಾರ್ಸೆಟ್‌ ಲೆಹೆಂಗಾ?

ಎಲ್ಲರಿಗೂ ಗೊತ್ತಿರುವಂತೆ, ಕಳೆದ ಎರಡು ವರ್ಷಗಳಿಂದ ಕಾರ್ಸೆಟ್‌ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಇದೀಗ ಲೆಹೆಂಗಾ ಜತೆಗೂ ಇವು ಜೊತೆಯಾಗಿವೆ. ಇವನ್ನೇ ಕಾರ್ಸೆಟ್‌ ಲೆಹೆಂಗಾ ಎನ್ನಲಾಗುತ್ತದೆ. ದೇಹದ ಮೇಲ್ಭಾಗವನ್ನು ಹಿಡಿದಿಟ್ಟಂತೆ ಕಾಣಿಸುವ ಕ್ರಾಪ್‌ ಟಾಪ್‌ ಅಥವಾ ಬಾಡಿಕಾನ್‌ ಬ್ಲೌಸ್‌ ಎನ್ನಲೂ ಬಹುದು. ಆದರೆ, ಇವನ್ನು ಅಧಿಕೃತವಾಗಿ ಕಾರ್ಸೆಟ್‌ ಬ್ಲೌಸ್‌ ಎನ್ನಲಾಗುತ್ತದೆ. ಇನ್ನು ಇದಕ್ಕೆ ಧರಿಸುವ ಲಾಂಗ್‌ ಸ್ಕರ್ಟ್‌ ಥೇಟ್‌ ಲೆಹೆಂಗಾದಂತೆಯೇ ಕಾಣಿಸುತ್ತದೆ. ಡಿಸೈನ್‌ ಕೂಡ ಹಾಗೆಯೇ ಮಾಡಲಾಗಿರುತ್ತದೆ.

Golden Corset Lehenga

ಹುಡುಗಿಯರ ನೆಚ್ಚಿನ ಕಾರ್ಸೆಟ್‌ ಲೆಹೆಂಗಾ

ಅಂದಹಾಗೆ, ಫಿಟ್ನೆಸ್‌ ಫ್ರೀಕ್ಸ್‌ ಹಾಗೂ ಜೆನ್‌ ಜಿ ಹುಡುಗಿಯರು ಈ ಕಾರ್ಸೆಟ್‌ ಲೆಹೆಂಗಾ ಪ್ರಿಯರು. ಇನ್ನು, ಪ್ಲಂಪಿ ಇರುವವರಿಗೆ ಇವು ನಾಟ್‌ ಓಕೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.‌

Star Fashion: ನಟಿ ಮೃಣಾಲ್‌ ಠಾಕೂರ್‌ ರೀತಿ ಬ್ಲ್ಯಾಕ್‌ ಜರ್ದೋಸಿ ಸೀರೆ ಸ್ಟೈಲಿಂಗ್‌ಗೆ ಇಲ್ಲಿವೆ ಟಿಪ್ಸ್

ಕಾರ್ಸೆಟ್‌ ಲೆಹೆಂಗಾ ಪ್ರಿಯರ ಗಮನದಲ್ಲಿರಲಿ

ಕಾರ್ಸೆಟ್‌ ಧರಿಸಲು ಬಯಸುವ ಹುಡುಗಿಯರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಸ್ಟೈಲಿಸ್ಟ್‌ ರಾಜಿ ಅವರು ಈ ಬಗ್ಗೆ ಸಿಂಪಲ್ಲಾಗಿ ತಿಳಿಸಿದ್ದಾರೆ.

  • ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಇವನ್ನು ಆಯ್ಕೆ ಮಾಡಬೇಕು.
  • ಗೋಲ್ಡನ್‌ ವರ್ಕ್‌ ಇರುವಂತವು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
  • ಟಾಲ್‌ ಇರುವವರಿಗೆ ಪರ್ಫೆಕ್ಟ್‌ ಡಿಸೈನರ್‌ವೇರ್‌ ಎನ್ನಬಹುದು.
  • ಸ್ಟ್ರಾಪ್‌ಲೆಸ್‌ ಆದಲ್ಲಿ ಎಕ್ಸ್‌ಫೋಸ್‌ ಆಗುವ ಸಾಧ್ಯತೆ ಹೆಚ್ಚು.
  • ದುಬಾರಿಯಾಗಿರುವುದರಿಂದ ನಿರ್ವಹಣೆ ಸೂಕ್ತ ರೀತಿಯಲ್ಲಿ ಮಾಡಬೇಕು. ‌

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author