ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ugadi Styling Ideas 2026: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ 5 ಸ್ಟೈಲಿಂಗ್ ಐಡಿಯಾ

Ugadi Styling Ideas: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ ಲುಕ್ ನಿಮ್ಮದಾಗಬೇಕೇ! ಹಾಗಾದಲ್ಲಿ ಈ 5 ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಡೈರೆಕ್ಟರ್ ಪ್ರತಿಭಾ ಸಂಶಿಮಠ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಪ್ರತಿಭಾ ಸಂಶಿಮಠ & ಟೀಮ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ ಹಬ್ಬಕ್ಕೆ ನೀವು ನೋಡಲು ಆಕರ್ಷಕವಾಗಿ ಕಾಣಿಸಬೇಕೇ! ಹಾಗಾದಲ್ಲಿ ಒಂದಿಷ್ಟು ಸಿಂಪಲ್ ಟಿಪ್ಸ್ ಅಥವಾ ಐಡಿಯಾ (Ugadi Styling Ideas 2026) ಫಾಲೋ ಮಾಡಿ ಎನ್ನುತ್ತಾರೆ ಮಿಸೆಸ್ ಇಂಡಿಯಾ ಡೈರೆಕ್ಟರ್ (ಆಸ್ಟ್ರಲ್) ಪ್ರತಿಭಾ ಸಂಶಿಮಠ.

ಮೊದಲು ಲುಕ್ ಬಗ್ಗೆ ಪ್ಲ್ಯಾನ್ ಮಾಡಿ

ನೀವು ಹಬ್ಬದಂದು ಯಾವ ಲುಕ್‌ನಲ್ಲಿ ಕಾಣಿಸಲು ಬಯಸುತ್ತೀರಿ? ಟ್ರೆಡಿಷನಲ್ಲಾ ಅಥವಾ ಇಂಡೋ-ವೆಸ್ಟರ್ನಾ ಎಂಬುದನ್ನು ಮೊದಲು ಪ್ಲ್ಯಾನ್ ಮಾಡಿ. ನಂತರ ನಿಮ್ಮ ಲುಕ್‌ಗೆ ತಕ್ಕಂತೆ ಮೇಕಪ್, ಹೇರ್‌ಸ್ಟೈಲ್, ಜ್ಯುವೆಲರಿ ಎಲ್ಲವನ್ನು ಪ್ಲ್ಯಾನ್ ಮಾಡಬಹುದು.

Ugadi Styling Ideas

ಗ್ರ್ಯಾಂಡ್ ಲುಕ್‌ಗೆ ಗ್ರ್ಯಾಂಡ್ ಸೀರೆ/ಡಿಸೈನರ್‌ವೇರ್ಸ್

ನಿಮ್ಮ ಲುಕ್ ಗ್ರ್ಯಾಂಡ್ ಬೇಕಿದ್ದಲ್ಲಿ ಆದಷ್ಟೂ ಹೆವಿ ಡಿಸೈನ್‌ನ ಸೀರೆ/ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಬ್ರೋಕೆಡ್, ಸಾಟಿನ್ ಬನಾರಸ್, ಗೋಲ್ಡನ್ ಹಾಗೂ ಸಿಲ್ವರ್ ಡಿಸೈನ್ ಇರುವಂತಹ ವರ್ಕ್‌ನಂತವನ್ನು ಆಯ್ಕೆ ಮಾಡಿ ಧರಿಸಿ.

Ugadi Styling

ನಿಮ್ಮ ಡಿಸೈನರ್‌ವೇರ್ಸ್ ಅಥವಾ ಸೀರೆಗೆ ತಕ್ಕಂತೆ ಮೇಕಪ್

ಮೊದಲಿಗೆ ನಿಮ್ಮ ಡಿಸೈನರ್‌ವೇರ್ ಅಥವಾ ಸೀರೆಗೆ ತಕ್ಕಂತೆ ಮೇಕಪ್ ನಿರ್ಧಾರ ಮಾಡಿ. ಮುಖದ ಮೇಕಪ್, ನಿಮ್ಮ ಡಿಸೈನರ್ವೇರ್ ಅಥವಾ ಸೀರೆಯ ಕಲರ್‌ಗೆ ಹೊಂದಬೇಕು. ಆಯಾ ಔಟ್‌ಫಿಟ್‌ಗೆ ತಕ್ಕಂತೆ ಮೇಕಪ್ ನಿರ್ಧಾರವಾಗಬೇಕು.

Styling Tips

ಅತ್ಯಾಕರ್ಷಕ ಹೇರ್‌ಸ್ಟೈಲ್ ಮ್ಯಾಚಿಂಗ್

ನೀವು ಧರಿಸುವ ಸೀರೆ ಅಥವಾ ಡಿಸೈನರ್‌ವೇರ್‌ಗೆ ಹೊಂದುವಂತಹ ಹೇರ್‌ಸ್ಟೈಲ್ ಮಾಡುವುದು ಮುಖ್ಯ. ಮೇಕಪ್‌ನೊಂದಿಗೆ ಹೇರ್‌ಸ್ಟೈಲ್ ಕೂಡ ಮ್ಯಾಚ್ ಆಗಬೇಕು. ನಿಮ್ಮ ವಧನಕ್ಕೆ ಹೊಂದುವಂತಹ ಸ್ಟೈಲಿಂಗ್ ಮಾಡಿ. ಅದು ಟ್ರೆಡಿಷನಲ್ ಆಗಬಹುದು ಅಥವಾ ಇಂಡೋ-ವೆಸ್ಟರ್ನ್ ಲುಕ್ ಆಗಬಹುದು.

Ugadi Shopping Tips 2026: ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ನಿಮ್ಮ ಸೀರೆ / ಡಿಸೈನರ್‌ವೇರ್‌ಗೆ ತಕ್ಕಂತೆ ಜ್ಯುವೆಲರಿ ಅಲಂಕಾರ

ಹಬ್ಬದ ದಿನದಂದು ಧರಿಸುವ ಡಿಸೈನರ್‌ವೇರ್‌ಗಳಿಗೆ ತಕ್ಕಂತೆ ಜ್ಯುವೆಲರಿಗಳನ್ನು ಧರಿಸಿದಾಗ ಮಾತ್ರ ಕಂಪ್ಲೀಟ್ ಲುಕ್ ನಿಮ್ಮದಾಗುವುದು. ವೆಸ್ಟರ್ನ್ವೇರ್ಗೆ ಧರಿಸುವ ಜಂಕ್ ಹಾಗೂ ಫಂಕಿ ಜ್ಯುವೆಲರಿಗಳನ್ನು ಇಂಡೋ-ವೆಸ್ಟರ್ನ್ ಲುಕ್‌ಗೆ ಧರಿಸಿ. ಟ್ರೆಡಿಷನಲ್ ಗೋಲ್ಡನ್ ಜ್ಯುವೆಲರಿಗಳನ್ನು ಟ್ರೆಡಿಷನಲ್ ಲುಕ್‌ಗೆ ಧರಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author