Winter Jacket Styling 2025: ಚಳಿಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್ ಆಗಿ ಕಾಣಿಸಲು ಇಲ್ಲಿದೆ ಸಿಂಪಲ್ ಐಡಿಯಾ
Winter Jacket Styling 2025: ಚಳಿಗಾಲದಲ್ಲಿ ಜಾಕೆಟ್ ಧರಿಸಿದಾಗ ಎಲ್ಲಾ ಉಡುಪುಗಳು ಒಂದೇ ರೀತಿಯಲ್ಲಿ ಕಾಣಿಸುತ್ತವೆ. ಹಾಗಾದಲ್ಲಿ, ಜಾಕೆಟ್‌ನಲ್ಲೂ ಭಿನ್ನ-ವಿಭಿನ್ನವಾಗಿ ಸ್ಟೈಲಿಶ್ ಆಗಿ ಹೇಗೆ ಕಾಣಿಸಬಹುದು? ಇಲ್ಲಿದೆ ಸ್ಟೈಲಿಸ್ಟ್‌ಗಳ ಸಿಂಪಲ್ ಟಿಪ್ಸ್ .
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಔಟ್‌ಫಿಟ್‌ಗಳ ಮೇಲೆ ಜಾಕೆಟ್ ಧರಿಸಿಯೂ ಸ್ಟೈಲಿಶ್ ಆಗಿ ಕಾಣಿಸಬಹುದು. ಹೌದು, ಹಾಗೆನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ವಿಂಟರ್‌ನಲ್ಲಿ (Winter Jacket Styling 2025) ಹೊರಗೆ ಹೋಗುವಾಗ ಜಾಕೆಟ್ ಧರಿಸುವುದು ಸಾಮಾನ್ಯ. ಆದರೆ, ಪ್ರತಿ ಬಾರಿಯೂ ಒಂದೇ ಲುಕ್‌ನಲ್ಲಿ ಕಾಣಿಸುವುದು ಸಾಮಾನ್ಯ. ಹಾಗೆಂದು, ಎಲ್ಲರ ಬಳಿಯಲ್ಲೂ ಒಂದೊಂದು ಉಡುಪಿಗೂ ಒಂದೊಂದು ಜಾಕೆಟ್ ಸಂಗ್ರಹವಿರುವುದಿಲ್ಲ. ಬದಲಿಗೆ ಒಂದೆರೆಡು ಜಾಕೆಟ್‌ಗಳಲ್ಲೇ ಇಡೀ ವಿಂಟರ್ ಸೀಸನ್ ಕಳೆಯಬೇಕಾಗುತ್ತದೆ. ಅಂತಹವರೂ ಕೂಡ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿದಲ್ಲಿ, ಜಾಕೆಟ್ ಧರಿಸಿದ ಮೇಲೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಸ್ಟೈಲಿಂಗ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ ಹರ್ಷ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ವೆಸ್ಟರ್ನ್ ಉಡುಪಿಗೆ ಜಾಕೆಟ್
ವೆಸ್ಟರ್ನ್ ಹಾಗೂ ಯಾವುದೇ ಕ್ಯಾಶುವಲ್ ಉಡುಪಿನ ಮೇಲೆ ಜಾಕೆಟ್ ಧರಿಸುವಂತವರು ಆದಷ್ಟೂ ಕಂಟೆಂಪರರಿ ಡಿಸೈನ್‌ನ ಜಾಕೆಟ್ ಧರಿಸುವುದು ಉತ್ತಮ. ಅದರಲ್ಲೂ ಧರಿಸುವ ಉಡುಪಿಗೆ ಜಾಕೆಟ್ ಹೊಂದುವುದು ಮುಖ್ಯ.
ಜಾಕೆಟ್ ಜತೆ ಅತಿಯಾದ ಆಕ್ಸೆಸರೀಸ್ ಬೇಡ
ಜಾಕೆಟ್ ಧರಿಸಿದಾಗ ಆದಷ್ಟೂ ಆಕ್ಸೆಸರೀಸ್ ಆವಾಯ್ಡ್ ಮಾಡಿ. ಯಾಕೆಂದರೆ, ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಆಕ್ಸೆಸರೀಸ್ ಧರಿಸದಿದ್ದರೂ ಓಕೆ.
ಟ್ರೆಡಿಷನಲ್ ಡ್ರೆಸ್‌ಗೆ ಜಾಕೆಟ್
ಟ್ರೆಡಿಷನಲ್ ಡ್ರೆಸ್‌ಗೆ ವೆಸ್ಟರ್ನ್ ಲುಕ್ ನೀಡುವ ಜಾಕೆಟ್ ಆಷ್ಟಾಗಿ ಹೊಂದದು. ಆದರೂ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮೇಕೋವರ್ ಮಾಡಿದಲ್ಲಿ ನೋಡಲು ಅಂದವಾಗಿ ಬಿಂಬಿಸಬಹುದು.
ಬಿಂದಾಸ್ ಫಂಕಿ ಲುಕ್ ಜಾಕೆಟ್‌ಗಾದಲ್ಲಿ
ಬಿಂದಾಸ್ ಹಾಗೂ ಅಲ್ಟ್ರಾ ಮಾಡರ್ನ್ ಫಂಕಿ ಲುಕ್ ಇರುವಂತಹ ಜಾಕೆಟ್‌ಗಳನ್ನು ಧರಿಸುವುದಾದಲ್ಲಿ ಆದಷ್ಟೂ ವೆಸ್ಟರ್ನ್ ಲುಕ್ ಉಡುಪುಗಳನ್ನೇ ಮ್ಯಾಚ್ ಮಾಡಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ | Stars Sankranti Celebration 2025: ಟ್ರೆಡಿಷನಲ್ ಲುಕ್‌ನಲ್ಲಿ ಸಂಕ್ರಾಂತಿ ಆಚರಿಸಿದ ಸೆಲೆಬ್ರಿಟಿಗಳು
ಜಾಕೆಟ್ ಸೀರೆ
ಸೀರೆಗೂ ಜಾಕೆಟ್ ಧರಿಸಬಹುದು. ಪಲ್ಲುವನ್ನು ಜಾಕೆಟ್ ಮೇಲೆ ಡ್ರೆಪ್ ಮಾಡಿದಲ್ಲಿ ಜಾಕೆಟ್ ಸೀರೆಯಂತೆ ಕಾಣಿಸಬಲ್ಲದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)