ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion: ಸಮ್ಮರ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡ ಸ್ಯಾಟಿನ್‌ ಮಿಡಿ

ಈ ಬಾರಿಯ ಸಮ್ಮರ್‌ನಲ್ಲಿ ಕಾಟನ್‌, ಲೆನಿನ್‌ನವು ಮಾತ್ರವಲ್ಲ, ಸ್ಯಾಟಿನ್‌ ಫ್ಯಾಬ್ರಿಕ್‌ನ ಲೈಟ್‌ವೈಟ್‌ ಮಿಡಿ ಡ್ರೆಸ್‌ಗಳು ಕೂಡ ಟ್ರೆಂಡಿಯಾಗಿವೆ. ಅದರಲ್ಲೂ ತಿಳಿ ವರ್ಣದವು ಹೆಚ್ಚು ಪ್ರಚಲಿತದಲ್ಲಿವೆ. ಯಾವ್ಯಾವ ಬಗೆಯವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

ಚಿತ್ರಗಳು: ಕಾಜಲ್‌ ಅಗರ್‌ವಾಲ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಟಿನ್‌ ಮಿಡಿ ಡ್ರೆಸ್‌ಗಳು ಈ ಬಾರಿಯ ಸಮ್ಮರ್‌ನಲ್ಲಿ (Summer Fashion) ಟ್ರೆಂಡಿಯಾಗಿವೆ. ಹೌದು, ಈ ಬಾರಿಯ ಸಮ್ಮರ್‌ನಲ್ಲಿ ಕಾಟನ್‌ ಹಾಗೂ ಲೆನಿನ್‌ ಫ್ಯಾಬ್ರಿಕ್‌ನ ಮಿಡಿ ಡ್ರೆಸ್‌ಗಳು ಮಾತ್ರವಲ್ಲ, ಸ್ಯಾಟಿನ್‌ ಫ್ಯಾಬ್ರಿಕ್‌ನ ಲೈಟ್‌ವೈಟ್‌ ಮಿಡಿ ಡ್ರೆಸ್‌ಗಳು ಕೂಡ ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ತಿಳಿ ವರ್ಣದವು ಹೆಚ್ಚು ಯುವತಿಯರನ್ನು ಸೆಳೆದಿವೆ.

ನಟಿ ಕಾಜಲ್‌ ಅಗರ್‌ವಾಲ್‌ ಸ್ಯಾಟಿನ್‌ ಮಿಡಿ

ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ಇತ್ತೀಚೆಗೆ ಫ್ಯಾಷನ್‌ ಶೂಟ್‌ವೊಂದರಲ್ಲಿ ಧರಿಸಿದ್ಧ ಸ್ಯಾಟಿನ್‌ ಮಿಡಿ ಡ್ರೆಸ್‌ ಯಾವ ಮಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆಯಿತೆಂದರೇ, ಮಾರುಕಟ್ಟೆಯಲ್ಲಿ ಕೆಲವೇ ಗಂಟೆಗಳಲ್ಲಿ ನಾನಾ ಬಗೆಯ ಸ್ಯಾಟಿನ್‌ ಮಿಡಿ ಡ್ರೆಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಈ ಫ್ಯಾಬ್ರಿಕ್‌ ಇಷ್ಟಪಡುವ ಹುಡುಗಿಯರ ವಾರ್ಡ್ರೋಬ್‌ ಸೇರಿಕೊಂಡವು.

Satin midi

ಸೀಸನ್‌ಗೆ ತಕ್ಕಂತೆ ಬಿಡುಗಡೆಯಾದ ಮಿಡಿ ಡ್ರೆಸ್

ಎಲ್ಲದಕ್ಕಿಂತ ಹೆಚ್ಚಾಗಿ, ಈ ಸಮ್ಮರ್‌ ಸೀಸನ್‌ಗೆ ಮ್ಯಾಚ್‌ ಆಗುವಂತಹ ಸಿಂಪಲ್‌ ಡಿಸೈನ್‌ನಲ್ಲಿ ಮಿಡಿ ಡ್ರೆಸ್‌ಗಳು, ಕ್ಯಾಶುವಲ್‌ ಲುಕ್‌ಗೆ ತಕ್ಕಂತೆ ಹಾಗೂ ನಾನಾ ವಿನ್ಯಾಸದ ನೆಕ್‌ಲೈನ್‌ವಿನ್ಯಾಸದಲ್ಲಿ ಆಗಮಿಸಿದವು ಎನ್ನುವ ಫ್ಯಾಷನ್‌ ವಿಮರ್ಶಕಿ ರಜಿಯಾ ಪ್ರಕಾರ, ಇತ್ತೀಚೆಗಂತೂ ಗ್ಲಾಮರಸ್‌ ಸ್ಯಾಟಿನ್‌ ಮಿಡಿ ಡ್ರೆಸ್‌ಗಳು ಸೆಲೆಬ್ರೆಟಿಗಳನ್ನು ಅಪ್ಪಿಕೊಂಡಿವೆ ಎನ್ನುತ್ತಾರೆ.

Latest Fashion

ಸ್ಯಾಟಿನ್‌ ಮಿಡಿ ಸ್ಪೆಷಾಲಿಟಿ

ಅಂದಹಾಗೆ, ಸ್ಯಾಟಿನ್‌ ಮಿಡಿ ಡ್ರೆಸ್‌ ನೋಡಲು ಅತ್ಯಾಕರ್ಷಕವಾಗಿ ಕಾಣಿಸುವುದರೊಂದಿಗೆ ಧರಿಸಿದಾಗ ಲೈಟ್‌ವೈಟ್‌ ಎಂದೆನಿಸುತ್ತವೆ. ಆದರೆ, ಗಾಳಿಯಾಡುವುದಿಲ್ಲ! ಆದರೆ, ಡಿಸೈನರ್‌ಗಳು ಈ ಸೀಸನ್‌ಗೆ ಹೊಂದುವಂತಹ ಡಿಸೈನ್‌ ಹಾಗೂ ನೆಕ್‌ಲೈನ್‌ ಮ್ಯಾಚ್‌ ಮಾಡಿ ಬಿಡುಗಡೆಗೊಳಿಸುವುದರಿಂದ ಇವನ್ನು ಧರಿಸಿದಾಗ ಎಂತಹವರಿಗೂ ಕಂಫರ್ಟಬಲ್‌ ಫೀಲ್‌ ನೀಡುತ್ತವೆ. ಉದಾಹರಣೆಗೆ., ಹಾಲ್ಟರ್‌ ನೆಕ್‌ಲೈನ್‌ನವು ಶೋಲ್ಡರ್‌ ಹಾಗೂ ಸ್ಲೀವ್‌ ಇಲ್ಲದ ಕಾರಣ ಗಾಳಿಯಾಡುತ್ತವೆ. ಇನ್ನು ಸ್ಲಿವ್‌ಲೆಸ್‌ ಸ್ಯಾಟಿನ್‌ ಮಿಡಿಯೂ ಕೂಡ ಎಲ್ಲರಿಗೂ ಕಂಫರ್ಟಬಲ್‌ ಎಂದೆನಿಸುತ್ತವೆ. ಅದರಲ್ಲೂ ಎಲ್ಲಾ ಮಿಡಿ ಡ್ರೆಸ್‌ಗಳು ಒಪನ್‌ ಡಿಸೈನ್‌ ಹೊಂದಿರುವುದರಿಂದ ಸೆಕೆಯಾಗುವುದಿಲ್ಲ. ಸೋ, ಈ ಸೀಸನ್‌ಗೆ ಇವು ಪರ್ಫೆಕ್ಟ್‌ ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಕ್ಷಾ.

New fashion

ಹುಡುಗಿಯರಿಗೆ ಪ್ರಿಯವಾದ ಎ ಲೈನ್‌ ಸ್ಯಾಟಿನ್‌ ಮಿಡಿ ಡ್ರೆಸ್‌ಗಳು

ಟೂ ಪೀಸ್‌ನ ಎ ಲೈನ್‌ ಸ್ಯಾಟಿನ್‌ ಮಿಡಿಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇವು ಅವರ ಬಾಡಿ ಸ್ಟ್ರಕ್ಚರನ್ನು ಆಕರ್ಷಕವಾಗಿ ಬಿಂಬಿಸುವುದರಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವತಿಯರು ಪಾರ್ಟಿವೇರ್‌ ಹಾಗೂ ಕ್ಯಾಶುವಲ್‌ ಸಂದರ್ಭಗಳಲ್ಲೂ ಇವನ್ನು ಧರಿಸುತ್ತಿದ್ದಾರೆ ಎನ್ನುವ ಸ್ಟೈಲಿಸ್ಟ್‌ ಜೀನತ್‌ ಪ್ರಕಾರ, ಇವುಗಳಲ್ಲಿ ಇದೀಗ ಲಾಂಗ್‌ ಸ್ಕರ್ಟ್ನವು ಚಾಲ್ತಿಯಲ್ಲಿವೆ ಎನ್ನುತ್ತಾರೆ.

Summer Fashion: ಹೀಗಿರಲಿ ಬೇಸಿಗೆಯ ಜಂಪ್‌ಸೂಟ್‌ ಸೆಲೆಕ್ಷನ್‌

ಸ್ಯಾಟಿನ್‌ ಮಿಡಿ ಪ್ರಿಯರ ಗಮನದಲ್ಲಿರಲಿ

* ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಮಿಡಿ ಆಯ್ಕೆ ಮಾಡಿ.

* ಸಮ್ಮರ್‌ಗೆ ಹೇಳಿ ಮಾಡಿಸಿದ ಉಡುಗೆಯಿದು.

* ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.

* ಗೋಲ್ಡನ್‌ ಹಾಗೂ ರೋಸ್‌ ಶೇಡ್‌ನ ಸ್ಯಾಟಿನ್‌ ಮಿಡಿಗಳು ಟ್ರೆಂಡಿಯಾಗಿವೆ.

* ಸ್ಲಿವ್‌ಲೆಸ್‌ ಹಾಗೂ ಹಾಲ್ಟರ್‌ ನೆಕ್‌ಲೈನ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author