- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನಲ್ಲಿ ವೈವಿಧ್ಯಮಯ ಬ್ಲೌಸ್ ಡಿಸೈನ್‌ಗಳು (Summer Saree Blouses) ಎಂಟ್ರಿ ನೀಡಿವೆ. ಸೀರೆ ಪ್ರಿಯ ಮಾನಿನಿಯರಿಗೆ ಗ್ಲಾಮರಸ್ ಟಚ್ ನೀಡಿವೆ. ಹೌದು, ಈ ಸೀಸನ್‌ನಲ್ಲಿ ಫುಲ್ ಸ್ಲೀವ್ ಹಾಗೂ ಕಂಪ್ಲೀಟ್ ಕವರ್ ಆಗುವ ಸೀರೆ ಬ್ಲೌಸ್‌ಗಳು ಸೈಡಿಗೆ ಸರಿದಿದ್ದು, ಬದಲಿಗೆ ಧರಿಸಿದಾಗ, ಆರಾಮ ಎಂದೆನಿಸುವ ಗಾಳಿಯಾಡುವಂತಹ ಡಿಸೈನ್‌ನ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಅವುಗಳಲ್ಲಿ, ಅತಿ ಹೆಚ್ಚಾಗಿ ಬಗೆಬಗೆಯ ಬ್ಯಾಕ್‌ಲೆಸ್ ಬ್ಲೌಸ್‌ಗಳು, ಆಫ್ ಶೋಲ್ಡರ್ ಹಾಗೂ ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳು, ಸ್ಲೀವ್ ಲೆಸ್ ಬ್ಲೌಸ್‌ಗಳು, ಹಾಲ್ಟರ್ ನೆಕ್ ಬ್ಲೌಸ್‌ಗಳು ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಬ್ಲೌಸ್ ಡಿಸೈನರ್ ಮಾಲಾ.

ಬ್ಯಾಕ್‌ಲೆಸ್ ಬ್ಲೌಸ್‌ಗಳ ಜಾದೂ
ಬ್ಯಾಕ್‌ಲೆಸ್ ವಿನ್ಯಾಸದಲ್ಲಿ ಅಸ್ಸೆಮ್ಮಿಟ್ರಿಕಲ್, ಸರ್ಕಲ್, ಸೆಮಿ ಸರ್ಕಲ್, ಟ್ರಯಾಂಗಲ್, ರೆಕ್ಟಾಂಗಲ್, ಸ್ಕ್ವೇರ್, ಪಿರಮಿಡ್ ವಿನ್ಯಾಸ ಸೇರಿದಂತೆ ಊಹೆಗೂ ಮೀರಿದ ಕಟೌಟ್ ವಿನ್ಯಾಸಗಳು ಚಾಲ್ತಿಯಲ್ಲಿವೆ ಹಾಗೂ ಪಾಪುಲರ್ ಆಗಿವೆ. ಅಂದಹಾಗೆ, ಈ ವಿನ್ಯಾಸ ಕೇವಲ ಪಾರ್ಟಿವೇರ್ ಸೀರೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಎಥ್ನಿಕ್ ಸೀರೆಗಳ ಬ್ಲೌಸ್‌ಗಳಲ್ಲೂ ಕಾಣಿಸಿಕೊಂಡಿವೆ.
ಕೋಲ್ಡ್ ಶೋಲ್ಡರ್ ಬ್ಲೌಸ್
ಶೋಲ್ಡರ್ ಡಿಸೈನ್‌ನಲ್ಲಿ ಕಟ್ ಆಗಿ ಡಿಸೈನ್ ಮಾಡಿರುವಂತಹ ಬ್ಲೌಸ್‌ಗಳಿವು. ಇವು ಈ ಮೊದಲು ವೆಸ್ಟರ್ನ್ ಟಾಪ್‌ಗಳಲ್ಲಿ ಟ್ರೆಂಡಿಯಾಗಿದ್ದವು. ಇದೀಗ ಬ್ಲೌಸ್ ವಿನ್ಯಾಸದಲ್ಲೂ ಕಾಣಿಸಿಕೊಂಡಿವೆ. ಟೀನೇಜ್ ಹಾಗೂ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಇವು ಆಕರ್ಷಿಸಿವೆ. ಇಂಡೋ -ವೆಸ್ಟರ್ನ್ ಲುಕ್‌ಗೆ ಸಾಥ್ ನೀಡಿವೆ. ಮೊದಲಿಗೆ ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳು ಬಂದಾಗ ನಿರೀಕ್ಷೆಯ ಮಟ್ಟಿಗೆ ಸ್ವಾಗತ ಸಿಕ್ಕಿರಲಿಲ್ಲ. ಆದರೆ, ಬರಬರುತ್ತಾ ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳು ಮಾಡರ್ನ್ ಲುಕ್ ಬಯಸುವ ಹುಡುಗಿಯರಿಗೆ ಪ್ರಿಯವಾದವು ಎನ್ನುತ್ತಾರೆ ಡಿಸೈನರ್ಸ್.

ಸ್ಲೀವ್‌ಲೆಸ್ ಬ್ಲೌಸ್ ಕಮಾಲ್
ಇವನ್ನು ಎವರ್‌ಗ್ರೀನ್ ಡಿಸೈನ್‌ನ ಬ್ಲೌಸ್ ಎನ್ನಬಹುದು. ಪ್ರತಿ ಬಾರಿ ಈ ಸಮ್ಮರ್ ಸೀಸನ್‌ನಲ್ಲಿ ಎಂಟ್ರಿ ನೀಡುತ್ತವೆ. ಅಲ್ಲದೇ, ಮಾಡರ್ನ್ ಲುಕ್ ಬಯಸುವವರಿಗೆ ಗ್ಲಾಮರಸ್ ಲುಕ್ ನೀಡುತ್ತವೆ. ಇವುಗಳಲ್ಲಿ ಇದೀಗ ಸ್ಟ್ರಾಪ್ ಡಿಸೈನ್, ಟ್ಯಾಂಕ್ ಟಾಪ್ ಡಿಸೈನಂತವು ಟ್ರೆಂಡಿಯಾಗಿವೆ.
ಆಕರ್ಷಕ ಕಟೌಟ್ ಬ್ಲೌಸ್
ಸದ್ಯ ಟ್ರೆಂಡ್‌ನಲ್ಲಿರುವ ಬ್ಲೌಸ್ ಡಿಸೈನ್‌ಗಳಿವು. ಬ್ಲೌಸ್‌ನ ಯಾವ ಭಾಗದಲ್ಲಾದರೂ ಕಟೌಟ್ ಡಿಸೈನ್ ಮಾಡಿಸಬಹುದು. ಇವು ಉದ್ದಗಿರುವವರಿಗೆ ಓಕೆ. ಅದರಲ್ಲೂ ತೆಳ್ಳಗಿರುವವರಿಗೆ ಆಕರ್ಷಕವಾಗಿ ಕಾಣುತ್ತವೆ. ದಪ್ಪಗಿರುವವರಿಗೆ ಫಿಟ್ ಆಗಿ ಕಾಣುತ್ತದಾದರೂ ಬೊಜ್ಜು ಕಾಣಬಹುದು ಎನ್ನುತ್ತಾರೆ ಬ್ಲೌಸ್ ಡಿಸೈನರ್ ಮಾಲಾ.

ಹಾಲ್ಟರ್ ನೆಕ್ ಬ್ಲೌಸ್
ಬಾಲಿವುಡ್ ತಾರೆಯರು ಮಾತ್ರವಲ್ಲ, ಇದೀಗ ಸ್ಯಾಂಡಲ್‌ವುಡ್ ತಾರೆಯರು ಕೂಡ ಹಾಲ್ಟರ್ ನೆಕ್ ಬ್ಲೌಸ್ ಪ್ರೇಮಿಗಳು. ಇದನ್ನು ಧರಿಸಿದಾಗ ಗ್ಲಾಮರಸ್ ಆಗಿ ಕಾಣಿಸುವುದರೊಂದಿಗೆ ಮಾಡರ್ನ್ ಲುಕ್ ಕೂಡ ಪಡೆಯಬಹುದು ಎನ್ನುತ್ತಾರೆ ಡಿಸೈನರ್ಸ್.
ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್
ಬೇಸಿಗೆ ಬ್ಲೌಸ್ ಪ್ರಿಯರಿಗೆ ಒಂದಿಷ್ಟು ಸಲಹೆ
- ಪರ್ಸನಾಲಿಟಿಗೆ ತಕ್ಕಂತೆ ಬ್ಲೌಸ್ ಚೂಸ್ ಮಾಡಿ.
- ಔಟ್‌ಲುಕ್‌ಗೆ ತಕ್ಕಂತೆ ಬ್ಲೌಸ್ ಹೊಲೆಸಿ.
- ಇಂಡೋ-ವೆಸ್ಟರ್ನ್ ಲುಕ್‌ಗೆ ಈ ಬ್ಲೌಸ್‌ಗಳು ಬೆಸ್ಟ್ ಮೇಕೋವರ್ ಎನ್ನಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)