ವಾಷಿಂಗ್ಟನ್: ರಷ್ಯಾದ ಇಂಧನ (Russian oil and gas) ಖರೀದಿದಾರರ ಮೇಲೆ ನಿರ್ಬಂಧ ವಿಧಿಸಲು ಮತ್ತು ಇರಾನ್ (Iran) ಮೇಲೆ ದಂಡನಾತ್ಮಕ ಕ್ರಮಗಳನ್ನು ಮುಂದುವರಿಸಲು ಅಮೆರಿಕ ಸೆನೆಟ್ (US Senate) ಬಹುನಿರೀಕ್ಷಿತ ದ್ವಿಪಕ್ಷೀಯ ಮಸೂದೆಯನ್ನು (Sanctions Bill) ಮಂಡಿಸಿದೆ. ಈ ಮಸೂದೆಗಳು ಇತ್ತೀಚೆಗೆ ನಿಧನರಾಗಿರುವ ಸೆನೆಟರ್ ಲಿಂಡ್ಸೆ ಗ್ರಹಾಂ (Senator Lindsey Graham) ಪ್ರತಿಪಾದಿಸಿರುವ ಅಂಶಗಳನ್ನು ಒಳಗೊಂಡಿದೆ. ಈ ಮಸೂದೆಯು ಭಾರತ, ಚೀನಾ ಸೇರಿದಂತೆ ರಷ್ಯಾದಿಂದ ಇಂಧನ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಕಾಶ ನೀಡಲಿದೆ.
ಅಮೆರಿಕ ಸೆನೆಟ್ ನಲ್ಲಿ ಮಂಡಿಸಲಾಗಿರುವ ದ್ವಿಪಕ್ಷೀಯ ಮಸೂದೆಗೆ ಬಹುತೇಕ ಎಲ್ಲಾ ರಿಪಬ್ಲಿಕನ್ನರು ಮತ್ತು ಬಹುಪಾಲು ಡೆಮೋಕ್ರಾಟ್‌ಗಳು ಬೆಂಬಲಿಸಿದ್ದಾರೆ. ಸೆನೆಟ್‌ನಲ್ಲಿ ಮಸೂದೆ ಅಂಗೀಕಾರಗೊಂಡ ಕೆಲವೇ ಗಂಟೆಗಳ ಬಳಿಕ ಸೆನೆಟರ್‌ಗಳು ಅವರಿಗೆ ಗೌರವ ಸಲ್ಲಿಸಲು ಕ್ಯಾಪಿಟಲ್ ಹಿಲ್‌ಗೆ ಹೋದಾಗ ಅಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದರು.
ನಮ್ಮಲ್ಲಿ ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರಿಲ್ಲ: ಸಚಿವ ಎಂ.ಬಿ. ಪಾಟೀಲ್
ಅಮೆರಿಕ ಸೆನೆಟ್ ನಲ್ಲಿ ಮಂಡಿಸಲಾದ ಮಸೂದೆಯು ರಷ್ಯಾದ ಅತೀ ದೊಡ್ಡ ಇಂಧನ ಖರೀದಿದಾರ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಾ ಮೇಲೆ ಪರಿಣಾಮ ಬೀರಲಿದೆ. ರಷ್ಯಾದ ತೈಲ ಮತ್ತು ಅನಿಲದ ಪ್ರಮುಖ ಖರೀದಿದಾರ ರಾಷ್ಟ್ರಗಳಾಗಿರುವ ಚೀನಾ ಮತ್ತು ಭಾರತದ ಸರಕುಗಳ ಮೇಲೆ ಶೇಕಡಾ 100 ರಷ್ಟು ಸುಂಕವನ್ನು ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ಮಸೂದೆಯಿಂದ ಅಧಿಕಾರ ಸಿಗಲಿದೆ.
ಈ ಮಸೂದೆಯ ಅನ್ವಯ ರಷ್ಯಾದಿಂದ ನೈಸರ್ಗಿಕ ಅನಿಲದ ಶೇಕಡಾ 15 ಕ್ಕಿಂತ ಕಡಿಮೆ ಆಮದು ಮಾಡಿಕೊಳ್ಳುವ ಮತ್ತು ಆ ಆಮದುಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ದೇಶಗಳಿಗೆ ವಿನಾಯಿತಿ ನೀಡಲಿದೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಇರಾನ್‌ನ ಇಂಧನ ಮತ್ತು ಶಸ್ತ್ರಾಸ್ತ್ರ ವಲಯಗಳಿಗೆ ಹಣವನ್ನು ನಿರ್ಬಂಧಿಸುವ ಅಧಿಕಾರವನ್ನು ಕೂಡ ಈ ಮಸೂದೆ ಒಳಗೊಂಡಿದೆ.
ಈ ಮಸೂದೆಗೆ ಲಿಂಡ್ಸೆ ಗ್ರಹಾಂ ಅವರ ಹೆಸರನ್ನು ಇಡಲಾಗಿದೆ. ಈ ಮಸೂದೆಗೆ ಬೆಂಬಲವನ್ನು ಪಡೆಯಲು ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಅವರ ಸಾವಿಗೂ ಕೆಲವು ಸಮಯದ ಮೊದಲು ಇದರ ಪರಿಷ್ಕೃತ ಆವೃತ್ತಿಗೆ ಶ್ವೇತಭವನದಲ್ಲಿ ಒಪ್ಪಿಗೆ ನೀಡಲಾಗಿತ್ತು.
ಈ ಮಸೂದೆಯ ಮುಖ್ಯ ಉದ್ದೇಶ ರಷ್ಯಾಕ್ಕೆ ಬರುವ ಇಂಧನದ ಆದಾಯವನ್ನು ನಿಯಂತ್ರಿಸುವುದಾಗಿದೆ. ಇದರಿಂದ ಉಕ್ರೇನ್ ವಿರುದ್ದದ ರಷ್ಯಾದ ಯುದ್ಧಕ್ಕೆ ಹಣಕಾಸು ಸೌಲಭ್ಯ ಸಿಗುವುದಿಲ್ಲ. ಇದರಿಂದ ಎರಡು ರಾಷ್ಟ್ರಗಳು ಪರಸ್ಪರ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದು ಸೆನೆಟರ್ ಗ್ರಹಾಂ ಅವರ ಅಭಿಪ್ರಾಯವಾಗಿತ್ತು. ಇದನ್ನು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸೆನೆಟರ್‌ಗಳು ಕೂಡ ಒಪ್ಪಿಕೊಂಡಿದ್ದಾರೆ.
ಆದರೂ ಕೆಲವು ಡೆಮೊಕ್ರಾಟ್ ಗಳು ಈ ಮಸೂದೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ರಷ್ಯಾವನ್ನು ಶಿಕ್ಷಿಸಲು ಸಾಕಷ್ಟು ಅವಕಾಶವಿದ್ದರೂ ಸುಂಕ ಹೇರಿಕೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೆಚ್ಚಿನ ಅಧಿಕಾರ ನೀಡಿದೆ. ಇದರಿಂದ ಅಮೆರಿಕನ್ ಗ್ರಾಹಕರಿಗೆ ಆಮದು ವೆಚ್ಚ ಹೆಚ್ಚುತ್ತದೆ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳಿಗೆ ನಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
Madhugiri News: ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸಲು ಅಗತ್ಯ ಕಠಿಣ ಕ್ರಮ: ಕೆ.ಎನ್. ರಾಜಣ್ಣ
ಈ ಮಸೂದೆಯು ಸೆಪ್ಟೆಂಬರ್ ಬಳಿಕ ಕಾನೂನು ಆಗುವ ನಿರೀಕ್ಷೆ ಇದೆ. ಮಸೂದೆಯು ಅಧ್ಯಕ್ಷರ ಸಹಿಗೂ ಮೊದಲು ಸೆನೆಟ್‌ನಲ್ಲಿ ಅಂಗೀಕಾರವಾಗಿ ಪ್ರತಿನಿಧಿ ಸಭೆಯಿಂದ ಅನುಮೋದನೆ ಪಡೆಯಬೇಕಿದೆ.